Ganapati Bappa Moraya...!

ಗಣಪತಿ ಬಪ್ಪಾ ಮೋರಯಾ….!

ಗಣಪತಿ ಬಪ್ಪಾ ಮೋರಯಾ….!

ಎಲ್ಲೆಡೆ ವಿಜೃಂಭಣೆಯಿಂದ ಗಣೇಶ ಉತ್ಸವ

ಮುದ್ದೇಬಿಹಾಳ : ತಾಲ್ಲೂಕಿನಾದ್ಯಂತ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಬುಧವಾರ ಆಚರಿಸಲಾಯಿತು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಗಜಾನನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಮುದ್ದೇಬಿಹಾಳದ ಹುಡ್ಕೋ ಹಾಗೂ ಮಹಾಂತೇಶ ನಗರ, ಸೈನಿಕ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಸ್ಥಾಪಿಸಿರುವ ಎಳು ದಿನಗಳ ಹಿಂದೂ ಮಹಾ ಗಣಪತಿ ಸೇರಿದಂತೆ ಹತ್ತಾರು ಮಂಡಳಿಗಳು ವಿಶೇಷ ಅಲಂಕೃತ ಮಂಟಪಗಳಲ್ಲಿ ಗಣೇಶನ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.

ವಿವಿಧ ಶಾಲೆ,ಕಾಲೇಜುಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿದ್ದು ನಾಗರಬೆಟ್ಟದ ಆಕ್ಸ್‌ಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ಮುದ್ದೇಬಿಹಾಳ ಹಾಗೂ ನಾಗರಬೆಟ್ಟ ಶಾಲೆಗಳು, ಆಕ್ಸ್‌ಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ, ಮುದ್ದೇಬಿಹಾಳದ ಅಹಿಲ್ಯಾದೇವಿ ಹೋಳ್ಕರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಭ್ಯುದಯ ಸಮೂಹ ಶಿಕ್ಷಣ ಸಂಸ್ಥೆಯ ಅಡವಿ ಹುಲಗಬಾಳ, ಮುದ್ದೇಬಿಹಾಳ, ಕೋಳೂರು ಶಾಲೆಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು.

ಇದೇ ಮೊದಲ ಬಾರಿಗೆ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಶಿವನಗೌಡ ಬಿರಾದಾರ, ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ, ಪ್ರಾಚಾರ್ಯೆ ಸುಪರ್ಣದಾಸ ನೇತೃತ್ವ ವಹಿಸಿದ್ದರು.

ಮುದ್ದೇಬಿಹಾಳದ ವಿದ್ಯಾಸ್ಪೂರ್ತಿ ಶಿಕ್ಷಣ ಸಂಸ್ಥೆಯಲ್ಲು ಗಣೇಶೋತ್ಸವ ಆಚರಿಸಲಾಯಿತು. ಮಹಾಂತೇಶ ನಗರದಲ್ಲಿ ಮಹಿಳೆಯರ ನೇತೃತ್ವದಲ್ಲಿ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿದ್ದು ವಿಶೇಷವೆನಿಸಿತು.

Latest News

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ:                                                                                   ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ: ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ :                                           ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ಮುದ್ದೇಬಿಹಾಳ : ಕರ್ನಾಟಕ ವಕ್ಭ್ ಕಾಯ್ದೆ 1995ರ ಸಂಬAಧಿತ ನಿಬಂಧನೆಗಳು ಹಾಗೂ ಕರ್ನಾಟಕ ರಾಜ್ಯ

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ  ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ ಚುನಾವಣಾಧಿಕಾರಿಗಳಿಂದ ಆಗದೇ ಇರುವುದು ಅಚ್ಚರಿ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಂತೆ ಫಲಿತಾಂಶ ಪ್ರಕಟಿಸಿರುವ ಚುನಾವಣಾಧಿಕಾರಿಯೂ ಆಗಿರುವ ಔದ್ರಾಮ್ ಹಾಗೂ ಕೇರ್‌ಟೇಕರ್ ಆಗಿರುವ ತಬಸ್ಸುಮ ಮುಲ್ಲಾ ಅವರು ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ಕೊಡದೇ ಇರುವುದು ಯಾತಕ್ಕಾಗಿ ಎಂಬುದು ಆಯ್ಕೆಯಾಗಿರುವ ಹಲವು ಸದಸ್ಯರ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಯಾವುದೇ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾನೂನು ಬದ್ಧವಾಗಿ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ;                                        ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ; ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಮುದ್ದೇಬಿಹಾಳ : ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರು ಅವರು ಎಂದು ತಹಶೀಲ್ದಾರ್ ಆನಂದ ಕೋಲಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಎದುರಿಗೆ ಇರುವ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎ.ಗಣೇಶ ಅನ್ನಗೌನಿ,ಮುಖಂಡರಾದ ಟಿ.ವಿಜಯಭಾಸ್ಕರ್,ಎ.ಚಂದ್ರಶೇಖರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ