ಮುದ್ದೇಬಿಹಾಳ : ಪಟ್ಟಣದಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳ ಹಾವಳಿ ಮೀತಿಮೀರಿದ್ದು ಅವುಗಳ ಮಾಲೀಕರು ತಮ್ಮ ದನಗಳನ್ನು ಮನೆಗಳಲ್ಲಿ ಕಟ್ಟಿಕೊಳ್ಳಬೇಕು. ಬಿಡಾಡಿ ದನಗಳಿಂದ ನಿತ್ಯ ಮುಖ್ಯ ಬಜಾರ್‌ದಲ್ಲಿ ಪಟ್ಟಣದ ಸಮೀಪದ ಹೊಲಗಳಲ್ಲಿ ಬಿಡಾಡಿ ದನಗಳಿಂದ ಬಹಳ ತೊಂದರೆಯಾಗುತ್ತಿರುವ ದೂರುಗಳು ಸಾರ್ವಜನಿಕರಿಂದ ಬಂದಿದ್ದು ಪಟ್ಟಣದಲ್ಲಿ ವಾಹನ ಸಂಚಾರಕ್ಕೆ ಹಾಗೂ ಪಾದಾಚಾರಿಗಳ ಸಂಚಾರಕ್ಕೆ, ತರಕಾರಿ, ಹಣ್ಣು , ಹೂವು ಮಾರುವವರಿಗೆ ತೊಂದರೆಯಾಗುತ್ತಿದೆ.
ಬಿಡಾಡಿ ದನಗಳಿಂದ ಸರಣಿ ಅಪಘಾತವಾಗುತ್ತಿದ್ದು ಆ. 28ರ ಒಳಗಾಗಿ ತಮ್ಮ ಜಾನುವಾರಗಳನ್ನು ತಮ್ಮ ತಮ್ಮ ಮನೆಯಲ್ಲಿ ಅಥವಾ ಅದಕ್ಕೆ ಸಂಬಂಧಿಸುವ ಸ್ಥಳಗಳಲ್ಲಿ ಕಟ್ಟಿಹಾಕಬೇಕು. ರಸ್ತೆಗೆ ಬಿಟ್ಟರೆ ಬಿಡಾಡಿ ದನಗಳನ್ನು ಗೋಶಾಲೆಗಳಿಗೆ ಕಳಿಹಿಸಲಾಗುತ್ತದೆ. ಇಲ್ಲದಿದ್ದಲ್ಲಿ ಪುರಸಭೆಯಿಂದ ಬಹಿರಂಗ ಲೀಲಾವು ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ, ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.