ಕುಳಗೇರಿ ಕ್ರಾಸ್: ಗ್ರಾಮದ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಪಾದಚಾರಿ ಮೃತಪಟ್ಟಿರುವ ಘಟನೆ ನಡೆದಿದೆ.
ಗ್ರಾಮದ ಕೆಇಬಿ ಹತ್ತಿರ ಮಂಗಳವಾರ ರಾತ್ರಿ ಸಂಭವಿಸಿದ ಈ ಅಪಘಾತದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿದ್ದು ಕುಷ್ಟಗಿ ತಾಲೂಕಿನ ನಿಲೂಗಲ್ ಗ್ರಾಮದ ಸುರೇಶ ಯಮನಪ್ಪ ಈಳಗೇರ-44 ಮೃತಪಟ್ಟಿದ್ದಾರೆ.
ನಿಲುಗಲ್ ಗ್ರಾಮದಿಂದ ತಮ್ಮ ಸಹೋದರಿ ಇರುವ ಮಮಟಗೇರಿ ಗ್ರಾಮಕ್ಕೆ ಹೋಗುತ್ತಿದ್ದ ಎನ್ನಲಾಗಿದೆ.
ಮಮಟಗೇರಿ ಗ್ರಾಮಕ್ಕೆ ಹೋಗಲು ಬಸ್ ಇರದು ಕಾರಣ ರಾಷ್ಟ್ರೀಯ ಹೆದ್ದಾರಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಸ್ಥಳಿಯ ಪೊಲೀಸರು ಸೇರಿದಂತೆ ಸ್ಥಳಕ್ಕೆ ಬಾದಾಮಿ ಪಿಎಸ್ಐ ವಿಠಲ್ ನಾಯಕ್ ಬೇಟಿ ಕೊಟ್ಟಿದ್ದು ಪರಿಶೀಲನೆ ನಡೆಸಿದ್ದಾರೆ.