ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ಆರಂಭಿಸಲು ಪ್ರಸ್ತಾವನೆ ಕಳಿಸಲಾಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ತಾಲ್ಲೂಕಿನ ಬಿದರಕುಂದಿ ಗ್ರಾಮದ ಆರ್.ಎಂ.ಎಸ್.ಎ ಶಾಲೆಯ ಹತ್ತಿರ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂ-೨ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಕ್ಷೇತ್ರದಲ್ಲಿ ಆರ್.ಎಂ.ಎಸ್.ಎ ಶಾಲೆ, ಮಹಿಳಾ ಹಾಸ್ಟೆಲ್,ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗಳು ನಿರ್ಮಾಣವಾಗಿದ್ದು ಇದೊಂದು ವಿದ್ಯಾಗಿರಿ ಎಂದು ನಾಮಕರಣ ಮಾಡುವಂತೆ ಗ್ರಾಪಂ ಅಧ್ಯಕ್ಷರಿಗೆ ಮನವಿ ಮಾಡಿದರು.ಶಿಕ್ಷಣವೆಂಬುದು ಶಕ್ತಿ.ನಾವೆಲ್ಲ ಮಕ್ಕಳಿಗೋಸ್ಕರ ಮಾಡುವ ಆಸ್ತಿ ಶಾಶ್ವತವಲ್ಲ.ವಿದ್ಯೆ ಶಾಶ್ವತವಾಗಿ ಉಳಿಯುವ ಸಾಧನ ಎಂದರು.

ಸನ್ ೨೦೧೭-೧೮ ರಲ್ಲಿ ಶಾಲೆ ಆರಂಭವಾಗಿದೆ. ೨೦೨೨-೨೩ ರಲ್ಲಿ ಕಾಮಗಾರಿಗೆ ಆದೇಶ ನೀಡಿದ್ದು ೨೦೨೫-೨೦೨೬ ರಲ್ಲಿ ಮುಗಿದಿದೆ.ಬರಲಿರುವ ದಿನಗಳಲ್ಲಿ ೮೬೦ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯಲಿದ್ದಾರೆ.ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಸಿಎಂ ಜೊತೆಗೆ ಮಾತನಾಡಿದ್ದು ಕನಿಷ್ಠ ೧೦ ಕೋಟಿ ರೂ.ನೀಡುವಂತೆ ಬೇಡಿಕೆ ಇರಿಸಿದ್ದೇನೆ ಎಂದರು,
ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಶ್ರದ್ಧೆ,ವಿಶ್ವಾಸದಿಂದ ನಡೆದುಕೊಳ್ಳಬೇಕು.ಗುರು ಶಿಷ್ಯರ ಸಂಬoಧ ಸೌಹಾರ್ದ ಆಗಿದ್ದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಶಿಕ್ಷಣ ಶಿಕ್ಷೆ ಆಗಬಾರದು ಎಂದರು.

ಕಾAಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ್ ಮಾತನಾಡಿ, ಅಲ್ಪಸಂಖ್ಯಾತರು,ಹಿoದುಳಿದವರು,ದಲಿತರ ಮಕ್ಕಳು ಶಿಕ್ಷಣವಂತರಾಗಬೇಕು.ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಮಾಡಿಕೊಳ್ಳಬೇಕು ಎಂದರು.

ಅಲ್ಪಸoಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ,ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಚಾರ್ಯ ಖೇಮು ರಾಠೋಡ,ನಿವೃತ್ತ ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರ,ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ನಿರ್ದೇಶಕ ಸುರೇಶಗೌಡ ಪಾಟೀಲ ಇಂಗಳಗೇರಿ,ಸoಗನಗೌಡ ಬಿರಾದಾರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ರಾಜು ಕಲ್ಬುರ್ಗಿ,ವಕೀಲರಾದ ಎಂ.ಎ.ಮುದ್ದೇಬಿಹಾಳ,ಎನ್.ಆರ್.ಗುರಿಕಾರ,ಎo.ಎo.ಬೆಳಗಲ್,ಟ್ರಿನಿಜ್ ಗ್ರೂಪ್‌ನ ಪ್ರವೀಣ ನಾಯಕ, ರವಿ ನಾಯಕ,ಈರಣಗೌಡ ಪಾಟೀಲ,ವೆಂಕಟೇಶ ನಾಯಕ,ಗೋಪಿ ಮಡಿವಾಳರ ಮೊದಲಾದವರು ಇದ್ದರು.

Latest News

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ : ರಾಜ್ಯಾದ್ಯಂತ ಸೋಮವಾರದಿಂದ ಶಾಲೆಗಳು ಆರಂಭಗೊOಡಿದ್ದು ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ಪಬ್ಲಿಕ್

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ:             ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ: ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿoದ ಅಮಸರ್ಪಕ ವಿದ್ಯುತ್ ಪೂರೈಕೆ,ರೈತರಿಗೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದoತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲಾಗುವ "ಪರಿಸರ ರಕ್ಷಕ" ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಗಿಡಗಳನ್ನು ನೆಟ್ಟು ಬೆಳೆಸಿರುವ, ಸಂರಕ್ಷಿಸಿರುವ ವ್ಯಕ್ತಿಗಳಿಗೆ, ಶಾಲೆ ಕಾಲೇಜುಗಳ ಶಿಕ್ಷಕರು, ಸಂಘ, ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪರಿಸರ ರಕ್ಷಣೆ ಮಾಡಿರುವ ಅರ್ಹರು ತಮ್ಮ ವಿವರಗಳುಳ್ಳ ಅರ್ಜಿಗಳನ್ನು ಜೂನ್ 3 ರೊಳಗೆ, ಅಧ್ಯಕ್ಷರು,

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಎಂ.ಬಿ.ಎಲ್ ಗ್ರೂಪನಿಂದ ಪಟ್ಟಣದಲ್ಲಿ ಮೂರು ವಾರಗಳಿಂದ ಜರುಗುತ್ತಿದ್ದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನ ಫೈನಲ್ ಪಂದ್ಯಾವಳಿ ಮೇ.24 ರಂದು ಜರುಗಲಿದೆ ಎಂದು ಆಯೋಜಕರ ಬಳಗ ತಿಳಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಫೈನಲ್ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ ಸಂಘಟಕರಲ್ಲೊಬ್ಬರಾದ ಕಾಮರಾಜ ಬಿರಾದಾರ, ಈಗಾಗಲೇ ನಿಡಗುಂದಿ ತಂಡವನ್ನು ಸೋಲಿಸಿ ಆಲಮಟ್ಟಿ ತಂಡ ಫೈನಲ್ ತಲುಪಿದ್ದು ಮೇ.24 ರಂದು ಜರುಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮುದ್ದೇಬಿಹಾಳ ಹಾಗೂ