ರಾಯಗೇರಾ : ಸುರಪೂರ ತಾಲ್ಲೂಕಿನ ದೇವತ್ಕಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ರಾಯಗೇರಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಗ್ರಾಮ ಪಂಚಾಯತ್ ದೇವತ್ಕಲ ಪಿ.ಡಿ.ಓ ಗಮನಕ್ಕೆ ಹಲವು ಬಾರಿ ನೀರಿನ ಸಮಸ್ಯೆ ಕುರಿತು ಗಮನಕ್ಕೆ ತಂದರು ಕ್ಯಾರೇ ಅನ್ನುತ್ತಿಲ್ಲ.
ಈ ರಾಯಗೇರಾ ಊರಿನ ಜನರು ಕುಡಿಯುವ ನೀರಿನ ಬೋರವೆಲ್ ಮೋಟರ್ ಹಾಳಾಗಿ 7 ದಿನ ಕಳೆದರು ಅಧಿಕಾರಿಗಳು ಆಕಡೆ ಗಮನ ಹರಿಸುತ್ತಿಲ್ಲ. ರಾಯಗೇರಾ ಗ್ರಾಮಕ್ಕೆ ನಿರ್ಲಕ್ಷ ತೋರುವ ಅಧಿಕಾರಿಗಳಿಗೆ ಗ್ರಾಮಸ್ಥರು ಹಿಡಿಶಾಪ ಹಾಕಿದರು, ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ.
ಪಂಚಾಯತ್ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿನ ಅಧಿಕಾರಿಗಳು ನಿರವ ಮೌನ ವಹಿಸಿದ್ದಾರೆ.
ವರದಿಗಾರ : ಶಿವು ರಾಠೋಡ