ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಎರಡು ದಿನಗಳ ಹಿಂದಷ್ಟೇ ರಾಜ್ಯದ ಸರ್ಕಾರಿ,ಖಾಸಗಿ.ಗುತ್ತಿಗೆ,ಹೊರಗುತ್ತಿಗೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನೌಕರರಿಗೆ, ಕಾರ್ಮಿಕರಿಗೆ ಋತುಚಕ್ರದ ಅವಧಿಯಲ್ಲಿ ಒಂದು ದಿನದ ವೇತನ ಸಹಿತ ರಜೆ ನೀಡುವ ಸಂಬAಧ ಹೊರಡಿಸಿರುವ ಆದೇಶ ಸರ್ಕಾರದ ಮಾನವೀಯ ಸಂವೇದನೆಯ ಆದೇಶ ಎಂದು ಐಎನ್‌ಬಿಸಿಡಬ್ಲೂö್ಯಎಫ್ ಸಂಘಟನೆ ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಸಂಗೀತಾ ನಾಡಗೌಡ ಬಣ್ಣಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರಕಾರದ ಈ ನಿರ್ಧಾರವನ್ನು ನಾನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ.ಮಹಿಳೆಯರಿಗೆ ಋತುಚಕ್ರವೆಂಬುದು ಒಂದು ನೈಸರ್ಗಿಕ ಪ್ರಕ್ರಿಯೆ. ಈ ಅವಧಿಯಲ್ಲಿ ಮಹಿಳೆಯರಿಗೆ ಮಾನಸಿಕ ಶಾಂತಿ, ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಎಲ್ಲ ಮಹಿಳೆಯರಿಗೂ ಇದೊಂದು ಅತ್ಯಂತ ಸೂಕ್ಷ್ಮ ಸಮಯವಾಗಿದೆ.

ಹೀಗಾಗಿ ಕೆಲಸ ಮಾಡುವ ಮಹಿಳೆಯರಿಗಂತೂ ಇಂತಹ ಅವಧಿಯಲ್ಲಿ ವಿಶ್ರಾಂತಿ, ನೆಮ್ಮದಿಯ ಅವಶ್ಯಕತೆ ಇದ್ದು ಇದನ್ನು ಮನಗಂಡಿರುವ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲೀನಿ ರಜನೀಶ್ ಅವರಿಗೆ ಮಹಿಳಾ ಕಾರ್ಮಿಕರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದ್ದಾರೆ.

Latest News

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗೆ ಬಿರಾದಾರ ನೇಮಕ

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗೆ ಬಿರಾದಾರ ನೇಮಕ

ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿ ವರ್ತಕ ಮಲ್ಲನಗೌಡ ಬಿರಾದಾರ ಅವರನ್ನು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸೋಣ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸೋಣ

ಮುದ್ದೇಬಿಹಾಳ : ಮುಸ್ಲಿಂ ಸಮಾಜದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂ ಕಮೀಟಿಗೆ ಆಡಳಿತ ಮಂಡಳಿ

ಬಸರಕೋಡ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ : ಮತ್ತೆ ಹೇಮರೆಡ್ಡಿ ಮೇಟಿ ಪೆನಲ್‌ಗೆ ಮುನ್ನಡೆ

ಬಸರಕೋಡ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ : ಮತ್ತೆ ಹೇಮರೆಡ್ಡಿ ಮೇಟಿ ಪೆನಲ್‌ಗೆ ಮುನ್ನಡೆ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 12

MUDDEBIHAL :  ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

MUDDEBIHAL : ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಕಾಲುವೆಯಲ್ಲಿ ಕಾಲು ಜಾರಿ ಮೂವರು ಬಿದ್ದಿರುವ ಘಟನೆ

3500 ರೂ.ದರ ನಿಗದಿಗೊಳಿಸುವವರೆಗೂ ಕಬ್ಬು ಪೂರೈಕೆ ಸ್ಥಗಿತಕ್ಕೆ ರೈತರ ನಿರ್ಧಾರ

3500 ರೂ.ದರ ನಿಗದಿಗೊಳಿಸುವವರೆಗೂ ಕಬ್ಬು ಪೂರೈಕೆ ಸ್ಥಗಿತಕ್ಕೆ ರೈತರ ನಿರ್ಧಾರ

ಮುದ್ದೇಬಿಹಾಳ : ಕಬ್ಬಿಗೆ 3500 ರೂ.ದರ ನಿಗದಿ ಮಾಡುವವರೆಗೂ ಕಬ್ಬು ಕಟಾವು ಮಾಡಲು ಕಾರ್ಖಾನೆಯವರು ಆದೇಶ ನೀಡಬಾರದು.ಅಲ್ಲಿಯವರೆಗೂ ನಾವು ಹೋರಾಟ ಬಿಟ್ಟು ಕದಲುವುದಿಲ್ಲ ಎಂದು ರೈತ ಮುಖಂಡರು ತಿಳಿಸಿದರು. ತಾಲ್ಲೂಕಿನ ಯರಗಲ್ ಮದರಿ ಬಳಿ ಇರುವ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಟ್ರಾö್ಯಕ್ಟರ್‌ಗಳನ್ನು ತಂಗಡಗಿ ಗ್ರಾಮದ ಸಮೀಪದಲ್ಲಿರುವ ಅಮರಗೋಳ ಕ್ರಾಸ್‌ನಲ್ಲಿ ನಿಲುಗಡೆ ಮಾಡಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಈ ನಿರ್ಧಾರವನ್ನು ಅಧಿಕಾರಿಗಳಿಗೆ ಪ್ರತಿಭಟನಾಕಾರರು ತಿಳಿಸಿದ್ದಾರೆ. ರೈತ ಸಂಘದ ಅಧ್ಯಕ್ಷ ಬಾಲಪ್ಪಗೌಡ

ಮುದ್ದೇಬಿಹಾಳ : ತಾಪಂ ಸಹಾಯಕ ನಿರ್ದೇಶಕರಾಗಿ ಗಣಾಚಾರಿ(ಪ್ರ) ನೇಮಕ

ಮುದ್ದೇಬಿಹಾಳ : ತಾಪಂ ಸಹಾಯಕ ನಿರ್ದೇಶಕರಾಗಿ ಗಣಾಚಾರಿ(ಪ್ರ) ನೇಮಕ

ಮುದ್ದೇಬಿಹಾಳ : ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ನೂರು ದಿನಗಳ ಖಾತರಿ ಕೊಡುವ ಯೋಜನೆಯಾಗಿದ್ದು 370 ರೂ.ದಿನಗೂಲಿ ನೀಡುತ್ತಿದೆ ಎಂದು ತಾಪಂ ನೂತನ ಪ್ರಭಾರ ಸಹಾಯಕ ನಿರ್ದೇಶಕ ಎಸ್.ಎಸ್.ಗಣಾಚಾರಿ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಹಿಂದಿನ ಅಧಿಕಾರಿ ಪಿ.ಎಸ್.ಕಸನಕ್ಕಿ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೇಮಕವಾದ ಬಳಿಕ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು. ರೈತರ ಹೊಲದಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಕೆಲಸಗಳಿಗೆ ಪಂಚಾಯಿತಿಯಿAದ ಆದ್ಯತೆ