ಶಿಕ್ಷಕರ ಭರ್ತಿಗೆ ಒತ್ತಾಯ: ಆರ್.ಎಂ.ಎಸ್.ಎ ಶಾಲೆಯಲ್ಲಿ ಶಿಕ್ಷಕರ ಕೊರತೆ

ಶಿಕ್ಷಕರ ಭರ್ತಿಗೆ ಒತ್ತಾಯ: ಆರ್.ಎಂ.ಎಸ್.ಎ ಶಾಲೆಯಲ್ಲಿ ಶಿಕ್ಷಕರ ಕೊರತೆ

ಮುದ್ದೇಬಿಹಾಳ : ತಾಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಖಾಯಂ ಶಿಕ್ಷಕರ ಕೊರತೆ ಇದ್ದು ಕೊರತೆ ಇರುವ ಶಿಕ್ಷಕರನ್ನು ಭರ್ತಿ ಮಾಡಬೇಕು ಎಂದು ಶಾಲಾ ಸುಧಾರಣಾ ಹಾಗೂ ಉಸ್ತುವಾರಿ ಸಮೀತಿ ಸದಸ್ಯರು ಬಿಇಒಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

ಬಿಇಒ ಕಚೇರಿಗೆ ಆಗಮಿಸಿದ್ದ ಎಸ್.ಡಿ.ಎಂ.ಸಿ ಸದಸ್ಯ ಬಂದೇನವಾಜ ಕುಮಸಿ ಮಾತನಾಡಿ, ಶಾಲೆಯಲ್ಲಿ 509 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅನೇಕ ವರ್ಷಗಳಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸುತ್ತ ಬಂದಿದೆ ಎಂದು ತಿಳಿಸಿದ್ದಾರೆ.

ಶಾಲೆಯಲ್ಲಿ ವಿಜ್ಞಾನ, ಸಿಬಿಜಡ್ ಆಂಗ್ಲಮಾಧ್ಯಮ, ಸಮಾಜ ವಿಜ್ಞಾನ ವಿಭಾಗಗಳಲ್ಲಿನ ಮೂರು ಖಾಯಂ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಕಳೆದ ಕೆಲವು ತಿಂಗಳುಗಳಿoದ ಅತಿಥಿ ಶಿಕ್ಷಕರಿಂದ ಶಾಲೆ ನಿರ್ವಹಣೆ ಮಾಡುತ್ತಿದೆ. ಆದರೆ ಕೆಲಸದ ಒತ್ತಡ ವೇತನ ಕಡಿಮೆ ಎಂಬ ಕಾರಣಗಳಿಂದ ಅತಿಥಿ ಶಿಕ್ಷಕರು ಮಧ್ಯದಲ್ಲೇ ಸೇವೆಯಿಂದ ದೂರವಾಗುತ್ತಿರುವುದು ಪಾಠದ ನಿರ್ವಹಣೆಗೆ ದೊಡ್ಡ ಅಡಚಣೆಯುಂಟಾಗಿದೆ ಎಂದು ತಿಳಿಸಿದರು.

ಇನ್ನೋರ್ವ ಸದಸ್ಯ ಎಚ್.ಆರ್.ಬಾಗವಾನ ಮಾತನಾಡಿ, ಖಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕನಿಷ್ಠ ಮೂವರು ಶಿಕ್ಷಕರನ್ನು ತಕ್ಷಣ ನಿಯೋಜಿಸಬೇಕು.ಒಂದು ವೇಳೆ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸಾವಿರಾರು ಪಾಲಕರೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮುಂದೆ ಧರಣಿ–ಸತ್ಯಾಗ್ರಹ ನಡೆಯಲಿದೆ ಎಂದು ತಿಳಿಸಿದರು. ಬಿಆರ್‌ಸಿ ಆರ್.ಬಿ.ಧಮ್ಮೂರಮಠ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಸದಸ್ಯ ವೈ.ಎಚ್.ಮ್ಯಾಗೇರಿ ಇದ್ದರು.

Latest News

ತಮ್ಮ ಸ್ವಂತ ರಾಜಕೀಯ ಲಾಭಕ್ಕೆ ಗುತ್ತಿಗೆದಾರರಿಂದ ಸಹಾಯ-ಸಿ.ಎಸ್.ನಾಡಗೌಡ

ತಮ್ಮ ಸ್ವಂತ ರಾಜಕೀಯ ಲಾಭಕ್ಕೆ ಗುತ್ತಿಗೆದಾರರಿಂದ ಸಹಾಯ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಕೆಲವು ಗುತ್ತಿಗೆದಾರರು ಸಹಾಯ ಮಾಡುವುದು ತಮ್ಮ ರಾಜಕೀಯ ಲಾಭಕ್ಕೋಸ್ಕರ ಮಾಡುತ್ತಾರೆಯೇ ಹೊರತು

ಹುಲ್ಲೂರ ಎಸ್‌ಎನ್‌ಡಿ ಪಬ್ಲಿಕ್ ಸ್ಕೂಲ್‌ಗೆ ಶೇ.100ರಷ್ಟು ಫಲಿತಾಂಶ

ಹುಲ್ಲೂರ ಎಸ್‌ಎನ್‌ಡಿ ಪಬ್ಲಿಕ್ ಸ್ಕೂಲ್‌ಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲೂಕಿನ ಹುಲ್ಲೂರ ಗ್ರಾಮದ ಎಸ್.ಎನ್.ಡಿ ನ್ಯಾಷನಲ್ ಪಬ್ಲಿಕ್ ಶಾಲೆಗೆ 2025-26ನೇ ಸಾಲಿನಲ್ಲಿ

ಎಸ್.ಎಸ್.ಎಲ್.ಸಿ ಪರೀಕ್ಷೆ:                                         ಕವಡಿಮಟ್ಟಿಯ ಆರ್ಚ್ ಏಂಜಲ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಎಸ್.ಎಸ್.ಎಲ್.ಸಿ ಪರೀಕ್ಷೆ: ಕವಡಿಮಟ್ಟಿಯ ಆರ್ಚ್ ಏಂಜಲ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲೂಕಿನ ಸರೂರ ಕ್ರಾಸ್ ಬಳಿ ಇರುವ ಕವಡಿಮಟ್ಟಿಯ ದಿ ಆರ್ಚ್ ಏಂಜಲ್

ಉತ್ತಮ ಕಾರ್ಯನಿರ್ವಹಣೆ :                                              KRIDL ಇಇ ಆನಂದಸ್ವಾಮಿ ಅವರಿಗೆ ಪ್ರಶಸ್ತಿ

ಉತ್ತಮ ಕಾರ್ಯನಿರ್ವಹಣೆ : KRIDL ಇಇ ಆನಂದಸ್ವಾಮಿ ಅವರಿಗೆ ಪ್ರಶಸ್ತಿ

ಮುದ್ದೇಬಿಹಾಳ : ವಿಜಯಪುರದ ಕೆ.ಆರ್.ಐ.ಡಿ.ಎಲ್ ಇಲಾಖೆಯ ಇಇ ಆನಂದಸ್ವಾಮಿ ಅವರು ಇಲಾಖೆಯಲ್ಲಿ ಸಲ್ಲಿಸುತ್ತಿರುವ ಉತ್ತಮ

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಮುದ್ದೇಬಿಹಾಳ : ಇಲ್ಲಿನ ಯುವ ಉದ್ಯಮಿ,ಕಾಂಗ್ರೆಸ್ ಪಕ್ಷದ ಮುಖಂಡ ಆನಂದ ಪೂಜಾರಿ ಅವರನ್ನು ಕಾಂಗ್ರೆಸ್ ಪಕ್ಷದ ಎಸ್.ಟಿ.ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರ ಶಿಫಾರಸ್ಸಿನ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮೀತಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಅಧ್ಯಕ್ಷ ಎಂ.ವಿಜಯನಾಯಕ ನೇಮಕ ಮಾಡಿ ಆದೇಶಿಸಿದ್ದಾರೆ.

ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ ಯಶಸ್ವಿಗೊಳಿಸಿ-ದಯಾನಂದಪುರಿ ಸ್ವಾಮೀಜಿ

ಮುದ್ದೇಬಿಹಾಳ : ದೇವಾಂಗ(ನೇಕಾರ)ಸಮುದಾಯದ ಸಂಘಟನೆ,ಜಾಗೃತಿಗಾಗಿ ಅಖಿಲ ಭಾರತ ದೇವಾಂಗ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ದಯಾನಂದಪುರಿ ಸ್ವಾಮೀಜಿಗಳ 36ನೇ ಪಟ್ಟಾಭಿಷೇಕ ಮಹೋತ್ಸವವನ್ನು ಮೇ.8 ಹಾಗೂ 9 ರಂದು ಬಾದಾಮಿ ತಾಲ್ಲೂಕು ಬನಶಂಕರಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಚಿತ್ತರಗಿ ಹೇಳಿದರು. ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಬುಧವಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಹಂಪಿ ಹೇಮಕೂಟ ಶ್ರೀ ಗಾಯತ್ರಿಪೀಠದ