ಮುದ್ದೇಬಿಹಾಳ : ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬುಧವಾರ ಜಿಲ್ಲಾ ಮಟ್ಟದ ಸಕ್ಕರೆ ಇಳುವರಿ ಹಾಗೂ ತೂಕದ ಯಂತ್ರಗಳ ಪರಿಶೀಲನಾ ತಂಡ ಬುಧವಾರ ಭೇಟಿ ನೀಡಿ ಕಾರ್ಖಾನೆಯ ಕಾರ್ಯಾಚರಣೆಯನ್ನು ವೀಕ್ಷಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಆನಂದ ಕೆ., ರಾಜ್ಯ ಸರ್ಕಾರ ಆದೇಶಿಸಿತ ಹೆಚ್ಚುವರಿ ಪರಿಹಾರವನ್ನು ಕಾರ್ಖಾನೆಯಿಂದ ರೈತರಿಗೆ ಪಾವತಿಸಲಾಗುತ್ತಿದೆ.ಕಾರ್ಖಾನೆಯ ತೂಕದ ಯಂತ್ರದ ಕುರಿತು ಈಚೇಗೆ ರೈತರು ಆಕ್ಷೇಪಿಸಿದ್ದಕ್ಕೆ ಕಬ್ಬು ಪರೈಸುವ ರೈತರು, ರೈತಪರ ಸಂಘಟನೆ ಮುಖಂಡರು,ಅಧಿಕಾರಿಗಳನ್ನು ಕರೆದುಕೊಂಡು ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ.ತೂಕ ಅಳತೆ ಮಾಪನ ಅಧಿಕಾರಿಗಳು ತೂಕದ ಯಂತ್ರವನ್ನು ಪರಿಶೀಲನೆ ನಡೆಸಿದ್ದು ಕಾರ್ಖಾನೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಕಾರ್ಖಾನೆಗಳಲ್ಲೂ ರೈತರನ್ನೊಳಗೊಂಡ ಪರಿಶೀಲನಾ ಸಮೀತಿ ರಚಿಸಲಾಗಿದ್ದು ಕಾಲಕಾಲಕ್ಕೆ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಆಹಾರ ಪೂರೈಕೆ ಇಲಾಖೆ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಮಾತನಾಡಿ, ಬಾಲಾಜಿ ಸಕ್ಕರೆ ಕಾರ್ಖಾನೆಗೆ ರೈತರೊಂದಿಗೆ ಭೇಟಿ ನೀಡಿದ್ದೇವೆ.ಪ್ರಯೋಗಾಲಯಕ್ಕೆ ಭೇಟಿ ನೀಡಿ ಸಕ್ಕರೆ ಅಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ರೈತರಿಗೆ ಖುದ್ದಾಗಿ ಮನವರಿಕೆ ಮಾಡಿಕೊಡಲಾಗಿದೆ.ಸರ್ಕಾರ ಸೂಚಿಸಿದ ದರವನ್ನು ಕಾರ್ಖಾನೆಯವರು ನೀಡುತ್ತಿದ್ದು ಈಗಾಗಲೇ ನ.30ರವರೆಗಿನ ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿಸಲಾಗಿದೆ.132 ಕೋಟಿ ರೂ.ಗಳಲ್ಲಿ 84 ಕೋಟಿ ರೂ.ಬಿಲ್ ಪಾವತಿಸಲಾಗಿದ್ದು ಡಿ.10ರವರೆಗೆ ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿಸುವ ಕಾರ್ಯ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಕಾರ್ಖಾನೆ ಅಧ್ಯಕ್ಷ ಹಣಮಂತಗೌಡ ಪಾಟೀಲ, ನಿರ್ದೇಶಕರಾದ ರಾಹುಲ್‌ಗೌಡ ಪಾಟೀಲ,ಅಧಿಕ ಪಾಟೀಲ,ಶ್ರೀನಿವಾಸ ಅರಕೇರಿ,ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವಿವೇಕ,ಉಪ ವಿಭಾಗಾಧಿಕಾರಿ ಗುರುನಾಥ ದಡ್ಡಿ,ಕೃಷಿ ಇಲಾಖೆ ಅಧಿಕಾರಿ ಎಸ್.ಡಿ.ಭಾವಿಕಟ್ಟಿ, ನಿಡಗುಂದಿ ತಹಶೀಲ್ದಾರ್ ಎ.ಡಿ.ಅಮರವಾಡಗಿ, , ಆಹಾರ ಶಿರಸ್ತೇದಾರ ಶಶಿಧರ ಕುಮಚಗಿ, ಆಹಾರ ಇಲಾಖೆ ನಿರೀಕ್ಷಕ ಎಸ್.ಎ.ಗುಮತಿಮಠ ,ಕಂದಾಯ ನಿರೀಕ್ಷಕ ಪವನ ತಳವಾರ,ರೈತ ಸಂಘಟನೆಯ ಮುಖಂಡರಾದ ಸೋಮನಗೌಡ ಪಾಟೀಲ, ಬಾಲಪ್ಪಗೌಡ ಲಿಂಗದಳ್ಳಿ, ಅರವಿಂದ ಕುಲಕರ್ಣಿ,ಶಿವನಗೌಡ ಜಲಪೂರ ಸೇರಿದಂತೆ ಕಂದಾಯ,ಆಹಾರ ಇಲಾಖೆ ಅಧಿಕಾರಿಗಳು ಇದ್ದರು.







