ಮುದ್ದೇಬಿಹಾಳ : ರಾಜ್ಯದಲ್ಲಿರುವ ಬಹುತೇಕ ಮಠಗಳು ದೊಡ್ಡವರಿಗೆ,ಸಿರಿವಂತರಿಗೆ ತೆರೆದುಕೊಳ್ಳುವ ಕೆಲಸ ಮಾಡುತ್ತಿದ್ದರೆ .ಯರಝರಿಯ ಯಲ್ಲಾಲಿಂಗೇಶ್ವರ ಮಠದ ಜನಸಾಮಾನ್ಯರ,ಧ್ವನಿ ಇಲ್ಲದವರಿಗೆ ಧ್ವನಿ ತುಂಬುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಹೇಳಿದರು.
ತಾಲ್ಲೂಕು ಯರಝರಿಯ ಯಲ್ಲಾಲಿಂಗೇಶ್ವರ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನವರಾತ್ರೋತ್ಸವ,ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ,ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜಕೀಯ ಶಕ್ತಿ ಯಾವ ಮಠಗಳು ಎರಡನೆ ಹಂತದ ನಾಯಕರನ್ನು ಬೆಳೆಸುವ ಕಾರ್ಯ ಯರಝರಿ ಮಠ ಮಾಡಿದೆ.ಯರಝರಿಯ ಮಠ ಎರಡನೇ ಸಾಲಿನ ನಾಯಕರನ್ನು ಬೆಳೆಸುವ ಮಠವಾಗಿದೆ. ದೇಶದ ಭವಿಷ್ಯ ಪ್ರತಿಭಾವಂತ ಮಕ್ಕಳ ಮೇಲಿದೆ.ಇಂದಿನ ಮಕ್ಕಳು ಗೂಗಲ್ ಮಾತುಗಳನ್ನು ಕೇಳುವ ಮಕ್ಕಳಾಗಿದ್ದಾರೆ.ಆದರೆ ಯರಝರಿಯ ಮಠ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಬ್ಬ ಹರಿದಿನಗಳು,ನಮ್ಮ ಪರಂಪರೆಯ ಕುರಿತು ತಿಳಿಸಿಕೊಡುತ್ತಿದ್ದು ತಂದೆ ತಾಯಿ ಸಂಬAಧಗಳ ಮೌಲ್ಯಗಳನ್ನು ಸಾರುತ್ತಿದೆ ಎಂದರು.
ಸಮಾಜ ಸೇವಕ ಎಂ.ಎನ್.ಮದರಿ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿರುವ ಮಕ್ಕಳಿಗೆ ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಪಾಸಿಂಗ್ ಪ್ಯಾಕೇಜ್ ಪುಸ್ತಕಗಳನ್ನು ತಾಲ್ಲೂಕಿನ 4000 ವಿದ್ಯಾರ್ಥಿಗಳಿಗೆ ವಿತರಿಸುವ ಕೆಲಸ ಮಾಡಲಾಗುತ್ತದೆ. ಒಂದೊAದು ಪುಸ್ತಕ 735 ಪುಟಗಳನ್ನು ಹೊಂದಿರಲಿದೆ ಎಂದರು.
ಜಾತ್ರಾ ಕಮೀಟಿ ಸ್ವಾಗತ ಸಮೀತಿ ಅಧ್ಯಕ್ಷ ಮಲಕೇಂದ್ರಗೌಡ ಪಾಟೀಲ ಮಾತನಾಡಿ , ಮಕ್ಕಳಿಗೆ ದುಶ್ಚಟಗಳನ್ನು ದೂರ ಮಾಡಿ ಶಿಕ್ಷಣವಂತರನ್ನಾಗಿಸಬೇಕು.ಯರಝರಿ ಮಠದ ಪರಂಪರೆಯಲ್ಲಿ ಇದೇ ವರ್ಷದಿಂದ ಗ್ರಾಮೀಣ ಭಾಗದ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಪ್ರತಿಭೆಗಳನ್ನು ಪೋಷಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ನೇತೃತ್ವ ವಹಿಸಿದ್ದ ಶ್ರೀಮಠದ ಮಲ್ಲಾರಲಿಂಗ ಸ್ವಾಮೀಜಿ ಮಾತನಾಡಿದರು.ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ,ಬಾಪೂಜಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಎಂ.ನೆರಬೆAಚಿ, ನಿಡಗುಂದಿ ಕುರುಬರ ಸಂಘದ ಅಧ್ಯಕ್ಷ ಮುತ್ತಣ್ಣ ಮುತ್ತಣ್ಣವರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಗುತ್ತಿಗೆದಾರ ಅಶೋಕ ಚಳ್ಳಮರದ,ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಸಿದ್ಧಣ್ಣ ಶರಣರು, ಮಲ್ಲಯ್ಯ ಬಿರಾದಾರ, ಮಹಾಂತೇಶ ಪಟ್ಟಣದ,ಜೆಡಿಎಸ್ ಮುಖಂಡ ಬಸವರಾಜ ಹೊನವಾಡ,ನಿವೃತ್ತ ಶಿಕ್ಷಕ ಆರ್.ಬಿ.ಗೌಡರ ಇದ್ದರು.ಮಂತಗಿಯ ಹರ್ಷ ಪಾಟೀಲ,ಬಸವರಾಜ ಪಾಟೀಲ,ಮಹೇಶ ಪಾಟೀಲ ಅವರು ಸ್ವಾಮೀಜಿಯವರ ತುಲಾಭಾರ ಸೇವೆ ನಡೆಸಿಕೊಟ್ಟರು.ವಿವಿಧ ಸ್ಪರ್ಧೆಗಳು,ಎಸ್.ಎಸ್.ಎಲ್.ಸಿ.,ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗೀತಾ ಕೋಲಕಾರ,ಚೈತ್ರಾ ಡಂಬಳ ಪ್ರಾರ್ಥನೆ ಗೀತೆ ಹಾಡಿದರು. ಮಹಾಂತೇಶ ಪಟ್ಟಣದ ನಿರೂಪಿಸಿದರು.
ಒಂದೇ ವೇದಿಕೆಯಲ್ಲಿ ಕುರುಬ ಸಮಾಜದ ಮುಖಂಡರ ಸಂಗಮ:
ಮುದ್ದೇಬಿಹಾಳ ಮತಕ್ಷೇತ್ರದ ಅಡವಿ ಹುಲಗಬಾಳದ ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ ಆಯೋಜಿಸುವ ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ, ಖಿಲಾರಹಟ್ಟಿ ಭಾಗದಲ್ಲಿ ಸಾಮೂಹಿಕ ವಿವಾಹ ಸಂಘಟಿಸುವ ಸಮಾಜ ಸೇವಕ ಎಂ.ಎನ್.ಮದರಿ, ಜಟ್ಟಗಿ ಭಾಗದಲ್ಲಿ ಸಾಮೂಹಿಕ ವಿವಾಹ ಸಂಘಟಿಸುವ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಯರಝರಿಯಲ್ಲಿ ಇಪ್ಪತ್ತು ವರ್ಷಗಳಿಂದ ಸಾಮೂಹಿಕ ವಿವಾಹ ಸಂಘಟಿಸುತ್ತಿರುವ ಮಲಕೇಂದ್ರಗೌಡ ಪಾಟೀಲ ಅವರು ಹಲವು ದಿನಗಳ ಬಳಿಕ ಕುರುಬ ಸಮಾಜದ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಚರ್ಚೆಗೆ ಗ್ರಾಸವಾಯಿತು.
ನಮ್ಮದು ಸಮಾಜ ದೊಡ್ಡದು ಎನ್ನಬೇಡಿ.ಗ್ರಾಮ ಪಂಚಾಯತಿ ಸ್ಥಾನವೇ ಸಮುದ್ರ ಎಂದು ತಿಳಿದುಕೊಳ್ಳಬೇಡಿ.ನಿಮ್ಮಲ್ಲಿರುವ ಒಗ್ಗಟ್ಟನ್ನು ಬಲಪಡಿಸಿ.ನಾನು ಕೈ ಹಿಡಿದು ಮೇಲೆತ್ತುವವನೇ ಹೊರತರು ಯಾರ ಕಾಲನ್ನು ಹಿಡಿದು ಜಗ್ಗಿಲ್ಲ.ಮತಕ್ಷೇತ್ರದಲ್ಲಿ ಸಮಾಜದವರಿಂದ ಕ್ರಾಂತಿಯಾಗಬೇಕು.
—-ಮಲ್ಲಾರಲಿAಗ ಸ್ವಾಮೀಜಿ,ಯಲ್ಲಾಲಿಂಗೇಶ್ವರ ಮಠ,ಯರಝರಿ