ಹುಣಸಗಿ: ತಾಲೂಕಿನ ಮದಲಿಂಗನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಮಕ್ಕಳಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದ್ದು ವಿಶೇಷವಾಗಿತ್ತು ಜೊತೆಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ರಸಪ್ರಶ್ನೆ ಕಥೆ ಹೇಳುವುದು ಗಾಯನ ಇನ್ನು ಇತರೆ ಸ್ಪರ್ಧೆಗಳು ಏರ್ಪಡಿಸಲಾಗಿತ್ತು.
ಇದೇ ವೇಳೆ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರು ಮಾತನಾಡಿ ಸ್ವತಂತ್ರ ಭಾರತಕ್ಕಾಗಿ ಹೋರಾಡಿದ ಅಗ್ರಗಣ್ಯ ಮಾನ್ಯರಲ್ಲಿ ಜವಾಲಾಲ್ ನೆಹರು ಕೂಡ ಒಬ್ಬರು. ಅವರು ಸ್ವತಂತ್ರದ ನಂತರ ದೇಶದ ಪ್ರಪ್ರಥಮ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು ಹಾಗೂ ದೇಶದ ಪ್ರಗತಿಗಾಗಿ ಸೇವೆ ಸಲ್ಲಿಸಿದ್ದಾರೆ ಇಡೀ ಜೀವನವನ್ನೇ ಮಕ್ಕಳಿಗಾಗಿ ಮೀಸಲಿಟ್ಟ ಜಗತ್ತಿನ ಏಕೈಕ ವ್ಯಕ್ತಿ ಚಾಚಾ ನೆಹರು ಅವರ ಸನ್ಮಾರ್ಗದಲ್ಲಿ ನಾವು ನೀವೆಲ್ಲರೂ ಸಾಗೋಣ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನ ಕತ್ತಿ ಅವರು ವಹಿಸಿಕೊಂಡಿದ್ದರು. ಹಣಮೇಶ ಗಿಡ್ನೂರ್ ಶರಣು ಹುಡೇದ್ ಬಸವರಾಜ್ ಹುಡೇದ್ ಗೀತಾ ಟೀಚರ್ ಬೀರಪ್ಪ ಕುರಿ ಕಾನೇಶ್ ಕೊಡೆಕಲ, APMC ಅಧ್ಯಕ್ಷರಾದ ಚನ್ನಪ್ಪ ಹವಾಲ್ದಾರ ಪತ್ರಕರ್ತರಾದ ಬಸನಗೌಡ ಬಿರಾದಾರ ಹಾಗೂ ಊರಿನ ಹಿರಿಯರಾದ ಶರಣಪ್ಪ ರಕ್ಕಸಗಿ ಸೋಮಲಿಂಗಪ್ಪ ಪೂಜಾರಿ ಬಸವರಾಜ ಗೆದ್ದಲಮರಿ ಯಂಕನಗೌಡ ಪೊಲೀಸ್ ಪಾಟೀಲ್ ಸಾಹೇಬ್ ಗೌಡ ಪೊಲೀಸ್ ಪಾಟೀಲ್ ಶಿಕ್ಷಣ ಪ್ರೇಮಿಗಳಾದ ಮಂಜು ಬಿಜ್ಜುರ್ ಸಿದ್ದು ಶಾಂತಗೌಡ ಪಾಟೀಲ್ ಉಪಸ್ಥಿತರಿದ್ದರು. ಶರಣು ಹುಡೇದ್ ಶಿಕ್ಷಕರು ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.
ವರದಿ: ಶಿವು ರಾಥೋಡ







