ಮುದ್ದೇಬಿಹಾಳ : ಎಲ್ಲಾ ಪಾಲಕರು,ಪೋಷಕರು ಐದು ವರ್ಷದ ಒಳಗಿನ ಮಕ್ಕಳ ಆರೋಗ್ಯದ ಹಾಗೂ ದೇಹದ ಸದೃಢತೆಗಾಗಿ ಪಲ್ಸ್ ಪೊಲೀಯೊ ಲಸಿಕೆಯನ್ನು ತಪ್ಪದೆ ಹಾಕಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕುಂಬಾರ ಹೇಳಿದರು.
ತಾಲ್ಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಭಾನುವಾರ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೇ ವೇಳೆ ಪಲ್ಸ್ ಪೋಲಿಯೊ ಕುರಿತು ಅಂಗನವಾಡಿ ಕಾರ್ಯಕರ್ತರಾದ ಶಾಂತಮ್ಮ ಈಳಗೇರ,ಬಸಮ್ಮ ಸೋಮನಾಳ,ಸಾವಿತ್ರಿ ನಾಲತವಾಡ ಅವರು ತಮ್ಮ ಮಗುವಿಗೆ ಪಲ್ಸ್ ಪೋಲಿಯೊ ಎರಡು ಹನಿ ತಪ್ಪದೆ ಹಾಕಿಸಿಕೊಳ್ಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಶಾ ಕಾರ್ಯಕರ್ತರಾದ ನೀಲಮ್ಮ ಪಾಟೀಲ, ಸುಮಂಗಲಾ ಹಿರೇಮಠ,ಶಿವಲೀಲಾ ಪತ್ತಾರ,ಅಂಗನವಾಡಿ ಸಹಾಯಕಿರಾದ ಗೌರಮ್ಮ ನಾಲತವಾಡ, ಶಾಂಭವಿ,ಪಾಟೀಲ,ಕವಿತಾ ಸೋಮನಾಳ,
ಸೇರಿದಂತೆ ಪಾಲಕರು ಮಕ್ಕಳು ಭಾಗವಹಿಸಿದ್ದರು.







