ತಹಶೀಲ್ದಾರ್ ಸಂಧಾನ ವಿಫಲ : ಲಿಖಿತ ಆದೇಶ ಬರುವರೆಗೂ ಹೋರಾಟ ಮುಂದುವರಿಕೆ

ತಹಶೀಲ್ದಾರ್ ಸಂಧಾನ ವಿಫಲ : ಲಿಖಿತ ಆದೇಶ ಬರುವರೆಗೂ ಹೋರಾಟ ಮುಂದುವರಿಕೆ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಸಭೆಯ ಬಳಿಕ ಘೋಷಣೆ ಮಾಡಿರುವ ೩೩೦೦ ರೂ.ಬೆಲೆ ನೀಡಲಾಗುತ್ತದೆ.ಹೋರಾಟ ಸ್ಥಗಿತಗೊಳಿಸಿ ಕಾರ್ಖಾನೆಗೆ ಕಬ್ಬು ಪೂರೈಸುವಂತೆ ತಹಶೀಲ್ದಾರ್‌ರು ಮಾಡಿದ ಮನವಿಗೆ ರೈತರು ಸ್ಪಂದಿಸಿಲ್ಲ.

ತಾಲ್ಲೂಕಿನ ತಂಗಡಗಿ ಸಮೀಪದ ಅಮರಗೋಳ ಕ್ರಾಸನಲ್ಲಿ ನಾಲ್ಕು ದಿನಗಳಿಂದ ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸಿರುವ ಹೋರಾಟದ ಸ್ಥಳಕ್ಕೆ ಶುಕ್ರವಾರ ಸಂಜೆ ತಹಶೀಲ್ದಾರ್ ಕೀರ್ತಿ ಚಾಲಕ ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದರು.ಮುಖ್ಯಮಂತ್ರಿಗಳು ಈಗಾಗಲೇ ಕಬ್ಬಿಗೆ ಬೆಂಬಲ ಬೆಲೆಯನ್ನಾಗಿ ನೀಡುವುದಾಗಿ ಘೋಷಣೆ ಮಾಡಿದ್ದು ಹೋರಾಟ ಹಿಂಪಡೆದುಕೊಳ್ಳುವAತೆ ಮನವಿ ಮಾಡಿದರು.
ಇದಕ್ಕೆ ಒಪ್ಪದ ಕರ್ನಾಟಕ ರಾಜ್ಯ ರೈತ ಸಂಘದ ತಾಳಿಕೋಟಿ ಅಧ್ಯಕ್ಷ ಬಾಲಪ್ಪ ಲಿಂಗದಳ್ಳಿ, ನಮಗೆ ಅಧಿಕೃತ ಆದೇಶ ಕಾರ್ಖಾನೆಯವರಿಂದ ಬರಬೇಕು.ಅಲ್ಲಿಯವರೆಗೂ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.ರೈತರ ಮುಖಂಡರು ಲಿಖಿತ ಆದೇಶ ಕಾರ್ಖಾನೆಯವರು ನೀಡಿದ್ದಲ್ಲಿ ಹೋರಾಟ ಹಿಂದಕ್ಕೆ ಪಡೆದು ಕಬ್ಬು ಪೂರೈಕೆಗೆ ಮುಂದಾಗುವುದಾಗಿ ತಿಳಿಸಿದ್ದರಿಂದ ತಹಶೀಲ್ದಾರರು ವಾಪಸ್ ಆಗಬೇಕಾಯಿತು.
ಕಾರ್ಖಾನೆಯವರು, ನಮಗೆ ಲಿಖಿತ ಆದೇಶ ಈವರೆಗೂ ಬಂದಿಲ್ಲ ಎಂದು ತಿಳಿಸಿದ್ದರಿಂದ ಹೋರಾಟ ಮುಂದುವರೆದಿದೆ. ಸಿಪಿಐ ಮೊಹ್ಮದಫಸಿವುದ್ದೀನ, ಪಿಎಸ್‌ಐ ಸಂಜಯ ತಿಪರೆಡ್ಡಿ, ರೈತ ಮುಖಂಡರಾದ ಸಂಗಪ್ಪ ಬಾಗೇವಾಡಿ, ಗುರುಸಂಗಪ್ಪ ಹಂಡರಗಲ್, ರಾಜು ತಿಳಗೂಳ,ಶಿವು ಕನ್ನೊಳ್ಳಿ, ಶಿವನಗೌಡ ಜಲಪೂರ ಇದ್ದರು.

Latest News

ಮುದ್ದೇಬಿಹಾಳ : ಮಾ.9 ರಂದು ಮುದ್ದೇಬಿಹಾಳ, ನಾಲತವಾಡದಲ್ಲಿ ಸೌಹಾರ್ದಕೂಟ

ಮುದ್ದೇಬಿಹಾಳ : ಮಾ.9 ರಂದು ಮುದ್ದೇಬಿಹಾಳ, ನಾಲತವಾಡದಲ್ಲಿ ಸೌಹಾರ್ದಕೂಟ

ಮುದ್ದೇಬಿಹಾಳ : ಯಾವುದೇ ರಾಜಕೀಯ ಪ್ರತಿಫಲಾಪೇಕ್ಷೆಯಿಲ್ಲದೇ ಅಸ್ಕಿ ಫೌಂಡೇಶನ್ ಕಳೆದ 15 ವರ್ಷಗಳಿಂದ ಜನಸೇವೆಯಲ್ಲಿ

ರಂಜಾನ್ ಮಾಸದಲ್ಲೇ ಯುದ್ಧ ನಡೆಯುವ ಅವಶ್ಯಕತೆ ಇರಲಿಲ್ಲ-ನಾಡಗೌಡ

ರಂಜಾನ್ ಮಾಸದಲ್ಲೇ ಯುದ್ಧ ನಡೆಯುವ ಅವಶ್ಯಕತೆ ಇರಲಿಲ್ಲ-ನಾಡಗೌಡ

ಮುದ್ದೇಬಿಹಾಳ : ರಂಜಾನ್ ಹಬ್ಬ ಎಲ್ಲ ಹಬ್ಬಗಳ ಜೊತೆಗೆ ಆಚರಣೆಗೆ ಬರುತ್ತದೆ.ನಾವೆಲ್ಲ ಯುದ್ಧವನ್ನು ಖಂಡಿಸಬೇಕು.ವಿಶೇಷವಾಗಿ

ಮಾ.9 ರಂದು ಎಂಟನೇ ವರ್ಷದ ವಾರ್ಷಿಕೋತ್ಸವ

ಮಾ.9 ರಂದು ಎಂಟನೇ ವರ್ಷದ ವಾರ್ಷಿಕೋತ್ಸವ

ಮುದ್ದೇಬಿಹಾಳ : ಪಟ್ಟಣದ ಮಹಾಂತೇಶ ನಗರದಲ್ಲಿರುವ ವಿಶ್ವಭಾರತಿ ಪಬ್ಲಿಕ್ ಸ್ಕೂಲ್‌ನ ಎಂಟನೇ ವಾರ್ಷಿಕೋತ್ಸವ ಕಾರ್ಯಕ್ರಮ

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮುದ್ದೇಬಿಹಾಳ : ಕರಾವಳಿ ಮತ್ತು ಒಳನಾಡು ಮೀನುಗಾರರ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ ತಾಲ್ಲೂಕಿನ ಬೆಳಗಲ್ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿದ್ದೇವೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ಹುನಗುಂದದ ಶ್ರೀ ಎಸ್.ಆರ್.ಕೆ. ಸೌಹಾರ್ದ ಪತ್ತಿನ ಸಹಕಾರಿ ಸಂಘ ಇದರ 15ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಹುನಗುಂದ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದರೆ ಉದ್ಯೋಗ ಸೃಷ್ಟಿಯಾಗುತ್ತವೆ.ಅದರಲ್ಲಿಯೂ ಈ ಭಾಗದ

ಚಿಣ್ಣರ ಬಣ್ಣದೋಕುಳಿ ಸಡಗರ ಹೆಚ್ಚಿಸಿದ ವರ್ಣರಂಜಿತ ಕಾರಂಜಿ

ಚಿಣ್ಣರ ಬಣ್ಣದೋಕುಳಿ ಸಡಗರ ಹೆಚ್ಚಿಸಿದ ವರ್ಣರಂಜಿತ ಕಾರಂಜಿ

ಮುದ್ದೇಬಿಹಾಳ : ಬಣ್ಣದ ಹಬ್ಬ ಪ್ರೀತಿ ಮತ್ತು ವಸಂತಗಳ ಸಂಕೇತವಾಗಿ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ.ದೇವತೆಗಳ ಶಾಶ್ವತ ಮತ್ತು ದೈವಿಕ ಪ್ರೀತಿಯನ್ನು ಇದು ಸೂಚಿಸುತ್ತದೆ.ಈ ದಿನವು ದುಷ್ಟರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ರೇಣುಕಾ ಅಕ್ಕನವರು ಹೇಳಿದರು. ಪಟ್ಟಣದ ಹುಡ್ಕೋ ಗವಿಸಿದ್ಧೇಶ್ವರ ವೇದಿಕೆಯ ಆವರಣದಲ್ಲಿ ಸಮಾನ ಮನಸ್ಕ ಯುವ ಬಳಗದ ಆಶ್ರಯದಲ್ಲಿ ಬುಧವಾರ ಚಿಣ್ಣರ ಬಣ್ಣದ ಓಕುಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.