Seven athletes from Vijayapur district have been selected for bandy hockey training

ಬ್ಯಾಂಡಿ ಹಾಕಿ ತರಬೇತಿಗೆ ವಿಜಯಪುರ ಜಿಲ್ಲೆಯ ಏಳು ಕ್ರೀಡಾಪಟುಗಳು ಆಯ್ಕೆ

ಬ್ಯಾಂಡಿ ಹಾಕಿ ತರಬೇತಿಗೆ ವಿಜಯಪುರ ಜಿಲ್ಲೆಯ ಏಳು ಕ್ರೀಡಾಪಟುಗಳು ಆಯ್ಕೆ

ಮುದ್ದೇಬಿಹಾಳ: ಹಾಕಿ ಬಳಿಕ ಇದೀಗ ಬ್ಯಾಂಡಿ ಹಾಕಿಯಲ್ಲಿ ಮಿಂಚಲು ವಿಜಯಪುರ ಜಿಲ್ಲೆಯ ಪ್ರತಿಭೆಗಳು ಸಿದ್ದರಾಗಿದ್ದಾರೆ.

ಐಸ್ ಸ್ಕೇಟಿಂಗ ಗುರಗಾಂವ್ (ದೆಹಲಿ) ನಲ್ಲಿ ಆಗಸ್ಟ್ 4 ರಿಂದ 6 ರ ವರೆಗೆ ನಡೆಯುವ ಹಾಕಿ ಬ್ಯಾಂಡಿ ಕ್ರೀಡಾ ತರಬೇತಿ ಶಿಬಿರದಲ್ಲಿ
ಮುದ್ದೇಬಿಹಾಳ ಪಟ್ಟಣದ ಏಕಲವ್ಯ ರೋಲರ್ ಸ್ಕೇಟಿಂಗ್ ಸಂಸ್ಥೆಯ 7 ಜನ ಕ್ರೀಡಾಪಟುಗಳಾದ, ಮಹ್ಮದ್ ಆಹಿಲ್ ಎಂ ಅಕ್ಕಲಕೋಟ್, ಹೃದಯಾನಂದ ಅರವಿಂದ ಕೊಪ್ಪ, ಅಬ್ದುಲ್ ರಜಾಕ್ ಗುಡ್ನಾಳ, ವಿಕ್ರಾಂತ ಶಾರದಳ್ಳಿ, ಶಕುಂತಲಾ ಶಾರದಳ್ಳಿ, ಪೃತ್ವಿಗೌಡ ಪಾಟೀಲ್, ನುಮಾನ ಹಾದಿಮನಿ, ಟೀಮ್ ಮ್ಯಾನೇಜರ್ ಆಗಿ ಉಮಾ ಶಾರದಳ್ಳಿ ಅವರು ತರಬೇತಿ ಶಿಬಿರ ಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಿವಕುಮಾರ ಶಾರದಳ್ಳಿ ಉತ್ತರ ಕರ್ನಾಟಕ ಮತ್ತು ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ಯಾಂಡಿ ಅಸೋಸಿಯೇಷನ, ಗುರುಮೂರ್ತಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಬ್ಯಾಂಡಿ ಅಸೋಸಿಯೇಷನ್ ತಿಳಿಸಿದ್ದಾರೆ.

ತರಬೇತಿ ಬಳಿಕ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಹಾಗೂ ಇತರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಈ ಕ್ರೀಡಾಪಟುಗಳು ಭಾಗವಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಬ್ಯಾಂಡಿ(ಐಸ್) ಹಾಕಿ: ಸಾಮಾನ್ಯವಾಗಿ
ಹಾಕಿ ಚಿರಪರಿಚಿತ ಕ್ರೀಡೆ ಆದರೆ, ಇತ್ತೀಚೆಗೆ ಬ್ಯಾಂಡಿ ಹಾಕಿ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದೆ. ಸಾಂಪ್ರದಾಯಿಕ ಹಾಕಿಗಿಂತ ಈ ಆಟದ ನಿಯಮಗಳು ಭಿನ್ನವಾಗಿವೆ. ಬ್ಯಾಂಡಿ ಚಳಿಗಾಲದ ಕ್ರೀಡೆಯಾಗಿದೆ. ಪಂದ್ಯಗಳು ಹಿಮಾವೃತ ನೆಲದಲ್ಲಿ ನಡೆಯುತ್ತದೆ. ಐಸ್ ಹಾಕಿ(ಬ್ಯಾಂಡಿ) ಯನ್ನು ದೊಡ್ಡದಾದ ಸಮತಟ್ಟಾದ ಐಸ್ ಮೇಲೆ, ಮೂರು ಇಂಚಿನ (76.2 ಮಿ.ಮೀ) ವಿಸ್ತೀರ್ಣವುಳ್ಳ ಬಿರುಸು ಅಥವಾ ಮೆದು ರಬ್ಬರ್‌ನ ಪಕ್ ಎಂದು ಕರೆಯಲ್ಪಡುವ ಡಿಸ್ಕ್ ನಿಂದ ಆಡಲಾಗುತ್ತದೆ. ಪಕ್ ಅನ್ನು ಉನ್ನತ ಶ್ರೇಣಿಯ ಆಟಗಳಲ್ಲಿ ಐಸ್‌ನ‌ ಮೇಲೆ ಜಿಗಿತ ಮತ್ತು ಘರ್ಷಣೆಯನ್ನು ಕಡಿಮೆ ಮಾಡಲು ಗಟ್ಟಿಗೊಳಿಸಲಾಗಿರುತ್ತದೆ. ಎರಡು ಸ್ಟೇಟರ್ ತಂಡಗಳ ಮಧ್ಯೆ ಆಟದ ಸ್ಪರ್ಧೆ ಏರ್ಪಡುತ್ತದೆ.

Latest News

ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಲೋಕಾರ್ಪಣೆ

ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಲೋಕಾರ್ಪಣೆ

ಸಿದ್ಲೀಪುರ(ಶಿವಮೊಗ್ಗ ಜಿಲ್ಲೆ) ಆಗಸ್ಟ್‌ 04: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌

ಬಡವರ ಕೈಗೆ ಹಣ ಬಂದಾಗ ಮಾತ್ರ ದೇಶದ ಪ್ರಗತಿ: ಸಚಿವ ಲಾಡ್

ಬಡವರ ಕೈಗೆ ಹಣ ಬಂದಾಗ ಮಾತ್ರ ದೇಶದ ಪ್ರಗತಿ: ಸಚಿವ ಲಾಡ್

ಶಿವಮೊಗ್ಗ, ಆಗಸ್ಟ್ 04 : ಬಡವರ ಕೈಯಲ್ಲಿ ಹಣ ಬಂದಾಗ ಮಾತ್ರ ದೇಶದ ಪ್ರಗತಿಯಾಗಲಿದ್ದು,

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸದುಗೌಡ ಆಯ್ಕೆ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸದುಗೌಡ ಆಯ್ಕೆ

ಮುಧೋಳ : ನಗರದ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಕೋ ಅರ್ಡಿನೆಟರ್ ಅಗಿದ್ದ ನಗರದ

ಮಹಿಳಾ ಕಾಂಗ್ರೆಸ್‌ಗೆ ಅಕ್ಷತಾ ಚಲವಾದಿ ನೇಮಕ

ಮಹಿಳಾ ಕಾಂಗ್ರೆಸ್‌ಗೆ ಅಕ್ಷತಾ ಚಲವಾದಿ ನೇಮಕ

ಮುದ್ದೇಬಿಹಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷೆಯಾಗಿ ಅಕ್ಷತಾ ಶರಣು ಚಲವಾದಿ ಅವರನ್ನು

ವಲಯ ಮಟ್ಟದ ಕ್ರೀಡಾಕೂಟ: ಕರ್ಲಕೊಪ್ಪ ಶಾಲೆಯ ಬಾಲಕಿಯರಿಗೆ ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ

ವಲಯ ಮಟ್ಟದ ಕ್ರೀಡಾಕೂಟ: ಕರ್ಲಕೊಪ್ಪ ಶಾಲೆಯ ಬಾಲಕಿಯರಿಗೆ ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ

ಕುಳಗೇರಿ ಕ್ರಾಸ್: ಸಮೀಪದ ಕುಳಗೇರಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರ್ ಎಸ್ ಕೆ ಯಲ್ಲಿ ಆಯೋಜನೆಗೊಂಡಿತ್ತು. ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ಲಕೊಪ್ಪದ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಬಾಲಕಿಯರ ಕಬ್ಬಡ್ಡಿ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ವೈಯಕ್ತಿಕ ಆಟಗಳಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರಿಗೆ ಶಾಲಾ ಆಡಳಿತ ಹಾಗೂ ಎಸ್.ಡಿ.ಎಂ.ಸಿಯ ಅಧ್ಯಕ್ಷರು ಮತ್ತು ಸರ್ವ

ಶ್ರಾವಣ ಮಾಸದ ಸೌಹಾರ್ದ ಕೂಟ ಆಯೋಜನೆ: ಆ.9,10 ರಂದು ಕಣ್ಣಿನ ಉಚಿತ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

ಶ್ರಾವಣ ಮಾಸದ ಸೌಹಾರ್ದ ಕೂಟ ಆಯೋಜನೆ: ಆ.9,10 ರಂದು ಕಣ್ಣಿನ ಉಚಿತ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

ಮುದ್ದೇಬಿಹಾಳ : ರಂಜಾನ್ ಮಾಸದಲ್ಲಿ ಈದ್ ಸೌಹಾರ್ದ ಕೂಟ ಏರ್ಪಡಿಸಿದಂತೆ ಈ ಬಾರಿ ಮನಿಯಾರ ಚಾರಿಟೇಬಲ್ ಟ್ರಸ್ಟ್ನಿಂದ ಶ್ರಾವಣ ಮಾಸದ ಸೌಹಾರ್ದ ಕೂಟ ಹಮ್ಮಿಕೊಂಡಿದ್ದೇವೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಯೂಬ ಮನಿಯಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ತಾಳಿಕೋಟಿ, ಮುದ್ದೇಬಿಹಾಳ ಹಾಗೂ ನಾಲತವಾಡದಲ್ಲಿ ಅನೇಕ ವರ್ಷಗಳಿಂದ ಟ್ರಸ್ಟ್ನಿಂದ ವಿಧವೆಯರಿಗೆ ಪಿಂಚಣಿ, ಈದ್ ಕಿಟ್ ವಿತರಣೆ, ಬೀದಿಯಲ್ಲಿರುವ ನಿರಾಶ್ರಿತರಿಗೆ ಆಶ್ರಯ, ಬಡ ವಿದ್ಯಾರ್ಥಿಗಳಿಗೆ