Land leased to government land

ಸರ್ಕಾರಿ ಜಾಗವನ್ನು ಸರ್ಕಾರಕ್ಕೆ ಬಾಡಿಗೆ ನೀಡಿದ ಭೂಪರು

ಸರ್ಕಾರಿ ಜಾಗವನ್ನು ಸರ್ಕಾರಕ್ಕೆ ಬಾಡಿಗೆ ನೀಡಿದ ಭೂಪರು

ನಾಲತವಾಡ: ಪಟ್ಟಣದ ಶೋಷಿತ, ಹಿಂದುಳಿದ ಸಮುದಾಯಗಳಿಗಾಗಿ ಮೀಸಲಿರುವ 6 ಎಕರೆ ಸ್ಮಶಾನ ಜಾಗವನ್ನು ಅತಿಕ್ರಮಿಸಿ ಸ್ವಂತದ್ದೆಂದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಲ್ಲದೆ ಈಗಾಗಲೇ ಈ ಸ್ಥಳದಲ್ಲಿ ಬ್ಯಾಂಕ್, ಸಂಘ-ಸಂಸ್ಥೆ ಕಚೇರಿ ಹಾಗೂ ಮನೆಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗಿದೆ ಎಂದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು‌ ಯುವಜನ ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ದೂರು ನೀಡಿದರೂ ಸ್ಪಂದಿಸದ ಪಟ್ಣಣ ಪಂಚಾಯಿತಿ ಸಿಒ ಹಾಗೂ ತಹಸೀಲ್ದಾ‌ರ್ ವಿರುದ್ಧ ಲೋಕಾಯುಕ್ತಕ್ಕೆ ಗಂಭೀರ ಪ್ರಕರಣದ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ?: ಹಲವಾರು ವರ್ಷಗಳಿಂದ ಪಟ್ಟಣದ ವಿವಿಧ ಸಮುದಾಯಗಳ ಸ್ಮಶಾನಕ್ಕೆ ಎಂದು ಸರ್ವೆ ನಂ.615 ರ ಮೀಸಲಿಟ್ಟ 6 ಎಕರೆ 21ಗುಂಟೆ ಸುಡುಗಾಡು ಜಾಗವನ್ನು ಪ್ರಭಾವಿ ಕಾಣದ ಕೈಗಳು ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರ ಅತಿಕ್ರಮಣಕ್ಕೆ ಅವಕಾಶ ನೀಡಿವೆ. ಅಧಿಕಾರಿಗಳ ಕೈಚಳಕ ಮತ್ತು ಹಿಂದೆ ಅಧಿಕಾರ ನಡೆಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಅಕ್ರಮ ಎರಡೂ ಸೇರಿ ಪಂಚಾಯಿತಿ ದಾಖಲೆ 9 ನಂ. ರಿಜಿಸ್ಟರ್ ನಲ್ಲಿ ಹೆಸರು ನಮೂದಿಸಿ ಸ್ಮಶಾನ ಜಾಗವನ್ನು ಕಂಡವರ ಪಾಲು ಮಾಡಿ ಉತಾರ ಸೃಷ್ಟಿಸಲಾಗಿದೆ. ಹಲವರು ಸ್ಮಶಾನದ ಜಾಗ ತಮ್ಮದೇ ಎಂದು ಹೇಳಿಕೊಂಡು ಲಕ್ಷಗಟ್ಟಲೇ ಹಣಕ್ಕೆ ಮಾರಾಟ ಮಾಡಿದ್ದಾರೆ. ಸರ್ಕಾರಕ್ಕೆ ಸೇರಿದ ಸ್ಮಶಾನ ಜಾಗದಲ್ಲೇ ಸಭಾ ಭವನ ನಿರ್ಮಿಸಿ ಸರ್ಕಾರಕ್ಕೆ ಬಾಡಿಗೆ ನೀಡಿರುವುದು ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ ಡಿಸಿಸಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ನಿರ್ಮಿಸಲಾಗಿದೆ. ಅದೇ ಜಾಗದಲ್ಲಿ ಹಲವರು ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ ಎನ್ನುವುದು ದೂರುದಾರರ ವಾದ.

ಸ್ಥಾನಿಕ ತನಿಖೆಗೂ ಮೀನಮೇಷ: ಸ್ಮಶಾನ ಸ್ಥಳ ಅತಿಕ್ರಮಿಸಿದ ಕುರಿತು ಜಿಲ್ಲಾಧಿಕಾರಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಕಚೇರಿಗೆ ದೂರು ನೀಡಿ ತನಿಖೆ ನಡೆಸುವಂತೆ ಯುವಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮನವಿ ಮಾಡಿದ್ದಾರೆ. 2022 ರಿಂದ ಎರಡ್ಮೂರು ಸಲ ಪಪಂ ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದಾರೆ.

“ಮನವಿಗೆ ಕ್ಯಾರೆ ಎನ್ನದೆ ಕಾಟಾಚಾರಕ್ಕೆ ಪಪಂನವರು ಅತಿಕ್ರಮಣಕಾರರಿಗೆ 2022 ರಲ್ಲಿ ನೋಟಿಸ್ ನೀಡಿದ್ದು ಹೊರತುಪಡಿಸಿದರೆ ಬೇರೆ ಏನೂ ಕ್ರಮ ಕೈಗೊಂಡಿಲ್ಲ,” ಎಂದು ಶಿವಾನಂದ ವಾಲಿ” ತಿಳಿಸಿರುತ್ತಾರೆ

–ಕೋಟ್–
“ಹಿಂದುಳಿದ,ದಲಿತ ಸಮುದಾಯದವರು ಸತ್ತರೆ ಅಂತ್ಯಸಂಸ್ಕಾರ ಮಾಡಲು ಸ್ಥಳವಿಲ್ಲದ ಕಾರಣ ಅವರ ಮನೆ ಮುಂದೆಯೇ ತಮ್ಮವರ ಶವಗಳನ್ನು ಹೂಳಿದ ಘಟನೆ ಇನ್ನೂ ಮಾಸಿಲ್ಲ. ಇಷ್ಟಾದರೂ ಪಪಂ ಹಾಗೂ ಕಂದಾಯ ಇಲಾಖೆಯವರು ಸ್ಮಶಾನ ಸ್ಥಳ ಅತಿಕ್ರಮಿಸಿ ಕೊಂಡವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಲೋಕಾಯುಕ್ತರಿಗೆ ದೂರು ನೀಡಿರುವೆ.”
–ಶಿವಾನಂದ ವಾಲಿ ಯುವಜನ ಸೇನೆ ರಾಜ್ಯಾಧ್ಯಕ್ಷರು.

ವರದಿ : ಶಿವು ರಾಠೋಡ

Latest News

ಕಡಿಮೆ ಜನಸಂಖ್ಯೆಯ ಜನಾಂಗದ ದಾರ್ಶನಿಕರ ಜಯಂತಿಯಲ್ಲಿ ಪಾಲ್ಗೊಳ್ಳಿ-ಎ.ಗಣೇಶ ನಾರಾಯಣಸ್ವಾಮಿ

ಕಡಿಮೆ ಜನಸಂಖ್ಯೆಯ ಜನಾಂಗದ ದಾರ್ಶನಿಕರ ಜಯಂತಿಯಲ್ಲಿ ಪಾಲ್ಗೊಳ್ಳಿ-ಎ.ಗಣೇಶ ನಾರಾಯಣಸ್ವಾಮಿ

ಮುದ್ದೇಬಿಹಾಳ : ಕಡಿಮೆ ಸಂಖ್ಯೆಯಲ್ಲಿರುವ ಸಮಾಜದವರ ಶರಣರು,ಮಹಾನ್ ದಾರ್ಶನಿಕರ ಜಯಂತಿ ಕಾರ್ಯಕ್ರಮಗಳಲ್ಲಿ ಎಲ್ಲ ಅಧಿಕಾರಿಗಳು

ಕಲಾವಿದರ ಸಂಘ ಉದ್ಘಾಟನೆ:                                                           ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಕಲಾವಿದರ ಸಂಘ ಉದ್ಘಾಟನೆ: ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿ ಜನಪದ ಹಾಡುಗಳಲ್ಲಿ ಅಶ್ಲೀಲತೆ ಹೆಚ್ಚುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ  ಮೆಚ್ಚುಗೆ

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ

ಮುದ್ದೇಬಿಹಾಳ : ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಕೊಡುವ ಪ್ರಮಾಣ ಪತ್ರವೇ ನಿಮ್ಮ ಸೇವೆಯ ನಿಜವಾದ

ಮಾನವ ಬಂಧುತ್ವ ವೇದಿಕೆ ಖಂಡನೆ :                                ಏಐಸಿಸಿ ಅಧ್ಯಕ್ಷ ಖರ್ಗೆ ಭಾಷಣ ಮಾಡಿದ ಜಾಗೆ ಶುದ್ಧೀಕರಣ

ಮಾನವ ಬಂಧುತ್ವ ವೇದಿಕೆ ಖಂಡನೆ : ಏಐಸಿಸಿ ಅಧ್ಯಕ್ಷ ಖರ್ಗೆ ಭಾಷಣ ಮಾಡಿದ ಜಾಗೆ ಶುದ್ಧೀಕರಣ

ಮುದ್ದೇಬಿಹಾಳ : ಉತ್ತರಖಂಡದ ರಾಮಲೀಲಾ ಮೈದಾನದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ

ಆ.23 ರಂದು ರಾಯಣ್ಣನವರ ಜಾತ್ರೆ:        ಮುದ್ದೇಬಿಹಾಳದಿಂದ ಐದು ಸಾವಿರ ಜನ ಭಾಗಿ-ಎಂ.ಎನ್.ಮದರಿ

ಆ.23 ರಂದು ರಾಯಣ್ಣನವರ ಜಾತ್ರೆ: ಮುದ್ದೇಬಿಹಾಳದಿಂದ ಐದು ಸಾವಿರ ಜನ ಭಾಗಿ-ಎಂ.ಎನ್.ಮದರಿ

ಮುದ್ದೇಬಿಹಾಳ : ವಿಜಯಪುರದಲ್ಲಿ ಆ.23 ರಂದು ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ವಿನಂತಿಸಿದರು. ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ವಿಜಯಪುರದ ದರ್ಬಾರ ಹೈಸ್ಕೂಲ್ ಮೈದಾನದಲ್ಲಿ ಆ.23ರಂದು ಮದ್ಯಾಹ್ನ 12ಗಂಟೆಗೆ ಸಂಗೊಳ್ಳಿ ರಾಯಣ್ಣನ ಜಾತ್ರೆಯ ಸಮಾರಂಭವಿದ್ದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಪ.ಪೂ. ನಿರಂಜನಾನOದಪುರಿ ಮಹಾಸ್ವಾಮೀಜಿಗಳು, ವಿವಿಧ ಜಿಲ್ಲೆಗಳ ಹರಗುರು ಚರಮೂರ್ತಿಗಳು, ಹುಲಜಂತಿ ಮಾಳಿಂಗರಾಯ ಮಹಾರಾಜರು, ರಾಜ್ಯದ ಮಂತ್ರಿ

ಮುದ್ದೇಬಿಹಾಳ : ಆ.22 ರಂದು ಜಾನಪದ ಪರಿಷತ್ ಘಟಕ ಉದ್ಘಾಟನೆ

ಮುದ್ದೇಬಿಹಾಳ : ಆ.22 ರಂದು ಜಾನಪದ ಪರಿಷತ್ ಘಟಕ ಉದ್ಘಾಟನೆ

ಮುದ್ದೇಬಿಹಾಳ : ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ,ಜನಪದ ಕರಗ ಕೃತಿ ಲೋಕಾರ್ಪಣೆ ಹಾಗೂ ಸಾಧಕ ಕಲಾವಿದರಿಗೆ ಗೌರವ ಸನ್ಮಾನ ಕಾರ್ಯಕ್ರಮ ಆ.22 ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಕುಂಟೋಜಿ ಭಾವೈಕ್ಯತೆ ಮಠದ ಚೆನ್ನವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು.ಬಸರಕೋಡ ಪವಾಡ ಬಸವೇಶ್ವರ ಕಮೀಟಿ ಅಧ್ಯಕ್ಷ ಕೆ.ವಾಯ್.ಬಿರಾದಾರ ಉದ್ಘಾಟಿಸುವರು.ಎಸ್.ಜಿ.ವಿ.ಸಿ ಕಾಲೇಜಿನ ಕಾರ್ಯದರ್ಶಿ ಅಶೋಕ ತಡಸದ ಕೃತಿ ಲೋಕಾರ್ಪಣೆ ಮಾಡುವರು.ಕರ್ನಾಟಕ