Workers' money should be used for workers' welfare: Minister Lad

ಕಾರ್ಮಿಕರ ಹಣ ಕಾರ್ಮಿಕರ ಕಲ್ಯಾಣಕ್ಕೇ ಬಳಕೆಯಾಗಬೇಕು: ಸಚಿವ ಲಾಡ್

ಕಾರ್ಮಿಕರ ಹಣ ಕಾರ್ಮಿಕರ ಕಲ್ಯಾಣಕ್ಕೇ ಬಳಕೆಯಾಗಬೇಕು: ಸಚಿವ ಲಾಡ್

ಬೆಂಗಳೂರು, ಆಗಸ್ಟ್‌ 13: ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಜಿಲ್ಲೆಗೊಂದರಂತೆ ಶ್ರಮಿಕ ವಸತಿ ಶಾಲೆ ಆರಂಭ ಮಾಡುವುದರ ಉದ್ದೇಶವನ್ನು ಸವಿವರವಾಗಿ ವಿವರಿಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು, ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿ ಸರ್ಕಾರದ ನಿಲುವಿನ ಬಗ್ಗೆ ತಿಳಿಸಿದರು.

ಕಾರ್ಮಿಕರಿಂದ ಸೆಸ್‌ ಸಂಗ್ರಹಿಸಿದನ್ನು ಬೇರೆಯವರಿಗೆ, ಬೇರೆ ಇಲಾಖೆಗೆ ನೀಡಲಾಗದು. ಅದಕ್ಕೆ ಅವಕಾಶ ಇಲ್ಲ. ಆದ್ದರಿಂದ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಗಳನ್ನು ತೆರೆಯುತ್ತಿದ್ದೇವೆ. ಈ ಬಗ್ಗೆ ಸ್ಪಷ್ಟ ನಿರ್ದೇಶನ ಇದೆ ಎಂದು ಸಚಿವ ಲಾಡ್‌ ಅವರು ಹೇಳಿದರು.

ʼಸಾವಿರಾರು ಕೋಟಿ ಹಣ ಇದೆ ಎಂಬ ಮಾತ್ರಕ್ಕೆ ಜಿಲ್ಲೆಗೊಂದರಂತೆ ವಸತಿ ಶಾಲೆ ತೆರೆಯುತ್ತೀದ್ದೀರಾ? ಎಂಬ ಬಿಜೆಪಿ ಸದಸ್ಯ ಎನ್‌ ರವಿಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಲಾಡ್‌ ಅವರು, ಮಂಡಳಿಯಲ್ಲಿ ಹಣ ಇದೆ ಎಂಬ ಕಾರಣದಿಂದ ವಸತಿ ಶಾಲೆ ಆರಂಭಿಸುತ್ತಿಲ್ಲ. ಎಲ್ಲಾ ಸರ್ಕಾರದಲ್ಲೂ ವಸತಿ ಶಾಲೆ ಆರಂಭವಾಗಿವೆ. ಬಿಸಿಎಂ ಇಲಾಖೆ ಸೇರಿದಂತೆ ಹಲವು ಇಲಾಖೆಯಲ್ಲಿ ವಸತಿ ಶಾಲೆಗಳಿವೆ. ವಸತಿ ಶಾಲೆಗಳನ್ನು ತೆರೆದರೆ ಸರ್ಕಾರಿ ಶಾಲೆಗಳು ಮುಚ್ಚುತ್ತವೆ ಎಂಬ ಭಯ ಬೇಡ. ಹಾಗಾದರೆ ಯಾವುದೇ ಇಲಾಖೆಯಿಂದ ವಸತಿ ಶಾಲೆ ಆರಂಭಿಸಬಾರದೇ ಎಂದು ಪ್ರಶ್ನೆ ಮಾಡಿದರು.

ಸದನದಲ್ಲಿ ಸುಳ್ಳು ಮಾತನಾಡಲಾಗದು. ಸುಳ್ಳು ಮಾಹಿತಿ ನೀಡಲಾಗದು. ಆದ್ದರಿಂದ ಸರ್ಕಾರದ ನಿಯಮಾವಳಿಗಳು ಏನಿವೆ ಅದರಂತೆ ಕೆಲಸ ಮಾಡಬೇಕು. ನಿರ್ಮಾಣ ಕಾರ್ಮಿಕರು ಕೆಲಸಕ್ಕಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ವಲಸೆ ಹೋಗ್ತ ಇರುತ್ತಾರೆ. ಅವರು ಮಕ್ಕಳನ್ನು ಒಂದು ನಿಗದಿತ ವಸತಿ ಶಾಲೆಯಲ್ಲಿ ದಾಖಲು ಮಾಡಿದರೆ ಅನುಕೂಲವಾಗಲಿದೆ. ಎಲ್ಲರಿಗೂ ಇರುವ ಕಾಳಜಿಯಂತೆಯೇ ನಮಗೂ ಇದೆ ಎಂದರು.

ಬೇರೆ ಉದ್ದೇಶಕ್ಕೆ ಸೆಸ್‌ ಬಳಕೆಗೆ ಅವಕಾಶ ಇಲ್ಲ:
ಯಾವ ಉದ್ದೇಶಕ್ಕಾಗಿ ಸೆಸ್‌ ಸಂಗ್ರಹ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸಬೇಕು ಎಂಬ ನಿಯಮ ಇದೆ. ಬೇರೆ ಇಲಾಖೆಗೆ ಹಾಗೂ ಬೇರೆಯವರಿಗೆ ಅದನ್ನು ಕೊಡಲಾಗದು. ಸಾರಿಗೆಯಿಂದ ಸೆಸ್‌ ಸಂಗ್ರಹಿಸಿದರೆ ಅದನ್ನು ಅಸಂಘಟಿತ ಕಾರ್ಮಿಕರಿಗೆ ಕೊಡಲು ಬರಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ ಸಹ ಹೇಳಿದೆ ಎಂದು ವಿವರಿಸಿದರು.

ನಮ್ಮಲ್ಲಿ ಹಾಸ್ಟೆಲ್‌ಗೆ ಸಾಕಷ್ಟು ಬೇಡಿಕೆ ಇದೆ. ಹುಬ್ಬಳ್ಳಿ-ಧಾರವಾಡದಲ್ಲಿ ಇನ್ನಷ್ಟು ಹಾಸ್ಟೆಲ್‌ ಬೇಕು ಎಂದು ಮಕ್ಕಳು ಕರೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ ಮಾಡಿದರೆ ಅನುಕೂಲವಾಗಲಿದೆ. ಒಟ್ಟಿನಲ್ಲಿ ಹಣ ಸದುಪಯೋಗ ಮಾಡಬೇಕು. ಕೆಲವು ಹಾಸ್ಟೆಲ್‌ ಪ್ರವೇಶಕ್ಕೆ ಪರೀಕ್ಷೆ ಇದೆ. ಪ್ರತಿಭಾವಂತರು ಮಾತ್ರವೇ ಅಲ್ಲಿ ಪ್ರವೇಶ ಪಡೆಯುತ್ತಾರೆ. ನಿರ್ಮಾಣ ಕ್ಷೇತ್ರದಲ್ಲಿನ ಗೋಡೆ ಕಟ್ಟುವವರು, ಪೇಂಟರ್‌, ಬಡಗಿಗಳ ಮಕ್ಕಳಿಗೆ ಒಳ್ಳೆಯ ಹಾಸ್ಟೆಲ್‌ ಸಿಕ್ಕರೆ ಅವರು ಓದುತ್ತಾರೆ ಎಂದರು.

ನಮ್ಮಲ್ಲಿ ಹಣ ಇದೆ. ಕಳೆದ ಮೂರು ವರ್ಷದಲ್ಲಿ ೧೪ ಲಕ್ಷ ಮಕ್ಕಳಿಗೆ ಪ್ರೋತ್ಸಾಹಧನ ಕೊಟ್ಟಿದ್ದೇವೆ. ಕೋಟ್ಯಂತರ ಹಣ ಬರ್ತಾ ಇದೆ, ಅದು ಸರಿಯಾಗಿ ಬಳಕೆ ಆಗಬೇಕು ಎಂದು ವಿವರಿಸಿದರು.

ಇಲಾಖೆಯಿಂದ ಕೌಶಲ್ಯ ಕೇಂದ್ರ ಆರಂಭ:
ಕಟ್ಟಡ ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ ಧಾರವಾಡ ಮತ್ತು ಮೈಸೂರಿನಲ್ಲಿ ಕೌಶಲ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಇಂದಿನ ಉದ್ಯೋಗಕ್ಕೆ ಬೇಕಾದ ಕೌಶಲ ತರಬೇತಿ ನೀಡುತ್ತೇವೆ. ಕೇವಲ ಪ್ರಮಾಣ ಪತ್ರ ಕೊಟ್ಟರೆ ಪ್ರಯೋಜನ ಇಲ್ಲ. ತರಬೇತಿ ಕಾಲಕಾಲಕ್ಕೆ ಬದಲಾಗುತ್ತವೆ. ಈ ತರಬೇತಿಯನ್ನ ಸರ್ಕಾರ ಕೊಡಲ್ಲ. ಉದ್ಯಮದವರೇ ಕೊಡ್ತಾರೆ. ಅವರೇ ಸಿಲಬಸ್‌ ಕೊಡ್ತಾರೆ. ಸರ್ಕಾರ ಕೊಡಲ್ಲ ʼಉದ್ಯಮದವರೇ ತರಬೇತಿ ಕೊಡತಾರೆ. ಅಂತರರಾಷ್ಟ್ರೀಯ ಮಟ್ಟದ ತರಬೇತಿಯನ್ನು ನಾವು ಕೊಡ್ತಿವಿ ಎಂದರು.

ನಾವು ವೈರಿಗಳಲ್ಲ, ಸಲಹೆ ನೀಡಿ: ಯಾವುದೇ ವಿಷಯದ ಬಗ್ಗೆ ಸಲಹೆ ನೀಡಿ. ಮುಕ್ತ ಹೃದಯದಿಂದ ನಾವು ಅದನ್ನು ಸ್ವೀಕರಿಸುತ್ತೇವೆ. ನಾವು ಯಾರೂ ವೈರಿಗಳಲ್ಲ. ಟೀಕೆ ಮಾಡಿದರೆ ವೈಷಮ್ಯ ಮಾಡಲ್ಲ. ಗೌರವಿಸುತ್ತೇನೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಸದಸ್ಯ ಬೋಜೆಗೌಡ ಅವರು, ಕಾರ್ಮಿಕ ಸಚಿವರು ಒಳ್ಳೆಯ ಕೆಲಸ ಮಾಡ್ತಾ ಇದ್ದೀರಿ. ಕಾರ್ಮಿಕರ ಮಕ್ಕಳು ಕಾರ್ಮಿಕರೇ ಆಗಬೇಕಿಲ್ಲ. ಅವರೂ ಒಳ್ಳೆಯ ತರಬೇತಿ ಪಡೆಯಲಿ. ವಿದ್ಯಾವಂತರಾಗಲಿ ಎಂದರು.

Latest News

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ನಾರಾಯಣಪುರ : ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೊಡೇಕಲ್ ಉಪತಶೀಲ್ದಾರ ಕಲ್ಲಪ್ಪ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

​ ಮುಧೋಳ : ದೇಶಾಭಿಮಾನ ಪ್ರತಿಯೊಬ್ಬರಲ್ಲಿ ಸ್ವಪ್ರೇರಣೆಯಿಂದ ಮೂಡಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು

ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮದ ಬೀಜ ಬಿತ್ತಿ : ಅಶೋಕ ಮಣಿ

ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮದ ಬೀಜ ಬಿತ್ತಿ : ಅಶೋಕ ಮಣಿ

ಮುದ್ದೇಬಿಹಾಳ : ಮಕ್ಕಳ ಮನಸ್ಸಿನಲ್ಲಿ ಬಾಲ್ಯದಿಂದಲೇ ದೇಶಪ್ರೇಮದ ಬೀಜ ಬಿತ್ತಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಮುದ್ದೇಬಿಹಾಳ : ರೈತರ ಬೆಳೆದ ಬೆಳೆ ವಿವರಗಳನ್ನು ದಾಖಲಿಸುವಲ್ಲಿ ಬೆಳೆಯ ಸಮೀಕ್ಷೆದಾರರ ಪಾತ್ರವು ಅತಿ ಮುಖ್ಯವಾಗಿದ್ದು ಅವರ ಬೇಡಿಕೆಯಂತೆ ಐಡಿ ಕಾರ್ಡ್ ಹಾಗೂ ಕಿಟ್ ವಿತರಿಸಲಾಗಿದೆ ಎಂದು ತಹಸೀಲ್ದಾರ್ ಕೀರ್ತಿ ಚಾಲಕ್ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರ ಹಾಗೂ ಸರ್ಕಾರದ ಪ್ರತಿನಿಧಿಯಾಗಿ ಈ ಬೆಳೆ ಸಮೀಕ್ಷೆದಾರರು ಕಾರ್ಯನಿರ್ವಹಿಸಲಿದ್ದಾರೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಎಸ್. ಡಿ. ಭಾವಿಕಟ್ಟಿ, ಕೃಷಿ ಅಧಿಕಾರಿಗಳಾದ ಗೋವಿಂದರೆಡ್ಡಿ

ಬಲಗೈ ಸಮುದಾಯದಿಂದ ಪ್ರತಿಭಟನೆ ನ್ಯಾ. ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಆಗ್ರಹ

ಬಲಗೈ ಸಮುದಾಯದಿಂದ ಪ್ರತಿಭಟನೆ ನ್ಯಾ. ನಾಗಮೋಹನ್‌ದಾಸ್ ವರದಿ ತಿರಸ್ಕರಿಸಲು ಆಗ್ರಹ

ಮುದ್ದೇಬಿಹಾಳ : ಕುಲಶಾಸ್ತ್ರಿಯ ಅಧ್ಯಯನದ ಕೊರತೆ, ಬಲಗೈ ಸಮುದಾಯದ ವಿರುದ್ಧ ದ್ವೇಷಪೂರಿತ ನಿರ್ಧಾರವಾಗಿರುವ ಒಳಮೀಸಲಾತಿ ಕೊಡುವ ಹಿನ್ನೆಲೆಯಲ್ಲಿ ನ್ಯಾ. ನಾಗಮೋಹನದಾಸ್ ನೀಡಿರುವ ವರದಿಯನ್ನು ಸರ್ಕಾರ ಅಂಗೀಕರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ತಾಲ್ಲೂಕು ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅಂಬೇಡ್ಕರ್ ಸರ್ಕಲ್‌ದಿಂದ ಆರಂಭಗೊಂಡ ಪ್ರತಿಭಟನೆ ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ತಹಸೀಲ್ದಾರ್ ಕಚೇರಿಗೆ ಆಗಮಿಸಿತು. ಮುಖಂಡ ಹರೀಶ ನಾಟೀಕಾರ, ಚೆನ್ನಪ್ಪ ವಿಜಯಕರ್