ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿ ಕನ್ನಡದ ಭಗ್ಗೆ ಜ್ಞಾನ ಹಾಗೂ ಆಸಕ್ತಿಯನ್ನು ಹೆಚ್ಚಿಸಲು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಅವಶ್ಯವಾಗಿದೆ ಎಂದು ಕಸಾಪ ತಾಲೂಕಾ ಅಧ್ಯಕ್ಷರಾದ ಕಾಮರಾಜ ಬಿರಾದಾರ ಅವರು ನುಡಿದರು.
ಪಟ್ಟಣದ ಟಾಪ್ ಇನ್ ಟೌನ್ ಫಂಕ್ಷನ್‌ಹಾಲ್‌ನಲ್ಲಿ ಭಾನುವಾರದಂದು ಕಸಾಪ ತಾಲೂಕಾ ಘಟಕದ ವತಿಯಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ ತಾಲೂಕ ಮಟ್ಟದ ಕನ್ನಡ ರಸಪ್ರಶ್ನೆ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಕನ್ನಡವೆಂಬುದು ಹೃದಯದ ಭಾಷೆಯಾಗಿದೆ. ಅದನ್ನು ಯಾರೂ ಎಂದಿಗೂ ಮರೆಯಬಾರದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕನ್ನಡದ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವದರಿಂದ ಜೀವನದಲ್ಲಿ ಉತ್ತಮ ಸ್ಥಾನವನ್ನು ಸಾಧಿಸಲು ಸಾಧ್ಯ ಟಿವ್ಹಿ ಫೋನ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯದೇ ಅಧ್ಯಯನದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರೆ ನಮ್ಮ ಮಾತೃಭಾಷೆಯಾದ ಕನ್ನಡದ ಭಗ್ಗೆ ಗೌರವವನ್ನು ಹೆಚ್ಚಿಸಬಹುದಾಗಿದೆ. ಅದಕ್ಕಾಗಿ ಕಸಾಪ ವತಿಯಿಂದ ಮಕ್ಕಳಿಗಾಗಿ ರಸಪ್ರಶ್ನೆ ಸ್ಫರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ. ಬೆಳಗಲ್ ಮಾತನಾಡಿ, ವಿದ್ಯಾರ್ಥಿಗಳ ಬೌದ್ದಿಕ ಮಟ್ಟದ ಸಾಮರ್ಥ್ಯವನ್ನು ಹೆಚ್ಚಿಸಲು ಕನ್ನಡದ ಸಾಹಿತ್ಯದ ಭಗ್ಗೆ ಅಭಿಮಾನವನ್ನು ಬೆಳೆಸುವಲ್ಲಿ ಇಂತಹ ಕನ್ನಡದಲ್ಲಿ ರಸಪ್ರಶ್ನೆ ಸ್ಪರ್ಧೆ ಸಹಕಾರಿಯಾಗಿದೆ ಎಂದು ಹೇಳಿದರು.
ಪುರಸಭಾ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅವರು ಮಾತನಾಡಿ ಇಂತಹ ರಸಪ್ರಶ್ನೆ ಕಾರ್ಯಕ್ರಮಗಳು ಪಟ್ಟಣದಲ್ಲಿ ಹೆಚ್ಚು ನಡೆಯಬೇಕು ಇದು ಮಕ್ಕಳ ಕಲಿಕೆಯನ್ನು ಪರಿಣಾಮಕಾರಿಯನ್ನಾಗಿಸುವದ ಜೊತೆಗೆ ಕನ್ನಡದ ಭಗ್ಗೆ ನಮ್ಮ ಸಂಸ್ಕೃತಿಯ ಭಗ್ಗೆ ಅರಿಯಲು ಸಾಧ್ಯವಾಗುತ್ತದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಹೆಚ್.ಪಿ. ಹಡಪದ ಅವರು ನಿರ್ವಹಣೆ ಮಾಡಿದರು.
ಹಿರಿಯ ಸಾಹಿತಿ ಅಶೋಕ ಮಣಿ, ಶಂಕರ ಬೇವಿನಗಿಡದ, ಮಹಿಬೂಬ ಮುಲ್ಲಾ, ಕಸಾಪ ಗೌರವ ಸಲಹೆಗಾರರಾದ ಪ್ರಭುರಾಜ ಕಲ್ಬುರ್ಗಿ, ಗೌರವ ಕಾರ್ಯದರ್ಶಿಗಳಾದ ವೈ.ಎಚ್. ವಿಜಯಕರ, ಸಿದ್ದನಗೌಡ ಬಿಜ್ಜೂರ, ಪ್ರೋ. ಹಂಪಣ್ಣ, ಮಹಿಬೂಬ ಮುಲ್ಲಾ, ಗೌರವ ಕೋಶಾಧ್ಯಕ್ಷರಾದ ಜಹಾಂಗೀರ ಮುಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಹುಸೇನ ಬಾದಶಾ ಮುಲ್ಲಾ, ರಾಜು ಬಳ್ಳೊಳ್ಳಿ, ರಾಜು ಕಲಬುರ್ಗಿ, ಚಂದ್ರು ಕಲಾಲ, ಹರೀಶ ಬೇವೂರ, ಸಿದ್ದನಗೌಡ ಕಾಶಿನಕುಂಟಿ, ರಾಚಯ್ಯ ಹಿರೇಮಠ, ಶ್ರೀಶೈಲ ಕತ್ತಿ, ಹುಸೇನ್ ಮುಲ್ಲಾ, ಹಾಗೂ ಮುಖಂಡರು ಕನ್ನಡ ಸಾಹಿತ್ಯಾಭಿಮಾನಿಗಳು ಹಾಗೂ ಕಸಾಪ ಪದಾಧಿಕಾರಿಗಳು ಉಪಸ್ತಿತರಿದ್ದರು.
ಪ್ರಶಸ್ತಿ ವಿಜೇತ ತಂಡ: ಪ್ರಥಮ ಬಹುಮಾನ ಪ್ರಾರ್ಥನಾ ವಿದ್ಯಾಮಂದಿರ(ಮಾಸ್ತಿ ವೆಂಕಟೇಶ ಅಯ್ಯಂಗಾರ್ ತಂಡ), ದ್ವಿತೀಯ ಬಹುಮಾನ ಚಿನ್ಮಯಿ ಜೆಸಿ(ಗಿರೀಶ ಕಾರ್ನಾಡ್ ತಂಡ), ತೃತೀಯ ಬಹುಮಾನ ಶ್ರೀ ಶಾರದಾ ವಿದ್ಯಾಮಂದಿರ(ಚಂದ್ರಶೇಖರ ಕಂಬಾರ ತಂಡ) ಪದಕ ಹಾಗೂ ಟ್ರೋಫಿಗಳನ್ನು ಪಡೆದುಕೊಂಡವು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಥಳೀಯ ಹಾಗೂ ಸುತ್ತಮುತ್ತಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.