ಮುದ್ದೇಬಿಹಾಳ : ಪಟ್ಟಣದಲ್ಲಿ ಮೊಹರಂ ಹಬ್ಬದ ನಿಮಿತ್ಯ ಮಹೆಬೂಬ ನಗರದ ಗೆಳೆಯರ ಬಳಗದಿಂದ ಆಯೋಜಿಸಿದ್ದ ಒಂದು ಎತ್ತು ಒಂದು ಕುದರೆ ಗಾಡಿ ಓಟದ ಸ್ಪರ್ಧೆಯಲ್ಲಿ ವಿಜೇತರಾದ ಎತ್ತು-ಕುದುರೆ ಜೋಡಿ ಬಂಡಿ ಮಾಲೀಕರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಬುಧವಾರ ನಡೆಯಿತು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ತೆಲಗಿಯ ಅಜಯಕುಮಾರ ವಾಲೀಕಾರ
ಅವರ ಕುದುರೆ-ಎತ್ತು ಜೋಡಿ ಬಂಡಿ ಪಡೆದರೆ ಮಣ್ಣೂರಿನ ಸಂಗು ಮಮದಾಪೂರ ಅವರ ಬಂಡಿ ಎರಡನೇ ಬಹುಮಾನ, ಟಕ್ಕೆಯ ಹುಸೇನಸಾಬ ವಾಲೀಕಾರರ ಬಂಡಿ ತೃತೀಯ ಹಾಗೂ ರತ್ನಕಾರದ ಅರುಣಕುಮಾರ ಗಗನಮನಿ ಅವರ ಬಂಡಿ ನಾಲ್ಕನೇ ಬಹುಮಾನ ಪಡೆದುಕೊಂಡಿತು.
ವಿಜೇತರಿಗೆ ಸಮಾಜ ಸೇವಕಿ ಸಂಗೀತಾ ನಾಡಗೌಡ ಬಹುಮಾನ ವಿತರಿಸಿದರು.ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸದಸ್ಯರಾದ ರಿಯಾಜ ಢವಳಗಿ, ರಫೀಕ ದ್ರಾಕ್ಷಿ, ಸಾಹೇಬಲಾಲ ದೇಸಾಯಿ, ಶಾಹೀದ ದೇಸಾಯಿ, ಮಹ್ಮದರಫೀಕ ಶಿರೋಳ,ಇರ್ಫಾನ ದೇಸಾಯಿ ಇದ್ದರು.