ಮುದ್ದೇಬಿಹಾಳ : ಬಂಜಾರಾ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು, ಸಮಾಜದ ಮಕ್ಕಳು ಶೈಕ್ಷಣಿಕ,ಔದ್ಯೋಗಿಕ ಕ್ಷೇತ್ರದಲ್ಲಿ ಏಳ್ಗೆ ಸಾಧಿಸಲು ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಶ್ರಮಿಸಲಿದೆ ಎಂದು ಎಆಯ್‌ಬಿಎಸ್‌ಎಸ್ ಸಂಘದ ಜಿಲ್ಲಾ ಉಪಾಧ್ಯಕ್ಷ ರವಿ ನಾಯಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಮುದ್ದೇಬಿಹಾಳ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಾನಂದ ಲಮಾಣಿ ಮಾತನಾಡಿ, ನ.16 ರಂದು ವಿಜಯಪುರದ ಗೋಲ್ಡನ್ ಹೈಟ್ಸ್ ಹೊಟೇಲ್‌ನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮಕ್ಕೆ ಹಲವಾರು ರಾಜಕೀಯ ಧುರೀಣರು,ಸಂಘದ ಜಿಲ್ಲಾ,ರಾಜ್ಯ ಮುಖಂಡರು ಆಗಮಿಸಲಿದ್ದು ತಾಲ್ಲೂಕಿನಲ್ಲಿ ಆಯ್ಕೆಯಾಗಿರುವ ಎಲ್ಲ ಪದಾಧಿಕಾರಿಗಳು ಆಗಮಿಸುವಂತೆ ತಿಳಿಸಿದರು.
ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಬಹಾದ್ದೂರ ರಾಠೋಡ ಮಾತನಾಡಿ, ಬಂಜಾರ ಜನಾಂಗದವರ ನೋವು,ನಲಿವು ಸಮಸ್ಯೆಗಳು ಎದುರಾದಾಗ ಸಂಘ ಅವರ ನೆರವಿಗೆ ಬರಲಿದೆ ಎಂದು ತಿಳಿಸಿದರು.ತಾಪಂ ಮಾಜಿ ಸದಸ್ಯ ಪ್ರೇಮಸಿಂಗ ಚವ್ಹಾಣ, ರಮೇಶ ನಾಯಕ,ಏಕನಾಥ ಸೀತಿಮನಿ, ಬಾಲಚಂದ್ರ ಚವ್ಹಾಣ ಇದ್ದರು.
ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಪದಾಧಿಕಾರಿಗಳು : ಬಿ.ಎಸ್.ಜಾಧವ(ಗೌರವಾಧ್ಯಕ್ಷ), ಬಹಾದ್ದೂರ ರಾಠೋಡ(ಅಧ್ಯಕ್ಷ),ಅಶೋಕ ರಾಠೋಡ,ಕೃಷ್ಣಾ ಚವ್ಹಾಣ(ಕಾರ್ಯಾಧ್ಯಕ್ಷರು),ಲಕ್ಷö್ಮಣ ರಾಠೋಡ,ಸತೀಶ ಲಮಾಣಿ,ಬಾಲಪ್ಪ ರಾಠೋಡ,ವಾಲು ರಾಠೋಡ(ಉಪಾಧ್ಯಕ್ಷ),ಲಕ್ಷö್ಮಣ ಲಮಾಣಿ(ಪ್ರಧಾನ ಕಾರ್ಯದರ್ಶಿ),ಏಕನಾಥ ಲಮಾಣಿ(ಸಹ ಕಾರ್ಯದರ್ಶಿ),ಡಿ.ಬಿ.ಲಮಾಣಿ(ಖಜಾಂಚಿ),ಸತೀಶ ರಾಠೋಡ,ಜಗದೀಶ ನಾಯಕ,ರಾಜಕುಮಾರ ಚವ್ಹಾಣ(ಸಂಘಟನಾ ಕಾರ್ಯದರ್ಶಿ), ಯುವ ಘಟಕ : ಅನಿಲ ನಾಯಕ(ಗೌರವಾಧ್ಯಕ್ಷ), ಡಾ.ಸಂತೋಷ ನಾಯಕ(ಅಧ್ಯಕ್ಷ), ಚಂದ್ರಶೇಖರ ರಾಠೋಡ(ಕಾರ್ಯಾಧ್ಯಕ್ಷ), ಜಗದೀಶ ಚವ್ಹಾಣ, ಅನಿಲ ಚವ್ಹಾಣ,ಸುನೀಲ ಚವ್ಹಾಣ, ವಿಶಾಲ ಚವ್ಹಾಣ(ಉಪಾಧ್ಯಕ್ಷರು), ಅನೀಲ ರಾಠೋಡ(ಪ್ರಧಾನ ಕಾರ್ಯದರ್ಶಿ), ಸಚಿನ ಚವ್ಹಾಣ(ಸಹ ಕಾರ್ಯದರ್ಶಿ),ಕಿರಣ ರಾಠೋಡ(ಖಜಾಂಚಿ), ಅನಿಲ ರಾಠೋಡ, ಪರಶುರಾಮ ರಾಠೋಡ,ಸೀತಾರಾಮ ರಾಠೋಡ(ಸಂಘಟನಾ ಕಾರ್ಯದರ್ಶಿಗಳು)







