Press Day on June 30 Health checkup camp for firemen

ಜು.30 ರಂದು ಪತ್ರಿಕಾ ದಿನಾಚರಣೆ ಅಗ್ನಿಶಾಮಕ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಶಿಬಿರ

ಜು.30 ರಂದು ಪತ್ರಿಕಾ ದಿನಾಚರಣೆ ಅಗ್ನಿಶಾಮಕ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಶಿಬಿರ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಪತ್ರಿಕಾ ದಿನಾಚರಣೆಯ ನಿಮಿತ್ಯ ಫಕೀರೇಶ್ವರ ಡೈಗ್ನೋಸ್ಟಿಕ್ ಸೆಂಟರ್ ಸಹಯೋಗದಲ್ಲಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ಆರೋಗ್ಯ ತಪಾಸಣೆ, ಉಚಿತ ಇಸಿಜಿ ಹಾಗೂ ಆರ್.ಬಿ.ಎಸ್ ಪರೀಕ್ಷೆ , ಹೃದಯ ರೋಗ ಕುರಿತು ಉಪನ್ಯಾಸ ಕಾರ್ಯಕ್ರಮ ಜು.30 ರಂದು ಸಂಜೆ 4 ಗಂಟೆಗೆ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದ ಪಕ್ಕದಲ್ಲಿರುವ ಅಗ್ನಿಶಾಮಕ ಠಾಣೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾನಿಪ ಧ್ವನಿ ಸಂಘದ ತಾಲ್ಲೂಕು ಅಧ್ಯಕ್ಷ ಶಂಕರ ಈ.ಹೆಬ್ಬಾಳ ತಿಳಿಸಿದರು.

ಪಟ್ಟಣದ ಜನರಕೂಗು ಡಿಜಿಟಲ್ ವಾಹಿನಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಂದು ಬೆಳಗ್ಗೆ 9.30ಕ್ಕೆ ಫಕಿರೇಶ್ವರ ಡೈಗ್ನೂಸ್ಟಿಕ್ ಸೆಂಟರ್‌ನಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಇಸಿಜಿ, ಆರ್.ಬಿ.ಎಸ್ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಸಾಯಂಕಾಲ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುದ್ದೇಬಿಹಾಳ ಖಾಸ್ಗತೇಶ್ವರ ಮಠದ ಉಸ್ತುವಾರಿ ಶರಣೆ ನೀಲಮ್ಮ ವಿರಕ್ತಮಠ ವಹಿಸುವರು. ವಿಜಯಪುರ ಅಗ್ನಿಶಾಮಕ ಠಾಣೆಯ ಜಿಲ್ಲಾ ಅಧಿಕಾರಿ ಶಶಿಧರ ನೀಲಗಾರ ಉದ್ಘಾಟಿಸುವರು. ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಜಿಲ್ಲಾಧ್ಯಕ್ಷ ಯೂಸೂಫ ನೇವಾರ ಅಧ್ಯಕ್ಷತೆ ವಹಿಸುವರು. ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಸಾಧಕರನ್ನು ಗೌರವಿಸುವರು ಎಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಗುಲಾಮಮೊಹ್ಮದ ದಫೇದಾರ ಮಾತನಾಡಿ, ಕಾರ್ಯಕ್ರಮದಲ್ಲಿ ಹೃದಯ ರೋಗದ ಕಾರಣ ಪರಿಹಾರದ ಕುರಿತು ಮುದ್ದೇಬಿಹಾಳದ ಕರೇಕಲ್ ಪಾಟೀಲ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಮುಖ್ಯಸ್ಥ ಬಸನಗೌಡ ಕರೇಕಲ್‌ಪಾಟೀಲ ಅವರು ಉಪನ್ಯಾಸ ನೀಡುವರು. ಪತ್ರಕರ್ತರಾದ ಹಣಮಂತ ನಲವಡೆ, ರವಿ ತೇಲಂಗಿ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಪ್ರಭಾರ ತಹಸೀಲ್ದಾರ್ ಎ.ಡಿ.ಅಮರವಾದಗಿ, ಸಿಪಿಐ ಮೊಹ್ಮದ ಫಸಿವುದ್ದೀನ, ಐಎನ್‌ಬಿಸಿಡಬ್ಲ್ಯೂ ಸಂಘಟನೆ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸಂಗೀತಾ ನಾಡಗೌಡ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷೆ ಕಾಶೀಬಾಯಿ ರಾಂಪೂರ, ಫಕೀರೇಶ್ವರ ಡೈಗ್ನೋಸ್ಟಿಕ್ ಸೆಂಟರ್‌ನ ಮುಖ್ಯಸ್ಥ ಡಾ.ಸಿ.ಕೆ.ಶಿವಯೋಗಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಕಾನಿಪ ಧ್ವನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಹಣಮಂತ ನಲವಡೆ, ಮಾರುತಿ ಹಿಪ್ಪರಗಿ, ರವಿ ತೇಲಂಗಿ, ಬಸವರಾಜ ಕುಂಟೋಜಿ, ಬಸವರಾಜ ಹೂಗಾರ, ಮುತ್ತು ಕನ್ನೂರ, ವಿನಯ ಕಡ್ಲಿಮಟ್ಟಿ, ಹಣಮಂತ ಚವ್ಹಾಣ ಇದ್ದರು.

Latest News

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಮುದ್ದೇಬಿಹಾಳ : ಕೆಲವು ಸ್ವಾಮೀಜಿಗಳಿರುತ್ತಾರೆ.ಜನರಿಗೆ ತಾವು ಯೂಟ್ಯೂಬ್ , ಸೋಷಿಯಲ್ ಮೀಡಿಯಾದಲ್ಲಿ ಪುಕ್ಕಟೆ ಉಪದೇಶ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಪಾಲಿಸಬೇಕು ಎಂದು ಪಿಎಸ್‌ಐ ಸಂಜಯ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದಿಂದ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಆಂಧ್ರಪ್ರದೇಶದಿAದ

ಗ್ರಾಪಂ ಮಟ್ಟದ ಸೇವೆ ಅಸ್ತವ್ಯಸ್ತ ಸಾಧ್ಯತೆ:ಗ್ರಾ.ಪಂ ನೌಕರರನ್ನು ಸಮೀಕ್ಷೆಯಿಂದ ಕೈಬಿಡಲು ಒತ್ತಾಯ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಮುದ್ದೇಬಿಹಾಳ : ಮೂಲತಃ ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ತಾಂಡಾದ ಡಾ.ಮೋತಿಲಾಲ ರೂ.ಚವ್ಹಾಣ ಅವರನ್ನು ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಡಾ. ಎ.ಆರ್. ಗೋವಿಂದಸ್ವಾಮಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ತೆರವಾಗಿದ್ದ ಸ್ಥಾನಕ್ಕೆ ಡಾ. ಮೋತಿಲಾಲ ಚವ್ಹಾಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಡಾ. ಮೋತಿಲಾಲ ರೂ. ಚವ್ಹಾಣ

ಬ್ರಿಲಿಯಂಟ್ ಕಲಾವೈಭವದಲ್ಲಿ ಗಮನ ಸೆಳೆದ ಭವ್ಯ ವೇದಿಕೆ; ಮನಸ್ಸಿಗೆ ಮುದ ನೀಡಿದ ಮಕ್ಕಳ ಸಾಂಸ್ಕೃತಿಕ ವೈಭವ

ಬ್ರಿಲಿಯಂಟ್ ಕಲಾವೈಭವದಲ್ಲಿ ಗಮನ ಸೆಳೆದ ಭವ್ಯ ವೇದಿಕೆ; ಮನಸ್ಸಿಗೆ ಮುದ ನೀಡಿದ ಮಕ್ಕಳ ಸಾಂಸ್ಕೃತಿಕ ವೈಭವ

ತಾಳಿಕೋಟಿ : ತಾಲ್ಲೂಕಿನ ಮೈಲೇಶ್ವರ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶುಕ್ರವಾರದಿಂದ ಶಾಲೆಯಲ್ಲಿ ಎರಡು ದಿನಗಳ ಕಲಾ ವೈಭವ-2026ರ ಮೊದಲ ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಬ್ರಿಲಿಯಂಟ್ ಶಾಲೆಯ 2026 ನೇ ಸಾಲಿನ ಕಲಾ ವೈಭವಕ್ಕೆಂದು ಸಿದ್ಧಪಡಿಸಿದ್ದ ಭವ್ಯ ವೇದಿಕೆ ಸಾರ್ವಜನಿಕರ,ಪಾಲಕರು,ವಿದ್ಯಾರ್ಥಿಗಳು ,ಅಧಿಕಾರಿಗಳ ಗಮನ ಸೆಳೆಯುವಂತಿತ್ತು.ಸಾಮಾನ್ಯವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ,ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಸರಕಾರಿ