Collector's visit to Muddebihal: Notice to provide better service to public

ಮುದ್ದೇಬಿಹಾಳಕ್ಕೆ ಜಿಲ್ಲಾಧಿಕಾರಿಗಳ ಪ್ರವಾಸ: ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸೂಚನೆ

ಮುದ್ದೇಬಿಹಾಳಕ್ಕೆ ಜಿಲ್ಲಾಧಿಕಾರಿಗಳ ಪ್ರವಾಸ: ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸೂಚನೆ

ಮುದ್ದೇಬಿಹಾಳ : ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಒಳ್ಳೆಯ ಸೇವೆ ನೀಡಬೇಕು. ಸಮಯ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ಆನಂದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ್ದ ಅವರು ಅಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ. ಅನಿಲಕುಮಾರ ಶೇಗುಣಸಿ ಅವರಿಂದ ಆಸ್ಪತ್ರೆಯ ಕುರಿತು ಮಾಹಿತಿ ಪಡೆದುಕೊಂಡರು. ಗರ್ಭಿಣಿಯರು, ಬಾಣಂತಿಯರು, ಔಷಧಿ ವಿಭಾಗ, ಹೊರರೋಗಿಗಳ ವಿಭಾಗ ಸೇರಿದಂತೆ ಹಲವು ಕಡೆಗಳಲ್ಲಿ ಸುತ್ತಾಡಿದ ಡಿಸಿ ಅವರು ಆಸ್ಪತ್ರೆಯ ಸ್ವಚ್ಛತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದಲ್ಲದೇ ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು ಭೂಮಿ ಕೇಂದ್ರದ ಪ್ರಗತಿ, ಪೌತಿ ಆಂದೋಲನ ಮಾಹಿತಿ, ಸಕಾಲ ಅರ್ಜಿಗಳ ಪ್ರಗತಿ ಹಾಗೂ ಇ ಆಫೀಸ್ ಅರ್ಜಿಗಳ ಪ್ರಗತಿ ಕುರಿತು ಪರಿಶೀಲಿಸಿದರು. ಪ್ರಭಾರ ತಹಸೀಲ್ದಾರ್ ಎ.ಡಿ.ಅಮರವಾದಗಿ ಡಿಸಿ ಅವರಿಗೆ ಮಾಹಿತಿ ನೀಡಿದರು.

ಕಂದಾಯ ದಾಖಲೆಗಳ ಗಣಕೀಕರಣ ಕೊಠಡಿಗೆ ತೆರಳಿ ಕಂದಾಯ ದಾಖಲೆಗಳ ಸ್ಕ್ಯಾನಿಂಗ್ ಬಗ್ಗೆ ಪರಿಶೀಲನೆ ನಡೆಸಿದರಲ್ಲದೇ ಸಾರ್ವಜನಿಕರಿಗೆ ಬೇಕಾಗುವ ದಾಖಲೆಗಳನ್ನು ಶೀಘ್ರದಲ್ಲಿ ಅನುಕೂಲ ಆಗುವಹಾಗೆ ವ್ಯವಸ್ಥೆ ಮಾಡಬೇಕು ಎಂದು ತಹಸೀಲ್ದಾರ್‌ಗೆ ತಿಳಿಸಿದರು.

ಪಟ್ಟಣದ ಮಾರುತಿ ನಗರದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ, ಕೊಠಡಿ, ಊಟದ ಕೋಣೆ, ಅಡುಗೆ ಕೋಣೆ ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು. ವಿದ್ಯಾರ್ಥಿಗಳಿಂದ ಹಾಸ್ಟೆಲ್ ವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡರು. ಪುರಸಭೆಗೆ ಭೇಟಿ ನೀಡಿದ್ದ ಡಿಸಿ ಅವರು ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರಿಂದ ಮಾಹಿತಿ ಪಡೆದುಕೊಂಡರು.
ಕಂದಾಯ ನಿರೀಕ್ಷಕ ಡಿ. ಎಸ್. ತಳವಾರ, ವೈದ್ಯರಾದ ಡಾ. ಪರಶುರಾಮ ವಡ್ಡರ, ಡಾ.ಹರಿರಾಮಕೃಷ್ಣ, ಡಾ.ಅಬ್ದುಲ್ ಮೊದಲಾದವರು ಇದ್ದರು.

Latest News

ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಲೋಕಾರ್ಪಣೆ

ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಲೋಕಾರ್ಪಣೆ

ಸಿದ್ಲೀಪುರ(ಶಿವಮೊಗ್ಗ ಜಿಲ್ಲೆ) ಆಗಸ್ಟ್‌ 04: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌

ಬಡವರ ಕೈಗೆ ಹಣ ಬಂದಾಗ ಮಾತ್ರ ದೇಶದ ಪ್ರಗತಿ: ಸಚಿವ ಲಾಡ್

ಬಡವರ ಕೈಗೆ ಹಣ ಬಂದಾಗ ಮಾತ್ರ ದೇಶದ ಪ್ರಗತಿ: ಸಚಿವ ಲಾಡ್

ಶಿವಮೊಗ್ಗ, ಆಗಸ್ಟ್ 04 : ಬಡವರ ಕೈಯಲ್ಲಿ ಹಣ ಬಂದಾಗ ಮಾತ್ರ ದೇಶದ ಪ್ರಗತಿಯಾಗಲಿದ್ದು,

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸದುಗೌಡ ಆಯ್ಕೆ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸದುಗೌಡ ಆಯ್ಕೆ

ಮುಧೋಳ : ನಗರದ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಕೋ ಅರ್ಡಿನೆಟರ್ ಅಗಿದ್ದ ನಗರದ

ಮಹಿಳಾ ಕಾಂಗ್ರೆಸ್‌ಗೆ ಅಕ್ಷತಾ ಚಲವಾದಿ ನೇಮಕ

ಮಹಿಳಾ ಕಾಂಗ್ರೆಸ್‌ಗೆ ಅಕ್ಷತಾ ಚಲವಾದಿ ನೇಮಕ

ಮುದ್ದೇಬಿಹಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷೆಯಾಗಿ ಅಕ್ಷತಾ ಶರಣು ಚಲವಾದಿ ಅವರನ್ನು

ವಲಯ ಮಟ್ಟದ ಕ್ರೀಡಾಕೂಟ: ಕರ್ಲಕೊಪ್ಪ ಶಾಲೆಯ ಬಾಲಕಿಯರಿಗೆ ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ

ವಲಯ ಮಟ್ಟದ ಕ್ರೀಡಾಕೂಟ: ಕರ್ಲಕೊಪ್ಪ ಶಾಲೆಯ ಬಾಲಕಿಯರಿಗೆ ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ

ಕುಳಗೇರಿ ಕ್ರಾಸ್: ಸಮೀಪದ ಕುಳಗೇರಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರ್ ಎಸ್ ಕೆ ಯಲ್ಲಿ ಆಯೋಜನೆಗೊಂಡಿತ್ತು. ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಲಕೊಪ್ಪದ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಬಾಲಕಿಯರ ಕಬ್ಬಡ್ಡಿ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ವೈಯಕ್ತಿಕ ಆಟಗಳಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರಿಗೆ ಶಾಲಾ ಆಡಳಿತ ಹಾಗೂ ಎಸ್.ಡಿ.ಎಂ.ಸಿಯ ಅಧ್ಯಕ್ಷರು ಮತ್ತು ಸರ್ವ

ಶ್ರಾವಣ ಮಾಸದ ಸೌಹಾರ್ದ ಕೂಟ ಆಯೋಜನೆ: ಆ.9,10 ರಂದು ಕಣ್ಣಿನ ಉಚಿತ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

ಶ್ರಾವಣ ಮಾಸದ ಸೌಹಾರ್ದ ಕೂಟ ಆಯೋಜನೆ: ಆ.9,10 ರಂದು ಕಣ್ಣಿನ ಉಚಿತ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

ಮುದ್ದೇಬಿಹಾಳ : ರಂಜಾನ್ ಮಾಸದಲ್ಲಿ ಈದ್ ಸೌಹಾರ್ದ ಕೂಟ ಏರ್ಪಡಿಸಿದಂತೆ ಈ ಬಾರಿ ಮನಿಯಾರ ಚಾರಿಟೇಬಲ್ ಟ್ರಸ್ಟ್ನಿಂದ ಶ್ರಾವಣ ಮಾಸದ ಸೌಹಾರ್ದ ಕೂಟ ಹಮ್ಮಿಕೊಂಡಿದ್ದೇವೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಯೂಬ ಮನಿಯಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ತಾಳಿಕೋಟಿ, ಮುದ್ದೇಬಿಹಾಳ ಹಾಗೂ ನಾಲತವಾಡದಲ್ಲಿ ಅನೇಕ ವರ್ಷಗಳಿಂದ ಟ್ರಸ್ಟ್ನಿಂದ ವಿಧವೆಯರಿಗೆ ಪಿಂಚಣಿ, ಈದ್ ಕಿಟ್ ವಿತರಣೆ, ಬೀದಿಯಲ್ಲಿರುವ ನಿರಾಶ್ರಿತರಿಗೆ ಆಶ್ರಯ, ಬಡ ವಿದ್ಯಾರ್ಥಿಗಳಿಗೆ