Guru Vandana Program at Sri Guru Durudundeshwar Viraktamaha Math

ಶ್ರೀ ಗುರು ದುರುದುಂಡೇಶ್ವರ ವಿರಕ್ತಮಹಾಮಠದಲ್ಲಿ ಗುರು ವಂದನಾ ಕಾರ್ಯಕ್ರಮ

ಶ್ರೀ ಗುರು ದುರುದುಂಡೇಶ್ವರ ವಿರಕ್ತಮಹಾಮಠದಲ್ಲಿ ಗುರು ವಂದನಾ ಕಾರ್ಯಕ್ರಮ

ಕೊಡೇಕಲ್: ಶ್ರೀ ಗುರು ವಿರಕ್ತಮಹಾಮಠದಲ್ಲಿ ಗುರು ಪೌರ್ಣಿಮಾ ನಿಮಿತ್ತವಾಗಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗುರು ಶ್ರದ್ದೆಯೇ ಬದುಕಿನ ಗುರುತ್ವಾಕರ್ಷಣೆ ಶಕ್ತಿ: ಶಿವಕುಮಾರ ಶ್ರೀ

ಮಾನವೀಯ ವ್ಯಕ್ತಿತ್ವದಲ್ಲಿ ಸಮಾಜ ಸೇವೆ, ಗುರುಸೇವೆ, ಭಗವದ್ ಸೇವೆ ಹೀಗೆ ಸೇವಾ ಮುಖಗಳಲ್ಲಿ ಸೇವಾ ನಿಷ್ಟತೆಯೇ ಆಧ್ಯಾತ್ಮಿಕ ಪರಂಪರೆಯ ಗುರು ಸೇವಾ, ಗುರು ವಂದನಾ ಧಾರ್ಮಿಕತೆಯಲ್ಲಿ ಸನ್ನಡತೆಯ ವ್ಯಕ್ತಿಯ ಕಾರ್ಯಶಕ್ತಿಯಾಗಿದೆ ಎಂದು ಶ್ರೀ ಗುರು ದುರುದುಂಡೇಶ್ವರ ವಿರಕ್ತಮಹಾಮಠದ ಶ್ರೀ ಶಿವಕುಮಾರ ಮಹಾಸ್ವಾಮಿಜೀ ಶ್ರೀಮಠದ ಭಕ್ತ ವೃಂದದಿಂದ ಗುರು ಪೂರ್ಣಿಮೆಯ ಗುರು ವಂದನಾ ಸ್ವೀಕರಿಸಿ ಆಶೀರ್ವಚಿಸಿದರು.

ಡಾ.ಬಿ.ಬಿ.ಬಿರಾದಾರ, ಸುರೇಶ ದೇವೂರ, ಶಿಕ್ಷಕರಾದ ಗುರುರಾಜ ಜೋಷಿ, ಕೊಟ್ರೇಶ ಕೋಳೂರ ಮಾತನಾಡಿದರು. ಸಿದ್ದಲಿಂಗಯ್ಯಸ್ವಾಮಿ, ತಾಲೂಕಾ ಕರವೇ ಅಧ್ಯಕ್ಷ ರಮೇಶ ಬಿರಾದಾರ, ಬಸಣ್ಣ ಬಂಗಾರಗುಂಡ, ಬಿ.ಬಿ.ಪಡಶೆಟ್ಟಿ, ಮಲ್ಲಣ್ಣ ಆರಲಗಡ್ಡಿ, ಸೋಮನಿಂಗಪ್ಪ ದೊರಿ, ವಿಶಾಲ ಅಂಗಡಿ, ವಿಜಯ ಮದರಿ, ತಿರುಪತಿ ಹಡಪದ, ಯಂಕಣ್ಣ ಹಗರಟಗಿ, ಕುಮಾರ ತೋಳನೂರ, ಶಿವಯ್ಯ ಸ್ವಾಮಿ, ಮುತ್ತು ಪಡಶೆಟ್ಟಿ, ಸಂಗು ಪಾಟೀಲ್, ಶ್ರೀಮಠದ ಮಹಿಳಾ ಭಕ್ತರಿದ್ದರು.

ಪೂರ್ವದಲ್ಲಿ ನಿಜಶರಣ ಹಡಪದ ಅಪ್ಪಣ್ಣನವರ ಭಾವಚಿತ್ರ ಪೂಜಿಸಿ ಜಯಂತಿಯನ್ನು ಬಸಯ್ಯ ಸ್ವಾಮಿ ಹಿರೇಮಠ ಅವರೊಂದಿಗೆ ಗುಂಡಣ್ಣ ನಗನೂರ, ಮಲ್ಲಿಕಾರ್ಜಿನ ಹಡಪದ ಭಕ್ತರ ಪರವಾಗಿ ಗುರುವಂದನಾ ಪೂಜೆ ನೆರವೇರಿಸಿದರು. ಚಂದ್ರಶೇಖರ ಐಹೊಳ್ಳಿ ನಿರೂಪಿಸಿದರು, ಹಿರಿಯ ಪತ್ರಕರ್ತ ಬಸವರಾಜ ಬ ಅಂಗಡಿ ಸ್ವಾಗತಿಸಿದರು, ರವಿ ಆರಲಗಡ್ಡಿ ವಂದಿಸಿದರು.

ವರದಿಗಾರ : ಶಿವು ರಾಠೋಡ

Latest News

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಬೆಂಗಳೂರು: ಮಹಿಳೆಯ ಗರ್ಭಕೋಶದಿಂದ ಮಹತ್ವದ ಶಸ್ತ್ರ ಚಿಕಿತ್ಸೆ ನಡೆಸಿದ ರಾಜಾಜಿನಗರದ ಇಎಸ್‌ಐಸಿ, ಎಂಸಿ ಪಿಜಿಐಎಂಎಸ್‌ಆರ್

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ನಾರಾಯಣಪುರ : ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೊಡೇಕಲ್ ಉಪತಶೀಲ್ದಾರ ಕಲ್ಲಪ್ಪ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

​ ಮುಧೋಳ : ದೇಶಾಭಿಮಾನ ಪ್ರತಿಯೊಬ್ಬರಲ್ಲಿ ಸ್ವಪ್ರೇರಣೆಯಿಂದ ಮೂಡಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಧಾರವಾಡ, ಆ.15: ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಧನ್ಯವಾದ ಹೇಳಲು ಮತ್ತು ಅವರ ಮೌಲ್ಯಗಳನ್ನು ನೆನಪಿಸಿಕೊಳ್ಳಲು ಒಂದು ಅವಕಾಶ. ನಮ್ಮ ಧ್ವಜವನ್ನು ಹಾರಿಸುವುದು, ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವುದು ಮತ್ತು ಏಕತೆಯ ಮನೋಭಾವವನ್ನು ರೂಢಿಸಿಕೊಳ್ಳುವ ದಿನವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಹೇಳಿದರು. ಧಾರವಾಡ ಜಿಲ್ಲಾಡಳಿತವು ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಮುದ್ದೇಬಿಹಾಳ : ರೈತರ ಬೆಳೆದ ಬೆಳೆ ವಿವರಗಳನ್ನು ದಾಖಲಿಸುವಲ್ಲಿ ಬೆಳೆಯ ಸಮೀಕ್ಷೆದಾರರ ಪಾತ್ರವು ಅತಿ ಮುಖ್ಯವಾಗಿದ್ದು ಅವರ ಬೇಡಿಕೆಯಂತೆ ಐಡಿ ಕಾರ್ಡ್ ಹಾಗೂ ಕಿಟ್ ವಿತರಿಸಲಾಗಿದೆ ಎಂದು ತಹಸೀಲ್ದಾರ್ ಕೀರ್ತಿ ಚಾಲಕ್ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರ ಹಾಗೂ ಸರ್ಕಾರದ ಪ್ರತಿನಿಧಿಯಾಗಿ ಈ ಬೆಳೆ ಸಮೀಕ್ಷೆದಾರರು ಕಾರ್ಯನಿರ್ವಹಿಸಲಿದ್ದಾರೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಎಸ್. ಡಿ. ಭಾವಿಕಟ್ಟಿ, ಕೃಷಿ ಅಧಿಕಾರಿಗಳಾದ ಗೋವಿಂದರೆಡ್ಡಿ