ಮುದ್ದೇಬಿಹಾಳ : ತಾಲ್ಲೂಕಿನ ಆರೇಮುರಾಳ ಗ್ರಾಮದಲ್ಲಿ ಅತಿವೃಷ್ಟಿಯಿಂದಾಗಿ ಮನೆ ಬಿದ್ದು ಮೂವರು ಗಾಯಗೊಂಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಶನಿವಾರ ತಹಶೀಲ್ದಾರ್ ಕಚೇರಿಗೆ ಸಂತ್ರಸ್ಥನನ್ನು ಕರೆಯಿಸಿ ಸರ್ಕಾರದಿಂದ ಬಿಡುಗಡೆಯಾದ ಪರಿಹಾರದ ಆದೇಶ ಪತ್ರವನ್ನು ವಿತರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆರೇಮುರಾಳ ಗ್ರಾಮದಲ್ಲಿ ಮನೆ ಬಿದ್ದು ಅದರಡಿ ಸಿಲುಕಿದ್ದ ಮಲ್ಲವ್ವ ಬಂಡಿವಡ್ಡರ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದಿದ್ದು ರುದ್ರಪ್ಪ ಬಂಡಿವಡ್ಡರ ಹಾಗೂ ಅವರ ಮಗಳು ಶಾರದಾ ಬಂಡಿವಡ್ಡರಗೂ ತಲೆಗೆ ಪೆಟ್ಟು ಬಿದ್ದು ಗಾಯಗೊಂಡಿದ್ದರು. ಅವರಿಗೆ ಎನ್.ಡಿ.ಆರ್.ಎಫ್,ಎಸ್.ಡಿ.ಆರ್.ಎಫ ನಿಯಮಾವಳಿ ಅಂತೆ 5400 ರೂ.ಗಳಂತೆ ಮೂವರಿಗೆ 16,200 ಪರಿಹಾರ ನೀಡಲಾಗಿದೆ ಎಂದು ಆದೇಶಪತ್ರದಲ್ಲಿ ತಿಳಿಸಲಾಗಿದೆ.
ಈ ವಿಷಯವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಭೋವಿ ಸಮಾಜದ ಮುಖಂಡ ಪರಶುರಾಮ ನಾಲತವಾಡ , ಮನೆ ಬಿದ್ದು ತೊಂದರೆಯಲ್ಲಿದ್ದ ಸಂತ್ರಸ್ಥರನ್ನೇ ತಹಶೀಲ್ದಾರ್ ಕಚೇರಿಗೆ ಕರೆಯಿಸಿ ಆದೇಶಪತ್ರ ಕೊಡುವ ಬದಲು ಅವರಿದ್ದಲ್ಲಿಯೇ ಹೋಗಿ ಅಧಿಕಾರಿಗಳು ಸಾಂತ್ವನ ಹೇಳಿ ಪರಿಹಾರದ ಆದೇಶ ಪತ್ರ ನೀಡಿದ್ದರೆ ತಾಲ್ಲೂಕು ಆಡಳಿತಕ್ಕೆ ಗೌರವ ಬರುತ್ತಿತ್ತು ಎಂದು ತಿಳಿಸಿದ್ದಾರೆ.ರುದ್ರಪ್ಪ ಬಂಡಿವಡ್ಡರ ತಲೆಗೆ ಪೆಟ್ಟಾಗಿದ್ದರಿಂದ ಕತ್ತಿಗೆ ಪಟ್ಟಿ ಸುತ್ತಿಕೊಂಡು ಬಂದೇ ಪರಿಹಾರದ ಆದೇಶಪ್ರತಿ ಪಡೆದುಕೊಂಡರು.