ಐದು ದಿನಗಳ ಹೋರಾಟ ಅಂತ್ಯ : ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧಿಕೃತ ಘೋಷಣೆ

ಐದು ದಿನಗಳ ಹೋರಾಟ ಅಂತ್ಯ : ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧಿಕೃತ ಘೋಷಣೆ

ಮುದ್ದೇಬಿಹಾಳ : ಕಬ್ಬಿನ ರಿಕವರಿ ಆಧಾರದ ಮೇಲೆ ಟನ್ ಕಬ್ಬಿಗೆ 3264 ರೂ.ನೀಡುವುದಾಗಿ ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಶನಿವಾರ ಅಧಿಕೃತ ಘೋಷಣೆ ಮಾಡಿದ್ದು ಕಳೆದ ಐದು ದಿನಗಳಿಂದ ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ನಡೆಯುತ್ತಿದ್ದ ರೈತರ ಹೋರಾಟ ಅಂತ್ಯಗೊAಡಿದೆ.

ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ಕಬ್ಬಿನ ವಾಹನಗಳನ್ನು ತಡೆದು ನಿಲ್ಲಿಸಿ ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಯ ಮುಖಂಡರು ಹೋರಾಟ ಆರಂಭಿಸಿದ್ದರು.
ಇಲ್ಲಿನ ಹೋರಾಟಗಾರರು ರಾಜ್ಯ ಸರ್ಕಾರ ಘೋಷಿಸಿದ ಬೆಂಬಲ ಬೆಲೆ 3300 ರೂ.ನೀಡುವಂತೆ ಒತ್ತಾಯಿಸಿ ಲಿಖಿತ ಆದೇಶ ನೀಡುವಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದರು.

ವಿಷಯ ತಿಳಿದ ಜಿಲ್ಲಾಡಳಿತ ತಕ್ಷಣ ಸರ್ಕಾರದ ಆದೇಶವನ್ನು ಕಾರ್ಖಾನೆಯವರ ಗಮನಕ್ಕೆ ತಂದು ರೈತರಿಗೆ ನ್ಯಾಯುತವಾಗಿ ಕೊಡಬೇಕಾದ ಬೆಲೆಯನ್ನು ನೀಡುವಂತೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯವರು ತಕ್ಷಣ ಸರ್ಕಾರದ ನಿರ್ದೇಶನದಂತೆ ನೀಡಬೇಕಾದ ಕಬ್ಬಿನ ದರವನ್ನು ಪ್ರಕಟಿಸಿದರು.

ಹೋರಾಟಗಾರ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಬಾಲಾಜಿ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಅನ್ಯಾಯವಾಗಬಾರದು.ನಾವು ಯಾವೊಬ್ಬ ರೈತರು ಕಾರ್ಖಾನೆಯ ವಿರೋಧಿಗಳಲ್ಲ.ನಮ್ಮ ಭಾಗದ ಕಬ್ಬು 11.50 ರಿಕವರಿ ಇದೆ.ಆದರೆ ಇಲ್ಲಿ ಕಡಿಮೆ ತೋರಿಸುವುದೇತಕ್ಕೆ ಎಂಬುದನ್ನು ಪ್ರಶ್ನಿಸಿದರು.ಇದಲ್ಲದೇ ರೈತರಿಗೆ ಕೊಡುವ ಟನ್‌ಕಬ್ಬು ಪೂರೈಕೆ ಮಾಡಿದ ರೈತನಿಗೆ ಕೊಡುವ 100 ಗೊಬ್ಬರವನ್ನು ಸ್ಥಗಿತಗೊಳಿಸಬೇಕು.ಸರ್ಕಾರದಿಂದ ಪ್ರತ್ಯೇಕವಾಗಿ ವ್ಹೇ ಬ್ರಿಡ್ಜ್ ಹಾಕಬೇಕು ಎಂದು ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ಸನ್ 2025-26ನೇ ಹಂಗಾಮಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಂಬAಧಿಸಿದ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕನಿಷ್ಠ ಹೆಚ್ಚುವರಿ ಕಬ್ಬು ಬೆಲೆಯನ್ನು ನಿಗದಿಪಡಿಸಲು ಹಾಗೂ ಮುಖ್ಯಮಂತ್ರಿಗಳ ಆದೇಶದಂತೆ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವನ್ನು ಒಂದು ಬಾರಿ ಸರ್ಕಾರದಿಂದ 50 ರೂ. ಹಾಗೂ ಬಾಲಾಜಿ ಸಕ್ಕರೆ ಕಾರ್ಖಾನೆ 50 ರೂ.ನೀಡಬೇಕು ಎಂದು ಆದೇಶಿಸಿದೆ ಎಂದು ತಿಳಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ,ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿರುವ ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರದಿಂದ ನಿರ್ಧರಿತವಾದ ಎಫ್.ಆರ್.ಪಿ ದರದಂತೆ ರೈತರ ಕಬ್ಬಿಗೆ ಬೆಲೆ ನೀಡಲಾಗುತ್ತಿದೆ.ಮುದ್ದೇಬಿಹಾಳ ತಾಲ್ಲೂಕಿನ ಬಾಲಾಜಿ ಸಕ್ಕರೆ ಕಾರ್ಖಾನೆಯ ರಿಕವರಿ 10.89 ಇದ್ದು ಸಾಗಾಣಿಕೆ,ಕಟಾವು ವೆಚ್ಚವನ್ನು ಒಳಗೊಂಡAತೆ 3771 ರೂ.ನೀಡಲಾಗುತ್ತಿದೆ.ಕಬ್ಬು ಕಟಾವು ಮತ್ತು ಸಾಗಾಣಿಕ ವೆಚ್ಚವನ್ನು ಹೊರತುಪಡಿಸಿ 3164 ರೂ. ಸರ್ಕಾರ ಹಾಗೂ ಕಾರ್ಖಾನೆ ಸೇರಿ 100 ರೂ. ಒಟ್ಟು 3264 ರೂ.ಟನ್ ಕಬ್ಬಿಗೆ ನೀಡಲಾಗುವುದು ಎಂದು ತಿಳಿಸಿದರು.

ಬಾಲಾಜಿ ಸಕ್ಕರೆ ಕಾರ್ಖಾನೆಯ ಡಿಜಿಎಂ ಜಿ.ಎಂ.ಬಿರಾದಾರ ಮಾತನಾಡಿ, ಇಲ್ಲಿನ ರೈತರ ಹೋರಾಟವನ್ನು ಗಮನದಲ್ಲಿರಿಸಿಕೊಂಡು ನಮ್ಮ ಕಾರ್ಖಾನೆ ಆಡಳಿತ ಮಂಡಳಿ ಸರ್ಕಾರ ಸೂಚಿಸಿದ ದರವನ್ನು ರಿಕವರಿ ಆಧಾರದ ಮೇಲೆ ಕೊಡಲು ಸಿದ್ದವಿದೆ.ರೈತರ ಬೇಡಿಕೆಯಂತೆ ಕಾರ್ಖಾನೆಯಿಂದ ಗೊಬ್ಬರ ಕೊಡುವುದಿಲ್ಲ.ಸರ್ಕಾರದಿಂದ ಪ್ರತ್ಯೇಕ ತೂಕದ ಯಂತ್ರ ಅಳವಡಿಸುತ್ತಿದ್ದರೆ ಕಾರ್ಖಾನೆಯ ಅಭ್ಯಂತರ ಏನೂ ಇಲ್ಲ.ಆದರೆ ನಮ್ಮಲ್ಲಿ ಎಲ್ಲವೂ ಪಾರದರ್ಶಕತೆಯಿಂದ ಕೂಡಿದೆ.ರೈತ ಮುಖಂಡರು ಹಲವಾರು ಬಾರಿ ತೂಕದ ಯಂತ್ರವನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.

ಅಂತಿಮವಾಗಿ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಪಡೇಕನೂರದ ಸೋಮನಗೌಡ ಕೋಳೂರ ಮಾತನಾಡಿ, ಕಬ್ಬಿನ ರಿಕವರಿ ನಮ್ಮ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು ರೈತ ಮುಖಂಡರು ಜಿಲ್ಲಾಡಳಿತ ರಚಿಸುವ ಸಮೀತಿಯಲ್ಲಿರುತ್ತೇವೆ.ಕಾಲಕಾಲಕ್ಕೆ ರಿಕವರಿ ಪರಿಶೀಲನೆ ನಡೆಸಲಾಗುತ್ತದೆ.ಈಗ ತಿಳಿಸಿದ ರಿಕವರಿಗಿಂತ ಹೆಚ್ಚಿನ ರಿಕವರಿ ಬಂದಲ್ಲಿ ಅದಕ್ಕೆ ಸೂಕ್ತ ಬೆಲೆಯನ್ನು ಕಾರ್ಖಾನೆಯವರು ಹಾಕಿಕೊಡಬೇಕು ಎಂದು ತಿಳಿಸಿದರು.

ಬಳಿಕ ಸರ್ಕಾರದಿಂದ ಬಂದಿದ್ದ ಆದೇಶ ಪ್ರತಿಯನ್ನು, ಕಾರ್ಖಾನೆಯಿಂದ ತಂದಿದ್ದ ಲಿಖಿತ ಆದೇಶ ಪ್ರತಿಯನ್ನು ಹೋರಾಟಗಾರರಿಗೆ ಅಧಿಕಾರಿಗಳು ಹಸ್ತಾಂತರಿಸುವ ಮೂಲಕ ಹೋರಾಟವನ್ನು ಅಂತ್ಯಗೊಳಿಸಲಾಯಿತು. ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ತಹಶೀಲ್ದಾರ್ ಕೀರ್ತಿ ಚಾಲಕ್, ಕಂದಾಯ ನಿರೀಕ್ಷಕ ಪವನ್ ತಳವಾರ,ಪಿಎಸ್‌ಐ ಸಂಜಯ ತಿಪರೆಡ್ಡಿ ,ರೈತ ಸಂಘಟನೆ ತಾಳಿಕೋಟಿ ತಾಲ್ಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಜಿಲ್ಲಾ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಯುವ ಮುಖಂಡರಾದ ಅಕ್ಷಯ ನಾಡಗೌಡ, ಶಿವು ಕನ್ನೊಳ್ಳಿ, ಶಿವನಗೌಡ ಬಿರಾದಾರ, ಹರೀಶ ಲಾಯದಗುಂದಿ,ಗುರುಲಿAಗಪ್ಪ ಹಂಡರಗಲ್,ನಾಲತವಾಡದ ಮುಖಂಡರಾದ ಎಂ.ಬಿ.ಅAಗಡಿ, ಶಶಿಧರ ಬಂಗಾರಿ,ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ,ಅಶೋಕ ರಾಠೋಡ,ಅನಿಲ ರಾಠೋಡ,ಸಂಜೀವ ಬಾಗೇವಾಡಿ,ಸಂಗಣ್ಣ ಬೀಸಲದಿನ್ನಿ, ಅಯ್ಯಪ್ಪ ಬಿದರಕುಂದಿ ಮೊದಲಾದವರು ಇದ್ದರು.

ವಿಜಯೋತ್ಸವ : ಕಬ್ಬಿಗೆ ಹೆಚ್ಚುವರಿಯಾಗಿ ಬೆಂಬಲ ಬೆಲೆ ದೊರೆತ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು,ಯುವ ಮುಖಂಡರು,ಬಿಜೆಪಿ,ಕಾAಗ್ರೆಸ್ ಕಾರ್ಯಕರ್ತರು,ರೈತಪರ,ದಲಿತಪರ ಸಂಘಟನೆಯ ಮುಖಂಡರು,ಟ್ರಾö್ಯಕ್ಟರ್ ಚಾಲಕರು,ಕಬ್ಬು ತಂದಿದ್ದ ಬೆಳೆಗಾರರು ಪಟಾಕಿ ಸಿಡಿಸಿ,ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.ಐದು ದಿನಗಳ ಕಾಲ ನಿರಂತರ ಅನ್ನಪ್ರಸಾದ ಮಾಡಿದ ದಾನಿಗಳನ್ನು ಇದೇ ವೇಳೆ ಸ್ಮರಿಸಲಾಯಿತು.

Latest News

ಬಸರಕೋಡ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ : ಮತ್ತೆ ಹೇಮರೆಡ್ಡಿ ಮೇಟಿ ಪೆನಲ್‌ಗೆ ಮುನ್ನಡೆ

ಬಸರಕೋಡ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ : ಮತ್ತೆ ಹೇಮರೆಡ್ಡಿ ಮೇಟಿ ಪೆನಲ್‌ಗೆ ಮುನ್ನಡೆ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 12

MUDDEBIHAL :  ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

MUDDEBIHAL : ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಕಾಲುವೆಯಲ್ಲಿ ಕಾಲು ಜಾರಿ ಮೂವರು ಬಿದ್ದಿರುವ ಘಟನೆ

ಐದು ದಿನಗಳ ಹೋರಾಟ ಅಂತ್ಯ :                                       ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ  ಅಧಿಕೃತ ಘೋಷಣೆ

ಐದು ದಿನಗಳ ಹೋರಾಟ ಅಂತ್ಯ : ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧಿಕೃತ ಘೋಷಣೆ

ಮುದ್ದೇಬಿಹಾಳ : ಕಬ್ಬಿನ ರಿಕವರಿ ಆಧಾರದ ಮೇಲೆ ಟನ್ ಕಬ್ಬಿಗೆ 3264 ರೂ.ನೀಡುವುದಾಗಿ ತಾಲ್ಲೂಕಿನ

ತಹಶೀಲ್ದಾರ್ ಸಂಧಾನ ವಿಫಲ : ಲಿಖಿತ ಆದೇಶ ಬರುವರೆಗೂ ಹೋರಾಟ ಮುಂದುವರಿಕೆ

ತಹಶೀಲ್ದಾರ್ ಸಂಧಾನ ವಿಫಲ : ಲಿಖಿತ ಆದೇಶ ಬರುವರೆಗೂ ಹೋರಾಟ ಮುಂದುವರಿಕೆ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಸಭೆಯ ಬಳಿಕ

ಕನ್ನಡ ಭಾಷಾಭಿಮಾನ ಬೆಳೆಸಿ – PSI ಸಂಜಯ ತಿಪರೆಡ್ಡಿ

ಕನ್ನಡ ಭಾಷಾಭಿಮಾನ ಬೆಳೆಸಿ – PSI ಸಂಜಯ ತಿಪರೆಡ್ಡಿ

ಮುದ್ದೇಬಿಹಾಳ : ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಮಕ್ಕಳಲ್ಲಿ ಅಭಿಮಾನ ಶಿಕ್ಷಕರು ಬೆಳೆಸಬೇಕು ಎಂದು ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು. ಪಟ್ಟಣದ ಹಡಲಗೇರಿ ವ್ಯಾಪ್ತಿಯ ಬಿ.ಎ.ಎಸ್ ಇಂಟರನ್ಯಾಷನಲ್ ಶಾಲೆಯಲ್ಲಿ ಭಾನುವಾರ 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಎಎಸ್ ಶಾಲೆಯು ಆಂಗ್ಲ ಮಾಧ್ಯಮವಾಗಿದ್ದರೂ ನಮ್ಮ ಕನ್ನಡದ ಬಗ್ಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ

ತಾಯಿ-ಮಗನನ್ನು ಮಧ್ಯರಾತ್ರಿ ಊರಿಗೆ ತಲುಪಿಸಿ ಮಾನವೀಯತೆ ಮೆರೆದ ‘112’ ಪೊಲೀಸರು..!

ತಾಯಿ-ಮಗನನ್ನು ಮಧ್ಯರಾತ್ರಿ ಊರಿಗೆ ತಲುಪಿಸಿ ಮಾನವೀಯತೆ ಮೆರೆದ ‘112’ ಪೊಲೀಸರು..!

ಮುದ್ದೇಬಿಹಾಳ : ತಮ್ಮೂರಿಗೆ ಹೋಗುವ ಬಸ್ ತಪ್ಪಿಸಿಕೊಂಡಿದ್ದ ಕನ್ನಡ ಅಸ್ಪಷ್ಟವಾಗಿ ಮಾತನಾಡುವ ತಾಯಿ ಹಾಗೂ ಏಳು ವರ್ಷದ ಮಗನನ್ನು ಮಧ್ಯರಾತ್ರಿ ಬಸ್ ನಿಲ್ದಾಣದಲ್ಲಿ ಕಂಡ ಮುದ್ದೇಬಿಹಾಳ 112 ಪೊಲೀಸರು ತಮ್ಮ ಸ್ವಂತ ಹಣ ಖರ್ಚು ಮಾಡಿ ಅವರನ್ನು ಊರಿಗೆ ತಲುಪಿಸಿ ಮಾನವೀಯತೆ ಮೆರೆದ ಘಟನೆ ಈಚೇಗೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತುಳಜಾಪುರದಿಂದ ಮುದ್ದೇಬಿಹಾಳ ಬಸ್ ನಿಲ್ದಾಣದಕ್ಕೆ ಬಂದಿದ್ದ ತಾಲ್ಲೂಕಿನ ಜಂಗಮುರಾಳದ ಮಹಿಳೆ ಹಾಗೂ ಬಾಲಕ ತಮ್ಮೂರಿಗೆ ತೆರಳುವ ಬಸ್‌ನ್ನು