ಮುದ್ದೇಬಿಹಾಳ : ತಾಲ್ಲೂಕಿನ ಯರಝರಿ ವಿವಿಧೋದ್ಧೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್ 2026-31ರ ಅವಧಿಯ ನೂತನ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ ಸೋಮವಾರ ಸಂಘದ ಕಚೇರಿಯಲ್ಲಿ ನಡೆಸಲಾಯಿತು.
ಅಧ್ಯಕ್ಷ ಸ್ಥಾನಕ್ಕೆ ಬೀರಪ್ಪ ಕನ್ನೂರ, ಉಪಾಧ್ಯಕ್ಷ ಸ್ಥಾನಕ್ಕೆ ಕಾಮಣ್ಣ ನಾಗರಬೆಟ್ಟ ಇಬ್ಬರೆ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಬೀರಪ್ಪ ಜಿ.ಕನ್ನೂರ, ಉಪಾಧ್ಯಕ್ಷರಾಗಿ ಕಾಮಣ್ಣ ಹ.ನಾಗರಬೆಟ್ಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಉತ್ನಾಳ ಘೋಷಿಸಿದರು.
ನಿರ್ದೇಶಕರಾದ ಪಿರಗಣ್ಣ ನರಸಣಗಿ, ಬಸವರಾಜ ತಳ್ಳಿಕೇರಿ,ಜುಮ್ಮಣ್ಣ ಹುಲ್ಲೂರ,ಭೀಮಣ್ಣ ಕೋಳೂರ,ಫಾತೀಮಾ ಹಡಗಲಿ, ಶಾಂತಮ್ಮ ಮಠ, ಶಿವಪ್ಪ ಕನ್ನೂರ, ಲಕ್ಷö್ಮಣ ಪಟ್ಟಣದ, ಸಿದ್ದಪ್ಪ ಚಲವಾದಿ ಆಯ್ಕೆಯಾದರು.
ಮುಖಂಡರಾದ ಮಲ್ಲು ಅಪರಾಧಿ,ಮಂದೆಪ್ಪ ಗುರಿಕಾರ,ಲಕ್ಕಪ್ಪ ಹುಲ್ಲೂರ, ಸೋಮಪ್ಪ ಕನ್ನೂರ, ನಿಂಗಪ್ಪ ಹುಲ್ಲೂರ, ಬಸಪ್ಪ ಕೌಲಗಿ, ಕುಮಾರ ಯಲಗೋಡ,ಸಾಹೇಬಪಟೇಲ್ ಮೊಕಾಶಿ, ಬಸವರಾಜ ನರಸಣಗಿ,ಸಿಇಒ ಮಾಳಪ್ಪ ಕನ್ನೂರ, ಸಿಬ್ಬಂದಿ ಮೈಬೂಬ ಚಪ್ಪರಬಂದ,ಶೃತಿ ಕನ್ನೂರ,ಶರೀಫ ತಾಳಿಕೋಟಿ ಇದ್ದರು.







