Eye-catching horse dance, dollina mela: Sangolli Rayanna Murthy's grand procession

ಗಮನ ಸೆಳೆದ ಕುದುರೆ ಕುಣಿತ, ಡೊಳ್ಳಿನ ಮೇಳ : ಸಂಗೊಳ್ಳಿ ರಾಯಣ್ಣ ಮೂರ್ತಿ ಅದ್ದೂರಿ ಮೆರವಣಿಗೆ

ಗಮನ ಸೆಳೆದ ಕುದುರೆ ಕುಣಿತ, ಡೊಳ್ಳಿನ ಮೇಳ : ಸಂಗೊಳ್ಳಿ ರಾಯಣ್ಣ ಮೂರ್ತಿ ಅದ್ದೂರಿ ಮೆರವಣಿಗೆ

ಮುದ್ದೇಬಿಹಾಳ : ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಷ್ಠಾಪಿಸಲು ಸಿದ್ಧಗೊಳಿಸಿರುವ ರಾಯಣ್ಣನವರ ಕಂಚಿನ ಪುತ್ಥಳಿಯನ್ನು ಪಟ್ಟಣದಲ್ಲಿ ಭಾನುವಾರ ಭವ್ಯ ಮೆರವಣಿಗೆ ಮೂಲಕ ಕರೆತರಲಾಯಿತು.

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿ.ಎಲ್.ಬಿರಾದಾರ ಕಲ್ಯಾಣ ಮಂಟಪದಿಂದ ವಿವಿಧ ಊರುಗಳಿಂದ ಆಗಮಿಸಿದ್ದ ಡೊಳ್ಳಿನ ಮೇಳದವರು, ವಿಶೇಷವಾಗಿ ಕುದುರೆ ಕುಣಿತದ ತಂಡ ಅಲಂಕಾರಿಕ ಬೊಂಬೆಗಳು ಮೆರವಣಿಗೆಯ ಕಳೆ ಹೆಚ್ಚಿಸಿದ್ದವು. ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತಕ್ಕೆ ತೆರಳಿ ಮೆರವಣಿಗೆ ಸಮಾಪ್ತಿಗೊಂಡಿತು.

ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಎನ್.ಮದರಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ, ವಾಯ್. ಎಚ್. ವಿಜಯಕರ್, ಸೋಮನಗೌಡ ಪಾಟೀಲ ನಡಹಳ್ಳಿ,ಸಂಗಣ್ಣ ಮೇಲಿನಮನಿ, ಸಾಯೇಬಣ್ಣ ವಾಲೀಕಾರ, ಮುತ್ತಣ್ಣ ಮುತ್ತಣ್ಣವರ, ಲಕ್ಷ್ಮಣ ಬಿಜ್ಜೂರ, ಸಂತೋಷ ನಾಯ್ಕೋಡಿ, ಬಿ.ಎಸ್.ಮೇಟಿ, ನಾಗಪ್ಪ ರೂಢಗಿ, ಸಂತೋಷ ನಡಗೇರಿ, ಪುರಸಭೆ ಸದಸ್ಯರು, ಮಹಿಳಾ ಮುಖಂಡರು ಸೇರಿದಂತೆ ಹಾಲುಮತ ಸಮಾಜದ ನೂರಾರು ಜನರು ಭಾಗಿಯಾಗಿದ್ದರು.

Latest News

ಮುದ್ದೇಬಿಹಾಳ : ಮಳೆಗೆ 17 ಮನೆಗಳಿಗೆ ಭಾಗಶಃ ಹಾನಿ

ಮುದ್ದೇಬಿಹಾಳ : ಮಳೆಗೆ 17 ಮನೆಗಳಿಗೆ ಭಾಗಶಃ ಹಾನಿ

ಮುದ್ದೇಬಿಹಾಳ : ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ವಿರಾಮ ನೀಡುತ್ತ ಸುರಿಯುತ್ತಿರುವ ಮಳೆಯಿಂದ ಆಸ್ತಿಪಾಸ್ತಿಗಳಿಗೆ

ಸುಮಾರು 6 ಕೀಲೋ ಮೀಟರ್ ವರೆಗೆ ನಿಂತ ವಾಹನ ದಟ್ಟನೆ

ಸುಮಾರು 6 ಕೀಲೋ ಮೀಟರ್ ವರೆಗೆ ನಿಂತ ವಾಹನ ದಟ್ಟನೆ

ತಾಳಿಕೋಟೆ: ಡೋಣಿ ನದಿಯ ಪ್ರವಾಹದಿಂದ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆ ಜಲಾವೃತವಾಗಿರುವದು ಒಂದು ಕಡೆಯಾದರೆ

ಟ್ರ್ಯಾಕ್ಟ‌ರ್ ಹಾಯ್ದು ಏಳು ವರ್ಷದ ಬಾಲಕಿ ಸಾವು

ಟ್ರ್ಯಾಕ್ಟ‌ರ್ ಹಾಯ್ದು ಏಳು ವರ್ಷದ ಬಾಲಕಿ ಸಾವು

ಮುಧೋಳ: ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಿಂದ ಕೆಳಗೆ ಬಿದ್ದ ಬಾಲಕಿ ಮೇಲೆ ಹಿಂದಿನಿಂದ ಟ್ರ್ಯಾಕ್ಟ‌ರ್

ಶಾಸಕ ನಾಡಗೌಡರಿಂದ ಭೂಮಿಪೂಜೆ: ಆರೋಗ್ಯ ಘಟಕ ಪ್ರಯೋಗಾಲಯ ಉದ್ಘಾಟನೆ

ಶಾಸಕ ನಾಡಗೌಡರಿಂದ ಭೂಮಿಪೂಜೆ: ಆರೋಗ್ಯ ಘಟಕ ಪ್ರಯೋಗಾಲಯ ಉದ್ಘಾಟನೆ

ಮುದ್ದೇಬಿಹಾಳ : ಪಟ್ಟಣದ ಸರ್ಕಾರಿ ಆಸ್ಪತ್ರೆಯ ನವೀಕರಣ ಕಾರ್ಯದ ಭೂಮಿಪೂಜೆ ಹಾಗೂ ತಾಲ್ಲೂಕು ಆಸ್ಪತ್ರೆಯ

ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಲೋಕಾರ್ಪಣೆ

ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಲೋಕಾರ್ಪಣೆ

ಸಿದ್ಲೀಪುರ(ಶಿವಮೊಗ್ಗ ಜಿಲ್ಲೆ) ಆಗಸ್ಟ್‌ 04: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಶಿವಮೊಗ್ಗ ತಾಲೂಕಿನ ಸಿದ್ಲೀಪುರದಲ್ಲಿ ನಿರ್ಮಿಸಲಾದ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳನ್ನು ಇಂದು ಲೋಕಾರ್ಪಣೆಗೊಳಿಸಿ ಕಾರ್ಮಿಕರ ಬಳಕೆಗೆ ಅನುಕೂಲ ಮಾಡಿಕೊಟ್ಟರು. ಜಿಲ್ಲೆಯ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಹಾಗೂ ಅವರ ಕುಟುಂಬದ ಅವಲಂಬಿತರು ಉಳಿದುಕೊಳ್ಳಲು ಈ ವಸತಿ

ಬಡವರ ಕೈಗೆ ಹಣ ಬಂದಾಗ ಮಾತ್ರ ದೇಶದ ಪ್ರಗತಿ: ಸಚಿವ ಲಾಡ್

ಬಡವರ ಕೈಗೆ ಹಣ ಬಂದಾಗ ಮಾತ್ರ ದೇಶದ ಪ್ರಗತಿ: ಸಚಿವ ಲಾಡ್

ಶಿವಮೊಗ್ಗ, ಆಗಸ್ಟ್ 04 : ಬಡವರ ಕೈಯಲ್ಲಿ ಹಣ ಬಂದಾಗ ಮಾತ್ರ ದೇಶದ ಪ್ರಗತಿಯಾಗಲಿದ್ದು, ಬಡವರಿಗಾಗಿ ರೂಪಿಸಿರುವ ಯೋಜನೆಗಳನ್ನು ಅವರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಕರೆ ನೀಡಿದರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ಸೋಮವಾರ