Muddebihala: Partial damage to 17 houses due to rain

ಮುದ್ದೇಬಿಹಾಳ : ಮಳೆಗೆ 17 ಮನೆಗಳಿಗೆ ಭಾಗಶಃ ಹಾನಿ

ಮುದ್ದೇಬಿಹಾಳ : ಮಳೆಗೆ 17 ಮನೆಗಳಿಗೆ ಭಾಗಶಃ ಹಾನಿ

ಮುದ್ದೇಬಿಹಾಳ : ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವಿರಾಮ ನೀಡುತ್ತ ಸುರಿಯುತ್ತಿರುವ ಮಳೆಯಿಂದ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು ರೈತಾಪಿ ವರ್ಗ ವರುಣನಿಗೆ ಸಾಕಪ್ಪ ಸಾಕು ಬಿಡು ಎನ್ನುವಂತಾಗಿದೆ.

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕಳೆದ ಬುಧವಾರದಿಂದೀಚಿಗೆ ಒಟ್ಟು 17 ಮನೆಗಳಿಗೆ ಭಾಗಶಃ ಹಾನಿ ಆಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆ.7 ರಂದು ಒಂದೇ ದಿನ ವಿವಿಧ ಊರುಗಳಲ್ಲಿ ಒಟ್ಟು 8 ಮನೆಗಳು ಕುಸಿದಿವೆ ಎಂದು ತಿಳಿಸಿದ್ದಾರೆ. ತಗ್ಗು ಪ್ರದೇಶವಿರುವ ಪ್ರದೇಶಗಳಲ್ಲಿ ಮಳೆ ನೀರು ನಿಂತು ಜನಜೀವನಕ್ಕೆ ತೊಂದರೆಯಾಗಿದೆ.

ತಹಸೀಲ್ದಾರ್ ಭೇಟಿ: ಭಾರೀ ಮಳೆಯಿಂದ ತಾಲ್ಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ತಹಸೀಲ್ದಾರ್ ಕೀರ್ತಿ ಚಾಲಕ ಶುಕ್ರವಾರ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕುಂಚಗನೂರು, ಕಮಲದಿನ್ನಿ, ತಂಗಡಗಿ ಭಾಗದ ಗ್ರಾಮಗಳಿಗೆ ತೆರಳಿದ್ದ ತಹಸೀಲ್ದಾರ್‌ರು ಪ್ರವಾಹದ ಪರಿಸ್ಥಿತಿ ಎದುರಾದ್ದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಗ್ರಾಮಸ್ಥರೊಂದಿಗೆ ಚರ್ಚಿಸಿದ್ದಾರೆ. ಕಂದಾಯ ನಿರೀಕ್ಷಕ ಡಿ.ಎಸ್.ತಳವಾರ(ಪವನ್) ಇದ್ದರು.

Latest News

ಸುಮಾರು 6 ಕೀಲೋ ಮೀಟರ್ ವರೆಗೆ ನಿಂತ ವಾಹನ ದಟ್ಟನೆ

ಸುಮಾರು 6 ಕೀಲೋ ಮೀಟರ್ ವರೆಗೆ ನಿಂತ ವಾಹನ ದಟ್ಟನೆ

ತಾಳಿಕೋಟೆ: ಡೋಣಿ ನದಿಯ ಪ್ರವಾಹದಿಂದ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆ ಜಲಾವೃತವಾಗಿರುವದು ಒಂದು ಕಡೆಯಾದರೆ

ಟ್ರ್ಯಾಕ್ಟ‌ರ್ ಹಾಯ್ದು ಏಳು ವರ್ಷದ ಬಾಲಕಿ ಸಾವು

ಟ್ರ್ಯಾಕ್ಟ‌ರ್ ಹಾಯ್ದು ಏಳು ವರ್ಷದ ಬಾಲಕಿ ಸಾವು

ಮುಧೋಳ: ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಿಂದ ಕೆಳಗೆ ಬಿದ್ದ ಬಾಲಕಿ ಮೇಲೆ ಹಿಂದಿನಿಂದ ಟ್ರ್ಯಾಕ್ಟ‌ರ್

ಶಾಸಕ ನಾಡಗೌಡರಿಂದ ಭೂಮಿಪೂಜೆ: ಆರೋಗ್ಯ ಘಟಕ ಪ್ರಯೋಗಾಲಯ ಉದ್ಘಾಟನೆ

ಶಾಸಕ ನಾಡಗೌಡರಿಂದ ಭೂಮಿಪೂಜೆ: ಆರೋಗ್ಯ ಘಟಕ ಪ್ರಯೋಗಾಲಯ ಉದ್ಘಾಟನೆ

ಮುದ್ದೇಬಿಹಾಳ : ಪಟ್ಟಣದ ಸರ್ಕಾರಿ ಆಸ್ಪತ್ರೆಯ ನವೀಕರಣ ಕಾರ್ಯದ ಭೂಮಿಪೂಜೆ ಹಾಗೂ ತಾಲ್ಲೂಕು ಆಸ್ಪತ್ರೆಯ

91 ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ: ಕಾರ್ಮಿಕ ಸಚಿವ ಲಾಡ್

91 ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ: ಕಾರ್ಮಿಕ ಸಚಿವ ಲಾಡ್

ಮೈಸೂರು,ಆ.06: ರಾಜ್ಯದಲ್ಲಿ ಶೇ 83 ರಷ್ಟು ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, ಸಣ್ಣ ವೃತ್ತಿಯಲ್ಲಿ ತೊಡಗಿರುವ

ಬಡವರ ಕೈಗೆ ಹಣ ಬಂದಾಗ ಮಾತ್ರ ದೇಶದ ಪ್ರಗತಿ: ಸಚಿವ ಲಾಡ್

ಬಡವರ ಕೈಗೆ ಹಣ ಬಂದಾಗ ಮಾತ್ರ ದೇಶದ ಪ್ರಗತಿ: ಸಚಿವ ಲಾಡ್

ಶಿವಮೊಗ್ಗ, ಆಗಸ್ಟ್ 04 : ಬಡವರ ಕೈಯಲ್ಲಿ ಹಣ ಬಂದಾಗ ಮಾತ್ರ ದೇಶದ ಪ್ರಗತಿಯಾಗಲಿದ್ದು, ಬಡವರಿಗಾಗಿ ರೂಪಿಸಿರುವ ಯೋಜನೆಗಳನ್ನು ಅವರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಕರೆ ನೀಡಿದರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ಸೋಮವಾರ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸದುಗೌಡ ಆಯ್ಕೆ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸದುಗೌಡ ಆಯ್ಕೆ

ಮುಧೋಳ : ನಗರದ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಕೋ ಅರ್ಡಿನೆಟರ್ ಅಗಿದ್ದ ನಗರದ ಸದುಗೌಡ ಲಕ್ಷ್ಮಣಗೌಡ ಪಾಟೀಲ್ ಅವರನ್ನು ಮುಧೋಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ರಾಜ್ಯದ ಗಣ್ಯರು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ