ತಾಳಿಕೋಟಿ: ಐತಿಹಾಸಿಕ ನಗರ ತಾಳಿಕೋಟಿ ಪಟ್ಟಣದಲ್ಲಿರುವ ಖಾಸ್ಗತೇಶ್ವರ ಮಠದ ಕೀರ್ತಿ ರಾಜ್ಯದಾದ್ಯಂತ ಬೆಳಗುತ್ತಿದೆ ಎಂದು ಮುದ್ದೇಬಿಹಾಳ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.
ತಾಳಿಕೋಟಿ ಪಟ್ಟಣದ ಐತಿಹಾಸಿಕ ಖಾಸ್ಗತೇಶ್ವರ ಮಠಕ್ಕೆ ಭಾನುವಾರ ಭೇಟಿ ನೀಡಿ ಶ್ರೀ ಮಠದ ಪೀಠಾಧಿಕಾರಿ ಸಿದ್ಧಲಿಂಗ ದೇವರಿಂದ ಆಶೀರ್ವಾದ ಪಡೆದುಕೊಂಡು ಅವರು ಅಜ್ಜನ ಜಾತ್ರೆಯ ಕುರಿತು ಮಾತನಾಡಿದರು.
ಪ್ರಸಾದದ ವ್ಯವಸ್ಥೆ ವಿಶಿಷ್ಟತೆ ಕುರಿತು ಅನಿಸಿಕೆ ಹಂಚಿಕೊಂಡ ಅವರು, ಆರೋಗ್ಯ ಜಾತ್ರೆ, ಪಾನಿಪುರಿ ಜಾತ್ರೆ ಸೇರಿದಂತೆ ಹಲವು ವಿಶೇಷತೆಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.ಇಡೀ ತಾಳಿಕೋಟಿ ನಗರ ಅಜ್ಜನ ಜಾತ್ರೆಯ ಸಡಗರದಲ್ಲಿ ಮಿಂದೇಳುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಮಾಜಿ ನಿರ್ದೇಶಕಿ ಶ್ರೀದೇವಿ ಮದರಿ, ಶ್ರೀಮತಿ ಶ್ರೀಶ್ರದ್ಧಾ ಕಿರಣ ಮದರಿ, ಹಾಗೂ ಮದರಿ ಅವರ ಪುತ್ರಿಯರು ಇದ್ದರು.