Donation of mic sound system to Gulbala Govt Senior Primary School

ಗುಳಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆ

ಗುಳಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆ

ಗುಳಬಾಳ : ಹುಣಸಗಿ ತಾಲ್ಲೂಕಿನ ಗುಳಬಾಳ ಗ್ರಾಮದ ನಿವಾಸಿಯಾದ ಶ್ರೀಮತಿ ಯಂಕಮ್ಮ ಬಮ್ಮನಳ್ಳಿ ಅವರು ಕಲಿತ ಶಾಲೆಗೆ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆಯಾಗಿ ನೀಡಿದರು.

“ನಾನು ಕಲಿತ ಶಾಲೆ ನನ್ನ ಹೆಮ್ಮೆ” ಎಂದು ತಿಳಿದು ಶಾಲೆಯಲ್ಲಿ ನಡೆಯುವ ರಾಷ್ಟ್ರೀಯ ಕಾರ್ಯಕ್ರಮಗಳು ಇನ್ನಿತರೆ ಜಯಂತಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ತಮ್ಮ ವೈಯಕ್ತಿಕ ಹಣದಲ್ಲಿ ಶಾಲೆಗೆ ದೇಣಿಗೆ ನೀಡಿದರು.

ಹುಣಸಗಿ ತಾಲೂಕಿನ ಪದವಿದರರೂ ತಮ್ಮ ಊರಿನ ಶಾಲೆಗೆ ದೇಣಿಗೆ ನೀಡಿ ಮಾದರಿಯಾಗಿ ಎಂದು ಶಿಕ್ಷಕರು ತಿಳಿಸಿದರು. ಹಾಗೂ ಈ ಪ್ರಯತ್ನಕ್ಕೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಪ್ರೇರಣೆ ಎಂದು ಪ್ರಧಾನ ಗುರು ಭೀಮನಗೌಡ ಬಿರಾದಾರ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷರು ದೈಹಿಕ ಶಿಕ್ಷಕರಾದ ಬಸನಗೌಡ ವಠಾರ, ಶಿಕ್ಷಕರಾದ ಪ್ರಭುಗೌಡ ಬಿರಾದಾರ, ಕಡ್ಲಬಾಳಪ್ಪ, ಹುಲಗಣ್ಣ ಹೊಸಮನಿ, ಯಂಕಮ್ಮ ಬಮ್ಮನಳ್ಳಿ, ಭಾಗ್ಯಶ್ರೀ ಕಕ್ಕೇರಿ, ಸರೋಜಾ ಅಂಬಿಗೇರ ಇನ್ನಿತರರು ಇದ್ದರು.

ವರದಿ : ಶಿವು ರಾಠೋಡ.

Latest News

​🌅 ಶುಭೋದಯದ ಪದ್ಯ

​🌅 ಶುಭೋದಯದ ಪದ್ಯ

​ಹೊಸ ಆಸೆಯ ಹೊತ್ತು ಸೂರ್ಯ ಮೂಡಿದ,ಹೊಸ ಕನಸಿನ ಬುತ್ತಿ ಹಕ್ಕಿ ಹಾಡಿದ.ಮಬ್ಬು ಮರೆತು, ಬೆಳಕು

ದಿನಕ್ಕೊಂದು ಧನಾತ್ಮಕ ಕಥೆ: ಸಣ್ಣ ಬದಲಾವಣೆ, ದೊಡ್ಡ ಪರಿಣಾಮ

ದಿನಕ್ಕೊಂದು ಧನಾತ್ಮಕ ಕಥೆ: ಸಣ್ಣ ಬದಲಾವಣೆ, ದೊಡ್ಡ ಪರಿಣಾಮ

ಒಂದು ದೊಡ್ಡ ನಗರದ ಹೊರವಲಯದಲ್ಲಿ ಒಬ್ಬ ಅನುಭವಿ ಕುಂಬಾರ ವಾಸಿಸುತ್ತಿದ್ದನು. ಆತನ ಹೆಸರು ರಾಘವ.

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ಆರಂಭಿಸಲು ಪ್ರಸ್ತಾವನೆ ಕಳಿಸಲಾಗಿದೆ

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು

MUDDEBIHAL : PWD AEE ರೆಡ್ಡಿ ಅಧಿಕಾರ ಸ್ವೀಕಾರ

MUDDEBIHAL : PWD AEE ರೆಡ್ಡಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾಗಿ ಅಯ್ಯಪ್ಪಗೌಡ ರೆಡ್ಡಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಗುತ್ತಿಗೆದಾರರ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶಗೌಡ ಪಾಟೀಲ ಇಂಗಳಗೇರಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಚಿನಗೌಡ ಪಾಟೀಲ, ಗುತ್ತಿಗೆದಾರ ಶ್ರೀಕಾಂತಗೌಡ ಪಾಟೀಲ, ಮುಖಂಡ ರುದ್ರಗೌಡ ಅಂಗಡಗೇರಿ ಸನ್ಮಾನಿಸಿದರು. ಅಯ್ಯಪ್ಪಗೌಡ ರೆಡ್ಡಿ ಅವರು ಈ ಮುಂಚೆ ಶಿರಸಿ ಸಿದ್ದಾಪುರ,ಮುದ್ದೇಬಿಹಾಳ,ಆಲಮಟ್ಟಿ,ತಾಳಿಕೋಟಿ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ಸಹಾಯಕ ಅಭಿಯಂತರರಾಗಿ ಸೇವೆ ಸಲ್ಲಿಸಿದ್ದು ಅವರಿಗೆ ಸರ್ಕಾರ ಈ

ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಆಯ್ಕೆ;                                 ಮುದ್ದೇಬಿಹಾಳ ಕಾನಿಪ ಸಂಘಕ್ಕೆ ಚುನಾವಣೆ : ವಡವಡಗಿ ಪೆನಲ್‌ಗೆ ಜಯ

ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಆಯ್ಕೆ; ಮುದ್ದೇಬಿಹಾಳ ಕಾನಿಪ ಸಂಘಕ್ಕೆ ಚುನಾವಣೆ : ವಡವಡಗಿ ಪೆನಲ್‌ಗೆ ಜಯ

ಮುದ್ದೇಬಿಹಾಳ : ಕಾನಿಪ ಸಂಘದ ತಾಲ್ಲೂಕು ಘಟಕದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗೆ ಬುಧವಾರ ಚುನಾವಣೆ ನಡೆಸಲಾಗಿದ್ದು ವಡವಡಗಿ-ಬನ್ನೆಟ್ಟಿ ಪೆನಲ್ ಮಧ್ಯೆ ಏರ್ಪಟ್ಟ ಸ್ಪರ್ಧೆಯಲ್ಲಿ ವಡವಡಗಿ ಪೆನಲ್ ಪದಾಧಿಕಾರಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಡಿ.ಬಿ.ವಡವಡಗಿ ಹಾಗೂ ಮಕ್ಬೂಲ್ ಬನ್ನೆಟ್ಟಿ ನಾಮಪತ್ರ ಸಲ್ಲಿಸಿದ್ದು ನೂತನ ಅಧ್ಯಕ್ಷರಾಗಿ ಡಿ.ಬಿ.ವಡವಡಗಿ ಅವರು 19 ಮತ ಪಡೆದು ಆಯ್ಕೆಯಾಗಿ ಪ್ರತಿಸ್ಪರ್ಧಿ ಮಕ್ಬುಲ್ ಬನ್ನೆಟ್ಟಿ ಅವರನ್ನು 10 ಮತಗಳ ಅಂತರದಿoದ ಪರಾಭವಗೊಳಿಸಿದರು. ಉಪಾಧ್ಯಕ್ಷ