ಮುದ್ದೇಬಿಹಾಳ : ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಕೈಲಾಸವನದಲ್ಲಿರುವ ಗಜದಂಡ ಶಿವಾಚಾರ್ಯರು ಹಾಗೂ ಸದಾಶಿವ ಮಹಾರಾಜರ ಮಠದಲ್ಲಿ ಜು.10 ರಂದು ಬೆಳಗ್ಗೆ ಗುರುಪೌರ್ಣಿಮೆ ನಿಮಿತ್ಯ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬೆಳಗ್ಗೆ 5.30ಕ್ಕೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬೆಳಕ್ಕೆ 8ಕ್ಕೆ ಕಿಲ್ಲಾದ ಕಾಳಿಕಾದೇವಿ ಮಂದಿರದಿಂದ ಪೂರ್ಣಕುಂಭ ಮೆರವಣಿಗೆ, ಮದ್ಯಾಹ್ನ 12.30ಕ್ಕೆ ಧರ್ಮಸಭೆ ನಡೆಯಲಿದೆ.
ಹಿರೂರ ಅನ್ನದಾನೇಶ್ವರ ಮಠದ ಜಯಸಿದ್ಧೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ, ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು, ಸರೂರು ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ,ಕನ್ನೂರು ಸಿದ್ಧಲಿಂಗೇಶ್ವರ ಮಠದ ಚಂದ್ರಶೇಖರ ಮಹಾರಾಜರು, ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನದ ಸಾಧು ಸಂತರು ಆಗಮಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.