ಮುದ್ದೇಬಿಹಾಳ : ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕರಾಗಿರುವ ಸಿ.ಎಸ್.ನಾಡಗೌಡ ಅವರಿಗೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಆದ್ಯತೆ ಕಲ್ಪಿಸಬೇಕು ಎಂದು ಗಣ್ಯವರ್ತಕ ಸಂಗನಗೌಡ ಬಿರಾದಾರ(ಜಿಟಿಸಿ) ಹೇಳಿದರು.
ಪಟ್ಟಣದ ಏಪಿಎಂಸಿಯಲ್ಲಿರುವ ಹನುಮಂತ ದೇವರ ಗುಡಿಯಲ್ಲಿ ದಿ ಅಡತ ಮರ್ಚಂಟ್ಸ್ ಅಸೋಸಿಯೇಷನ್‌ದಿಂದ ವರ್ತಕರ ನೇತೃತ್ವದಲ್ಲಿ ಶುಕ್ರವಾರ ನಾಡಗೌಡರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಿಷ್ಠಾವಂತರಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ನಾಡಗೌಡರಿಗೆ ಹೈಕಮಾಂಡ್ ಹೇಳಿದಂತೆ ಹಲವು ಬಾರಿ ಅಧಿಕಾರವನ್ನು ಮತ್ತೊಬ್ಬರಿಗೆ ತ್ಯಾಗ ಮಾಡಿದ್ದಾರೆ.ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಆದ್ಯತೆ ನೀಡಬೇಕು.ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ಅಭಿಮಾನಿಗಳೆಲ್ಲಾ ಮುಂದಿನ ದಾರಿ ಕಂಡುಕೊಳ್ಳಬೇಕಾಗುತ್ತದೆ ಎಂದರು.
ಹಿರಿಯ ವರ್ತಕ ಮಂದೆಪ್ಪ ಗುರಿಕಾರ, ಬಿ.ಪಿ.ಮುರಾಳ,ವೀರೇಶ ಇಲಕಲ್ಲ,ಮುತ್ತು ಕಡಿ ಮಾತನಾಡಿ, ಶಾಸಕ ನಾಡಗೌಡರನ್ನು ನಿಗಮ ಮಂಡಳಿಗೆ ಸಿಮೀತಗೊಳಿಸದೇ ಸಚಿವ ಸ್ಥಾನ ನೀಡಿ ರಾಜ್ಯದ ಸೇವೆಗೆ ಹೈಕಮಾಂಡ್ ಬಳಸಿಕೊಳ್ಳಬೇಕು.ಹಿರಿಯ ರಾಜಕಾರಣಿಯಾಗಿರುವ ನಾಡಗೌಡರನ್ನು ಗೌರವದಿಂದ ಪಕ್ಷ ನಡೆಸಿಕೊಳ್ಳಬೇಕು ಎಂದು ಹೇಳಿದರು. ವರ್ತಕರಾದಎಂ.ಎನ್.ಪಾಟೀಲ,ಎಚ್.ಟಿ.ಬಿರಾದಾರ,ಮಲ್ಲನಗೌಡಬಿರಾದಾರ,ಬಿ.ಕೆ.ರಕ್ಕಸಗಿ,ಜಿ.ವಾಯ್.ಇಲ್ಲೂರ,ಸಿ.ಕೆ.ಮಂಗ್ಯಾಳ,ಬಿ.ಎಸ್.ಬಿರಾದಾರ,ಬಿ.ಸಿ.ಬೆಲ್ಲದ,ಎಸ್.ಎಸ್.ಕುAಟೋಜಿ,ಎ.ಎಸ್.ಗುಡ್ನಾಳ ಮತ್ತಿತರರು ಇದ್ದರು.ನಾಡಗೌಡರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಪ್ರಾರ್ಥಿಸಿ ಹನಮಂತ ದೇವರಿಗೆ ಕಾಯಿಕರ್ಪೂರ ಬೆಳಗಿ ಈಡುಗಾಯಿ ಒಡೆದರು.







