Opposition to the implementation of the Vakbh Amendment-2025 Act

ವಕ್ಭ್ ತಿದ್ದುಪಡಿ-2025ರ ಕಾಯ್ದೆ ಅನುಷ್ಠಾನಕ್ಕೆ ವಿರೋಧ

ವಕ್ಭ್ ತಿದ್ದುಪಡಿ-2025ರ ಕಾಯ್ದೆ ಅನುಷ್ಠಾನಕ್ಕೆ ವಿರೋಧ

ಮುದ್ದೇಬಿಹಾಳ : ಕೇಂದ್ರ ಸರ್ಕಾರ ವಕ್ಭ್ ಕಾಯ್ದೆಗೆ ತಿದ್ದುಪಡಿ-2025ರ ಅನುಷ್ಠಾನಕ್ಕೆ ನಮ್ಮ ಬಲವಾದ ವಿರೋಧವನ್ನು ವ್ಯಕ್ತಪಡಿಸುತ್ತೇವೆ ಎಂದು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಪ್ರತಿನಿಧಿಗಳು ಹೇಳಿದರು.

ಪಟ್ಟಣದಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಶನ್, ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಸ್ಥಳೀಯ ಮುಸ್ಲಿಂ ಸಮಾಜದ ಮಹಿಳೆಯರು ವಕ್ಭ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆ ಅಧ್ಯಕ್ಷೆ ಸುಮಯ್ಯ ಖಾನ್, ಇಸ್ಲಾಂ ಹೊರಗಿನ ಸದಸ್ಯರ ಸೇರ್ಪಡೆಯಿಂದ ಸಂಸ್ಥೆಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಹಾಳು ಮಾಡುವುದು ಇದರ ಹಿಂದಿನ ಕುತಂತ್ರ ಅಡಗಿದೆ. ವಕ್ಭ್ ಬೋರ್ಡ್ನಿಂದ ಸರ್ಕಾರದ ಕೈಗೆ ವಕ್ಭ್ ಆಸ್ತಿಗಳನ್ನು ಘೋಷಿಸುವ ಅಧಿಕಾರ ವರ್ಗಾಯಿಸುತ್ತದೆ. 1995ರ ಕಾಯ್ದೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದು ಹೊಸ ತಿದ್ದುಪಡಿ ಕಾಯ್ದೆಯಲ್ಲಿ ನಿಖರವಾದ ಪ್ರಾತಿನಿಧ್ಯ ನೀಡುವುದಿಲ್ಲ ಎಂದು ಹೇಳಿದರು.

ಈ ಕಾಯ್ದೆಯ ಕುರಿತು ಶಾಸಕರು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ರದ್ದುಗೊಳಿಸುವಂತೆ ಒತ್ತಾಯಿಸಬೇಕು. ಸಮುದಾಯದ ಸಮಾಲೋಚನೆಯಿಲ್ಲದೆ ಈ ಕಾಯಿದೆಯ ಸ್ಥಳೀಯ ಅನುಷ್ಠಾನ ಮಾಡಬಾರದು. ತಾಲ್ಲೂಕು ಅಧಿಕಾರಿಗಳು ಶಾಂತಿಯುತ ಜಾಗೃತಿ ಕಾರ್ಯಕ್ರಮ ಹಾಗೂ ಕಾನೂನು ಕಾರ್ಯಾಗಾರಗಳಿಗೆ ಸಹಕಾರ ನೀಡಬೇಕು. ಜಿಲ್ಲಾ ವಕ್ಫ್ ಅಧಿಕಾರಿ ನೊಂದಾಯಿಸಲ್ಪಡದೇ ಇರುವ ವಕ್ಫ್ ಆಸ್ತಿಗಳ ಪರಿಶೀಲನೆ ಹಾಗೂ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು ಎಂದು ತಹಸೀಲ್ದಾರ್‌ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರಭಾರಿ ತಹಸೀಲ್ದಾರ್ ಎ. ಡಿ. ಅಮರವಾದಗಿ ಮನವಿ ಸ್ವೀಕರಿಸಿದರು. ಜಮಾಅತೆ ಇಸ್ಲಾಮಿ ಹಿಂದ ಸಂಚಾಲಕ ನೂರೇನಬಿ ನದಾಫ, ಸದ್ದಾಂಹುಸೇನ ನದಾಫ, ಪ್ರಮುಖರಾದ ಮುಸರತ್ ನದಾಫ, ರಜಿಯಾ ಅಬಾಲೆ, ನಜಮಾ ಘಾಟಿ, ಆಫ್ರಿನ ಮೋಮಿನ, ಸಾನಿಯಾ ಬಾಗಲಕೋಟೆ, ಹಲೀಮಾ ಮಕಾನದಾರ, ಶಗುಪ್ತಾ ದಫೆದಾರ, ಸಬಾ ಶಿರಗುಂಪಿ, ಕುಲ್ಸುಮ್ ಖಾನ್, ಬಿಸ್ಮಿಲ್ಲಾ ನದಾಫ್, ಯಾಸ್ಮಿನ್ ಎಲಿಗಾರ್ ಇದ್ದರು.

Latest News

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಉಡುಪಿ ಅಕ್ಟೋಬರ್ ೧೦: ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗೆ ನಮ್ಮ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ಬೆಂಗಳೂರು : ಋತುಚಕ್ರ ರಜೆ ನೀತಿ - 2025ಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಗೌಡರ ಸಾಲದ ಬಾಧೆ ತಾಳದೇ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಮುದ್ದೇಬಿಹಾಳ : ಪಟ್ಟಣದ ಹುಡ್ಕೋಗೆ ತೆರಳುವ ದ್ವಾರದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತದ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ತುಮಕೂರು, ಅ.8: ಅಸಂಘಟಿತ ವಲಯದಲ್ಲಿ ದುರ್ಬಲರಾಗಿರುವ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಆಶಾ ದೀಪ ಯೋಜನೆ, ಗಿಗ್ ಕಾರ್ಮಿಕರ ವಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು. ನಗರ ಹೊರವಲಯದ ಶ್ರೀ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ʼತುಮಕೂರು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ;                             ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ; ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

** ಹೆಬ್ಬಾಳ** ಮುದ್ದೇಬಿಹಾಳ : ಆಗಷ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಹಲವಾರು ಬೆಳೆಗಳು ನೀರಲ್ಲಿ ನಿಂತಿದ್ದು ಅನ್ನದಾತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಭಾಗದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬಹುತೇಕ ಎಲ್ಲ ಬೆಳೆಗಳು ಕೊಳೆತಿವೆ. ಉಳ್ಳಾಗಡ್ಡಿ, ಹತ್ತಿ, ತೊಗರಿ,ಮೆಕ್ಕೆಜೋಳ,ದ್ರಾಕ್ಷಿ,ಬಾಳೆ,ಟೊಮ್ಯಾಟೋ ಅತಿವೃಷ್ಟಿಯಿಂದ ಹೊಲದಲ್ಲಿಯೇ ಹಾಳಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ರೈತ ಬಸವರಾಜ ಕುಂಟೋಜಿ, ಅತೀವೃಷ್ಟಿಯಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ.ಮಳೆ