ಮುದ್ದೇಬಿಹಾಳ : ಜಲಾನಯನ ಇಲಾಖೆ,ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಡಿ.13 ರಂದು ಮದ್ಯಾಹ್ನ 2.30ಕ್ಕೆ ಕವಡಿಮಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಲಾನಯನ ಮಹೋತ್ಸವ – 2025 ಹಮ್ಮಿಕೊಳ್ಳಲಾಗಿದೆ.
ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸಲಿದ್ದು ಗ್ರಾಪಂ ಅಧ್ಯಕ್ಷೆ ಶಕುಂತಲಾ ಹಂಡರಗಲ್ ಅಧ್ಯಕ್ಷತೆ ವಹಿಸುವರು.ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎ.ಎಂ.ಸಾವಳಗಿ ಉಪನ್ಯಾಸ ನೀಡುವರು.ಕುಂಟೋಜಿ ಗ್ರಾಪಂ ಅಧ್ಯಕ್ಷ ಜಗದೀಶ ನಾಯಕ,ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಉಪ ಕೃಷಿ ನಿರ್ದೇಶಕ-1 ಶರಣಗೌಡ ಆರ್., ಬಿಇಒ ಬಿ.ಎಸ್.ಸಾವಳಗಿ,ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಟಿ.ಹಿರೇಮಠ,ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಪಾಟೀಲ ಆಗಮಿಸುವರು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ಸವದಲ್ಲಿ ಕಿರು ಪುಸ್ತಕ ಬಿಡುಗಡೆ, ಗ್ರಾಮ್ಸ ಸಂಸ್ಥೆಯಿAದ ಬೀದಿ ನಾಟಕ ಪ್ರದರ್ಶನ,ಕೃಷಿ ಪರಿಕರಗಳ ವಿತರಣೆ, ಸಸಿ ನೆಡುವ ಕಾರ್ಯಕ್ರಮ,ಶಾಲೆಗಳಿಗೆ ಮೇಜು,ಬೆಂಚ್ ವಿತರಣೆ,ಮಣ್ಣು ನೀರು ಸಂರಕ್ಷಣೆ ಕುರಿತು ಉಪನ್ಯಾಸ , ರಂಗೋಲಿ,ಚಿತ್ರಕಲೆ ಹಾಗೂ ವಿಜ್ಞಾನ ವಸ್ತುಪ್ರದರ್ಶನದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದ್ದಾರೆ.




