ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್‌ಗೆ ತೆರಳುವ ರಸ್ತೆ ಮುಂದೆ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಪ್ರತಿಷ್ಠಾಪನೆಗೆ ವೃತ್ತದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾನುವಾರ ತಾಲ್ಲೂಕು ಕುರುಬರ ಸಂಘದ ಪದಾಧಿಕಾರಿಗಳೊಂದಿಗೆ ವೃತ್ತದ ಕಾಮಗಾರಿ, ರೂಪುರೇಷೆಯ ಕುರಿತು ಇಂಜಿನಿಯರ್‌ರೊAದಿಗೆ ಚರ್ಚೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಸ್ತೆ ನಿರ್ಮಾಣದ ವೇಳೆ ಅಶೋಕಾ ಬಿಲ್ಡಕಾನ್ ಕಂಪನಿಯವರು ವೃತ್ತದ ನಿರ್ಮಾಣಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದ್ದರು.ಆದರೆ ಈವರೆಗೂ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.ಹೀಗಾಗಿ ಸಮಾಜದವರೇ ಮುಂದೆ ನಿಂತು ರಾಯಣ್ಣನವರ ವೃತ್ತದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ.ಆದಷ್ಟು ಬೇಗನೇ ವೃತ್ತದ ಕಾಮಗಾರಿ ಪೂರ್ಣಗೊಂಡು ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸುವ ಕಾರ್ಯ ಮಾಡಲಾಗುವುದು.ಬಸವೇಶ್ವರ ಹಾಗೂ ಅಂಬೇಡ್ಕರ್ ವೃತ್ತಗಳ ಎತ್ತರ ಗಮನಿಸಿ ರಾಯಣ್ಣನವರ ವೃತ್ತ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲ ಎಸ್.ಎಸ್.ಪೂಜಾರಿ, ಮುಖಂಡರಾದ ಹಣಮಂತ ಮೇಲಿನಮನಿ, ಸಂಗಣ್ಣ ಮೇಲಿನಮನಿ,ಸಂತೋಷ ನಾಯ್ಕೋಡಿ,ನಾಗಪ್ಪ ರೂಢಗಿ,ಬಿ.ಎಸ್.ಮೇಟಿ ಮೊದಲಾದವರು ಇದ್ದರು.







