ಮುದ್ದೇಬಿಹಾಳ : ತಾಲೂಕಿನ ಗ್ರಾಪಂನ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಗುರಿಗೆ ಮೀರಿ ವಸೂಲಾತಿಯಲ್ಲಿ ಶೇ.100% ರಷ್ಟು ಪ್ರಗತಿ ಸಾಧಿಸಿದ ಗ್ರಾಪಂಗಳಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.
ಪಟ್ಟಣದ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಮಡಿಕೇಶ್ವರ,ಢವಳಗಿ, ಹಡಲಗೇರಿ, ರಕ್ಕಸಗಿ, ಕವಡಿಮಟ್ಟಿ, ತಂಗಡಗಿ ಹಾಗೂ ಕುಂಟೋಜಿ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್ ಹಾಗೂ ಡಿಇಒಗಳಿಗೆ ಸನ್ಮಾನ ಮಾಡಿ ಗೌರವಿಸಿ ಪ್ರಶಂಸನಾ ಪತ್ರ ನೀಡಲಾಯಿತು.
ತಾಪಂ ಪ್ರಭಾರ ಇಒ ವೆಂಕಟೇಶ ವಂದಾಲ,ಸಹಾಯಕ ನಿರ್ದೆಶಕ ಖೂಭಾಸಿಂಗ್ ಜಾಧವ,ತಾ.ಪಂ. ಸಹಾಯಕ ಲೆಕ್ಕಾಧಿಕಾರಿ ವೀರೇಶ ಹೂಗಾರ ಇದ್ದರು.




