A teacher who arranged a bus to the last village of the district

ಜಿಲ್ಲೆಯ ಕೊನೆಯ ಗ್ರಾಮಕ್ಕೂ ಬಸ್ ವ್ಯವಸ್ಥೆ ಮಾಡಿಸಿದ ಶಿಕ್ಷಕ

ಜಿಲ್ಲೆಯ ಕೊನೆಯ ಗ್ರಾಮಕ್ಕೂ ಬಸ್ ವ್ಯವಸ್ಥೆ ಮಾಡಿಸಿದ ಶಿಕ್ಷಕ

ಕೊಡೇಕಲ್ಲ : ಯಾದಗಿರಿ ಜಿಲ್ಲೆಯ ಕಟ್ಟ ಕಡೆಯ ಗ್ರಾಮ ಬಸ್ಸಾಪುರ. ಈ ಗ್ರಾಮವು ಇಲ್ಲಿಯವರೆಗೆ ಬಸ್ಸಿನ ಮುಖವನ್ನೇ ನೋಡಿರಲಿಲ್ಲ. ಗ್ರಾಮದ ಜನರಿಗೆ ಹಾಗೂ ಮುಂದಿನ ಶಿಕ್ಷಣಕ್ಕಾಗಿ ಮಕ್ಕಳಿಗೆ ಬೇರೆ ಗ್ರಾಮಕ್ಕೆ ಹೋಗಿ ಬರಲು ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತುಂಬಾ ತೊಂದರೆಯಾಗಿತ್ತು.

ಇದನ್ನು ಗಮನಿಸಿದ ಶಿಕ್ಷಕರಾದ ಶ್ರೀ ನೀಲಪ್ಪ ತೆಗ್ಗಿಯವರು, ಗ್ರಾಮಸ್ಥರ ಸಹಕಾರದಿಂದ ಘಟಕ ವ್ಯವಸ್ಥಾಪಕರು ಸುರಪುರ ಇವರಿಗೆ ಮನವಿಯನ್ನು ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಘಟಕ ವ್ಯವಸ್ಥಾಪಕರು ಕೇವಲ 15 ದಿನಗಳಲ್ಲಿ ಬಸ್ಸಾಪುರ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆಯನ್ನು ಮಾಡಿದರು. ಹೀಗಾಗಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು, ವಿಶೇಷವಾಗಿ ಬೇರೆ ಗ್ರಾಮದಲ್ಲಿ ಶಾಲೆಗೆ ದಾಖಲಾದ ಹೆಣ್ಣು ಮಕ್ಕಳು ಬಹಳಷ್ಟು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಘಟಕ ವ್ಯವಸ್ಥಾಪಕರಾದ ಶ್ರೀ ಭೀಮಪ್ಪ ರಾಠೋಡ ಮತ್ತು ಸಂಗಮೇಶ ದಳವಾಯಿ ಸರ್ ಅವರಿಗೆ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಬಸ್ಸನ್ನು ಟೆಂಗಿನ ಗರಿಗಳಿಂದ ಅಲಂಕಾರಿಸಿ ಪೂಜೆ ಮಾಡುವಲಾಯಿತು. ಹಾಗೂ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಇವರಿಗೆ ‌ಶಾಲು ಹಾಗೂ ಹಾರ ಹಾಕುವ ಮೂಲಕ ಸನ್ಮಾನಿಸಲಾಯಿತು.
ಗ್ರಾಮಕ್ಕೆ ಬಸ್ಸು ಬರಲು ಸತತ ಪ್ರಯತ್ನ ಮಾಡಿದ ಶ್ರೀ ನೀಲಪ್ಪ ತೆಗ್ಗಿ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಊರಿನ ಮುಖಂಡರಾದ ನಿಂಗಪ್ಪ ಕೊಂಡೇಕಾರ, ನೀಲಕಂಠ ಕೊಂಡೇಕಾರ, ಸಿದ್ದಪ್ಪ ಬಿರಾದಾರ, ಶಂಕ್ರಪ್ಪ ಕೊಂಡೇಕಾರ, ಸುರೇಶ ಬಿರಾದಾರ, ಪವನ್ ಕೊಂಡೇಕಾರ, ಯಮನಪ್ಪ ಜೈನಾಪುರ ಹಾಗೂ ಇತರರು ಉಪಸ್ಥಿತರಿದ್ದರು.

ಈ ಗ್ರಾಮದ ಜನರು ರೈತರು ಮತ್ತು ಕೂಲಿ ಕೆಲಸಗಾರರು. ಇವರು ತಮ್ಮ ಮಕ್ಕಳನ್ನು ಮುಂದಿನ ಶೈಕ್ಷಣಕ್ಕಾಗಿ ಹೆಚ್ಚಿನ ಹಣವನ್ನು ನೀಡಿ ಹಾಸ್ಟೆಲ್ ಇರುವ ಶಾಲೆಗಳಿಗೆ, ಇಲ್ಲವೆ ತಮ್ಮ ಸಂಬಂಧಿಕರು ಇರುವ ಊರುಗಳಲ್ಲಿನ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ನಾನು ಹೇಗಾದರೂ ಮಾಡಿ ಈ ಊರಿಗೆ ಬಸ್ಸಿನ ವ್ಯವಸ್ಥೆ ಮಾಡಲೇಬೇಕು ಎಂದು ನಿರ್ಧರಿಸಿದೆನು. ಗ್ರಾಮಸ್ಥರ ಸಹಕಾರದಿಂದ ಮನವಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಈ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಮಾಡಿದ ಘಟಕ ವ್ಯವಸ್ಥಾಪಕರಾದ ಶ್ರೀ ಭೀಮಪ್ಪ ರಾಠೋಡ ಸಾಹೇಬರಿಗೆ ಹಾಗೂ ಶ್ರೀ ಸಂಗಣ್ಣ ದಳವಾಯಿ ಸರ್ ಅವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಶ್ರೀ ನೀಲಪ್ಪ ತೆಗ್ಗಿ ಶಿಕ್ಷಕರು ಬಸ್ಸಾಪೂರ

ನಮ್ಮೂರಿಗೆ ಬಸ್ಸಿನ ಅವಶ್ಯಕತೆ ಬಹಳಷ್ಟು ಇತ್ತು. ನಮ್ಮೂರ ಶಿಕ್ಷಕರಾದ ಶ್ರೀ ನೀಲಪ್ಪ ತೆಗ್ಗಿ ಇವರ ಸತತ ಪ್ರಯತ್ನದಿಂದಾಗಿ, ನಮ್ಮೂರಿಗೆ ಇಂದು ಬಸ್ಸಿನ ವ್ಯವಸ್ಥೆಯಾಗಿದೆ. ಅದಕ್ಕಾಗಿ ಶಿಕ್ಷಕರಾದ ಶ್ರೀ ನೀಲಪ್ಪ ತೆಗ್ಗಿ ಸರ್ ಇವರಿಗೆ ನಮ್ಮ ಮಕ್ಕಳ ಮತ್ತು ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ. ಶ್ರೀ ನಿಂಗಪ್ಪ ಕೊಂಡೇಕಾರ. ಶ್ರೀ ನೀಲಕಂಠ ಕೊಂಡೇಕಾರ. ಬಸ್ಸಾಪೂರ.

ಬಸ್ ಬರುವ ಸಮಯ: ಹುಣಸಗಿ ಯಿಂದ ಹೊರಟು ಕೊಡೇಕಲ್ಲ, ಮಾರನಾಳ, ಯಣ್ಣೀವಡಗೇರಿಯಿಂದ ಒಳಗಡೆ 4 ಕಿಲೋ ಮೀಟರ್ ದೂರದಲ್ಲಿರುವ ಬಸ್ಸಾಪೂರಕ್ಕೆ ಬೆಳಿಗ್ಗೆ 7. 30 ಕ್ಕೆ ಹಾಗೂ ಸಾಯಂಕಾಲ 4.30 ಕ್ಕೆ ಬಂದು ನಾಲತ್ವಾಡಕ್ಕೆ ಹೊಗುತ್ತದೆ.

ವರದಿಗಾರ : ಶಿವು ರಾಠೋಡ

Latest News

ಪಹಲ್ಗಾಮ್ ದಾಳಿಗೆ ಭಾರತದ ಸಮರ್ಥ ಪ್ರತ್ಯುತ್ತರ : ಶಾಸಕ ನಾಡಗೌಡ

ಪಹಲ್ಗಾಮ್ ದಾಳಿಗೆ ಭಾರತದ ಸಮರ್ಥ ಪ್ರತ್ಯುತ್ತರ : ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮಲ್ಲಿರುವ ಆಂತರಿಕ ಭಿನ್ನಭಿಪ್ರಾಯವೇ ದೇಶದ ನಾಗರಿಕರ ಮೇಲಿನ ದಾಳಿಗಳಂತಹ ಘಟನೆಗಳಿಗೆ ವೈರಿ

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಧಾರವಾಡ, ಆ.15: ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಮುದ್ದೇಬಿಹಾಳ : ರೈತರ ಬೆಳೆದ ಬೆಳೆ ವಿವರಗಳನ್ನು ದಾಖಲಿಸುವಲ್ಲಿ ಬೆಳೆಯ ಸಮೀಕ್ಷೆದಾರರ ಪಾತ್ರವು ಅತಿ

ಬಲಗೈ ಸಮುದಾಯದಿಂದ ಪ್ರತಿಭಟನೆ ನ್ಯಾ. ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಆಗ್ರಹ

ಬಲಗೈ ಸಮುದಾಯದಿಂದ ಪ್ರತಿಭಟನೆ ನ್ಯಾ. ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಆಗ್ರಹ

ಮುದ್ದೇಬಿಹಾಳ : ಕುಲಶಾಸ್ತ್ರಿಯ ಅಧ್ಯಯನದ ಕೊರತೆ, ಬಲಗೈ ಸಮುದಾಯದ ವಿರುದ್ಧ ದ್ವೇಷಪೂರಿತ ನಿರ್ಧಾರವಾಗಿರುವ ಒಳಮೀಸಲಾತಿ

ಶ್ರಮಿಕ ವಸತಿ ಶಾಲೆ: ಶಾಸಕರ ಬೇಡಿಕೆ ಪರಿಶೀಲನೆಗೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಶ್ರಮಿಕ ವಸತಿ ಶಾಲೆ: ಶಾಸಕರ ಬೇಡಿಕೆ ಪರಿಶೀಲನೆಗೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಬೆಂಗಳೂರು, ಆಗಸ್ಟ್‌ 13: ಕಾರ್ಮಿಕ ಇಲಾಖೆ ವತಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿ ಶ್ರಮಿಕ ವಸತಿ ಶಾಲೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ತಮ್ಮ ತಮ್ಮ ಕ್ಷೇತ್ರದಲ್ಲೂ ಶಾಲೆಗಳನ್ನು ಆರಂಭಿಸಬೇಕು ಎಂದು ಕೆಲವು ಶಾಸಕರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ವಿಧಾನಸಭೆಯಲ್ಲಿ ಇಂದು ತಿಳಿಸಿದರು. ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್‌ ಯು. ಬಿ. ಬಣಕಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು,

ಜಿಲ್ಲೆಯ ಕೊನೆಯ ಗ್ರಾಮಕ್ಕೂ ಬಸ್ ವ್ಯವಸ್ಥೆ ಮಾಡಿಸಿದ ಶಿಕ್ಷಕ

ಜಿಲ್ಲೆಯ ಕೊನೆಯ ಗ್ರಾಮಕ್ಕೂ ಬಸ್ ವ್ಯವಸ್ಥೆ ಮಾಡಿಸಿದ ಶಿಕ್ಷಕ

ಕೊಡೇಕಲ್ಲ : ಯಾದಗಿರಿ ಜಿಲ್ಲೆಯ ಕಟ್ಟ ಕಡೆಯ ಗ್ರಾಮ ಬಸ್ಸಾಪುರ. ಈ ಗ್ರಾಮವು ಇಲ್ಲಿಯವರೆಗೆ ಬಸ್ಸಿನ ಮುಖವನ್ನೇ ನೋಡಿರಲಿಲ್ಲ. ಗ್ರಾಮದ ಜನರಿಗೆ ಹಾಗೂ ಮುಂದಿನ ಶಿಕ್ಷಣಕ್ಕಾಗಿ ಮಕ್ಕಳಿಗೆ ಬೇರೆ ಗ್ರಾಮಕ್ಕೆ ಹೋಗಿ ಬರಲು ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತುಂಬಾ ತೊಂದರೆಯಾಗಿತ್ತು. ಇದನ್ನು ಗಮನಿಸಿದ ಶಿಕ್ಷಕರಾದ ಶ್ರೀ ನೀಲಪ್ಪ ತೆಗ್ಗಿಯವರು, ಗ್ರಾಮಸ್ಥರ ಸಹಕಾರದಿಂದ ಘಟಕ ವ್ಯವಸ್ಥಾಪಕರು ಸುರಪುರ ಇವರಿಗೆ ಮನವಿಯನ್ನು ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಘಟಕ ವ್ಯವಸ್ಥಾಪಕರು ಕೇವಲ