ಮುದ್ದೇಬಿಹಾಳ : ತಂಗಡಗಿ ಇಳಿಜಾರಿನಿಂದ ಶಿರೋಳ ಗ್ರಾಮದ ಬಳಿ ಹಾಯ್ದು ಹೋಗಿರುವ ಕೆಬಿಜೆಎನ್‌ಎಲ್‌ನ ಎಡದಂಡೆ ಕಾಲುವೆಯ ಅಕ್ಕಪಕ್ಕದಲ್ಲಿ ಒಂದು ಕಿ.ಮೀವರೆಗೆ ರಕ್ಷಣಾ ಗೋಡೆ ನಿರ್ಮಿಸಬೇಕು ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ತಿಳಿಸಿದ್ದಾರೆ.
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ್ದ ಅವರು, ಕಾಲುವೆಯಲ್ಲಿ ಬಿದ್ದು ಮೃತಪಟ್ಟ ಕೊಣ್ಣೂರ ಕುಟುಂಬದವರಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಭಾಗದಲ್ಲಿ ಕೆಬಿಜೆಎನ್‌ಎಲ್ ಕಾಲುವೆ ಹಾಯ್ದು ಹೋಗಿದ್ದು ಪ್ರತಿ ಎರಡ್ಮೂರು ತಿಂಗಳಿಗೊಮ್ಮೆ ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.ಇದನ್ನು ಅಪಾಯದ ವಲಯ ಎಂದು ಗುರುತಿಸಿ ರಕ್ಷಣಾ ಗೋಡೆ ನಿರ್ಮಿಸಲು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಪರಿಶಿಷ್ಟ ಜಾತಿಯಲ್ಲಿ ಬರುವ ಸುಡಗಾಡಸಿದ್ದ ಸಮಾಜ ಅತ್ಯಂತ ಕಡುಬಡತನದಲ್ಲಿದ್ದು ಮೂವರು ಓದುತ್ತಿದ್ದರು.ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾಗಲೀ, ಸರ್ಕಾರದಿಂದ ಸ್ಥಾಪಿಸಲಾದ ಅಲೆಮಾರಿ ನಿಗಮದಿಂದ ಸಹಾಯಧನ ದೊರಕಿಸಿಕೊಡುವ ಕಾರ್ಯವನ್ನು ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಮಾಡಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರು.ಇದೇ ವೇಳೆ ಅಸ್ಕಿ ಫೌಂಡೇಶನ್‌ದಿoದ ಮೃತರ ಕುಟುಂಬದವರಿಗೆ 50 ಸಾವಿರ ರೂ.ಧನಸಹಾಯ ಮಾಡಿದರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಕಾಂಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ್,ರಾಮನಗೌಡ ಹೊಸಮನಿ, ಬಸಲಿಂಗಪ್ಪ ರಕ್ಕಸಗಿ,ಉದಯ ರಾಯಚೂರ,ರಂಜಾನ್ ನದಾಫ ಮೊದಲಾದವರು ಇದ್ದರು.







