Door-to-door police visit and legal awareness program

ಮನೆಮನೆಗೆ ಪೋಲಿಸ್ ಭೇಟಿ ನೀಡಿ ಕಾನೂನು ಅರಿವು ಕಾರ್ಯಕ್ರಮ

ಮನೆಮನೆಗೆ ಪೋಲಿಸ್ ಭೇಟಿ ನೀಡಿ ಕಾನೂನು ಅರಿವು ಕಾರ್ಯಕ್ರಮ

ನಾಲತವಾಡ: ಸ್ಥಳೀಯ ಹೊರ ಪೋಲಿಸ್ ಠಾಣೆ ಆರಕ್ಷಕ ಸಿಬ್ಬಂದಿ ಘಾಳಪೂಜಿ, ಬಿಜ್ಜೂರ, ಖಾನೀಕೇರಿ, ಲೊಟಗೇರಿ ಸೇರಿದಂತೆ ವಿವಿಧ ಹಳ್ಳಿಗಳ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಕಾನೂನುಗಳ ಮಾಹಿತಿ ನೀಡಿದರು.

ಎಎಸ್ಐ ಸಿ.ಜಿ.ಕುಲಕರ್ಣಿ ಮಾತನಾಡಿ, ‘ನಿಮ್ಮ ಮನೆಯ ನೆರೆ ಹೊರೆಯಲ್ಲಿಕಾನೂನು ಬಾಹಿರ ಚಟುವಟಿಕೆ, ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ, ಬಾಲ್ಯ ವಿವಾಹ ಜರುಗುತ್ತಿದ್ದರೆ, ಕಷ್ಟಗಳು ಬಂದರೆ, ಜಗಳವಾದರೆ ತಕ್ಷಣವೇ ತುರ್ತು ಕರೆಗಳಿಗೆ ಸಂಪರ್ಕಿಸಿ ಪೊಲೀಸರಿಗೆ ತಿಳಿಸಿದರೆ, ತಕ್ಷಣವೇ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಹಾರ ಕಲ್ಪಿಸುವರು,’ ಎಂದು ಹೇಳಿದರು.

ತುರ್ತು ಕರೆ ಸಂಖ್ಯೆ ಮಾಹಿತಿ: ‘ತುರ್ತು ಸಂದರ್ಭದಲ್ಲಿ112, ಮಕ್ಕಳ ಸಹಾಯಕ್ಕೆ 1098, ಸೈಬರ್ ಅಪರಾಧಕ್ಕೆ 1930, ಮಹಿಳಾ ಸಹಾಯವಾಣಿ 1091/181, ಮಾದಕ ದ್ಯವ್ಯ ತಡೆಗೆ 1908 ಹಾಗೂ ಇತರ ತೊಂದರೆಗಳಿಗೆ ಸ್ಥಳೀಯ ಠಾಣೆಯ ನಂಬರ್ ಗೆ ಕರೆ ಮಾಡಿ,’’ ಎಂದು ಸಲಹೆ ನೀಡಿದರು.

ಕರಪತ್ರ ವಿತರಣೆ: ನಂತರ ಮನೆ ಮನೆಗೆ ಭೇಟಿ ನೀಡಿದ ಪೋಲಿಸ್ ಸಿಬ್ಬಂದಿ ಕಾನೂನು ಅರಿವು ಮತ್ತು ತುರ್ತು ಕರೆಯ ಮಾಹಿತಿ ಕರಪತ್ರಗಳನ್ನು ಬಸವರಾಜ ಹಿಪ್ಪರಗಿ, ಬಸವರಾಜ ಚಿಂಚೋಳಿ ವಿತರಿಸಿದರು.

ವರದಿಗಾರ : ಶಿವು ರಾಠೋಡ

Latest News

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಮುದ್ದೇಬಿಹಾಳ : ತಂಗಡಗಿ ಇಳಿಜಾರಿನಿಂದ ಶಿರೋಳ ಗ್ರಾಮದ ಬಳಿ ಹಾಯ್ದು ಹೋಗಿರುವ ಕೆಬಿಜೆಎನ್‌ಎಲ್‌ನ ಎಡದಂಡೆ

ಕಾಲುವೆಗೆ ಬಿದ್ದು ಮೂವರ ಸಾವು ಪ್ರಕರಣ: ಅಗ್ನಿಶಾಮಕ,ಪೊಲೀಸರ ಕಾರ್ಯಾಚರಣೆ : ಮತ್ತಿಬ್ಬರ ಶವ ಕಾಲುವೆಯಿಂದ ಹೊರಕ್ಕೆ

ಕಾಲುವೆಗೆ ಬಿದ್ದು ಮೂವರ ಸಾವು ಪ್ರಕರಣ: ಅಗ್ನಿಶಾಮಕ,ಪೊಲೀಸರ ಕಾರ್ಯಾಚರಣೆ : ಮತ್ತಿಬ್ಬರ ಶವ ಕಾಲುವೆಯಿಂದ ಹೊರಕ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಶಿರೋಳ ರಸ್ತೆಯಲ್ಲಿರುವ ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆಗೆ ಜಾರಿ ಬಿದ್ದಿದ್ದ ಮೂವರ

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗೆ ಬಿರಾದಾರ ನೇಮಕ

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗೆ ಬಿರಾದಾರ ನೇಮಕ

ಮುದ್ದೇಬಿಹಾಳ : ಪಟ್ಟಣದ ಏಪಿಎಂಸಿ ವರ್ತಕ ಮಲ್ಲನಗೌಡ ಬಿರಾದಾರ ಅವರನ್ನು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸೋಣ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸೋಣ

ಮುದ್ದೇಬಿಹಾಳ : ಮುಸ್ಲಿಂ ಸಮಾಜದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂ ಕಮೀಟಿಗೆ ಆಡಳಿತ ಮಂಡಳಿ

ಹಿರಿಯ ರಾಜಕಾರಣಿ ನಾಡಗೌಡರನ್ನು ಕಾಂಗ್ರೆಸ್ ಹೈಕಮಾಂಡ್‌ ಗೌರವದಿಂದ ನಡೆಸಿಕೊಳ್ಳಬೇಕು – ಸಂಗನಗೌಡ ಬಿರಾದಾರ(ಜಿಟಿಸಿ)

ಹಿರಿಯ ರಾಜಕಾರಣಿ ನಾಡಗೌಡರನ್ನು ಕಾಂಗ್ರೆಸ್ ಹೈಕಮಾಂಡ್‌ ಗೌರವದಿಂದ ನಡೆಸಿಕೊಳ್ಳಬೇಕು – ಸಂಗನಗೌಡ ಬಿರಾದಾರ(ಜಿಟಿಸಿ)

ಮುದ್ದೇಬಿಹಾಳ : ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಶಾಸಕರಾಗಿರುವ ಸಿ.ಎಸ್.ನಾಡಗೌಡ ಅವರಿಗೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಆದ್ಯತೆ ಕಲ್ಪಿಸಬೇಕು ಎಂದು ಗಣ್ಯವರ್ತಕ ಸಂಗನಗೌಡ ಬಿರಾದಾರ(ಜಿಟಿಸಿ) ಹೇಳಿದರು. ಪಟ್ಟಣದ ಏಪಿಎಂಸಿಯಲ್ಲಿರುವ ಹನುಮಂತ ದೇವರ ಗುಡಿಯಲ್ಲಿ ದಿ ಅಡತ ಮರ್ಚಂಟ್ಸ್ ಅಸೋಸಿಯೇಷನ್‌ದಿಂದ ವರ್ತಕರ ನೇತೃತ್ವದಲ್ಲಿ ಶುಕ್ರವಾರ ನಾಡಗೌಡರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಿಷ್ಠಾವಂತರಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ನಾಡಗೌಡರಿಗೆ ಹೈಕಮಾಂಡ್ ಹೇಳಿದಂತೆ

‘ರೈತರ ಆಶೀರ್ವಾದದಿಂದ ನೀವು ಶಾಸಕರಾಗಿದ್ದೀರಿ, ಅವರ ಬೆಂಬಲಕ್ಕೆ ನಿಲ್ಲಿ’-ಶಾಂತಗೌಡ ಪಾಟೀಲ ನಡಹಳ್ಳಿ

‘ರೈತರ ಆಶೀರ್ವಾದದಿಂದ ನೀವು ಶಾಸಕರಾಗಿದ್ದೀರಿ, ಅವರ ಬೆಂಬಲಕ್ಕೆ ನಿಲ್ಲಿ’-ಶಾಂತಗೌಡ ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ಕಬ್ಬು ಬೆಳೆದಿರುವ ರೈತರು ಕೇಳುತ್ತಿರುವ ನ್ಯಾಯಯುತ ಬೆಲೆ 3500 ರೂ ಘೋಷಣೆ ಮಾಡದೇ ಸರ್ಕಾರ ಮೌನವಾಗಿದೆ.ಕ್ಷೇತ್ರದ ಶಾಸಕರು ರೈತರಿಂದಲೇ ಶಾಸಕರಾಗಿದ್ದೀರಿ ಅವರಿಗೆ ಬೆಂಬಲ ನೀಡುವ ಕಾರ್ಯ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ತಾಲ್ಲೂಕಿನ ತಂಗಡಗಿ ಸಮೀಪದ ಅಮರಗೋಳ ಕ್ರಾಸ್ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಬ್ಬಿಗೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ನಡೆದಿರುವ ಮೂರನೇ ದಿನದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.