ಬೆಂಗಳೂರು: ಕನ್ನಡದ ಖ್ಯಾತ ಸಿರಿಯಲ್ ನಟಿ ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ಮೂಲಕ ಜೀವ ಹೂವಾಗಿದೆ, ಸಂಘರ್ಷ, ನೀನಾದೆ ನಾ ಧಾರವಾಹಿ ನಟಿ ಇನ್ನಿಲ್ಲವಾಗಿದ್ದಾರೆ.
ಕೊಟ್ಟೂರಿನ ನಂದಿನಿ ಸಿಎಂ ಅವರು ಧಾರವಾಹಿಗಳ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದ ನಟಿ. ಕನ್ನಡದ ಜೀವ ಹೂವಾಗಿದೆ. ಸಂಘರ್ಷ, ಮಧುಮಗಳು, ನೀನಾದೆ ನಾ ಧಾರವಾಹಿಗಳಲ್ಲಿ ಅವರು ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದರು.
ಕನ್ನಡವಲ್ಲದೇ ತಮಿಳು, ತೆಲುಗಿನಲ್ಲಿಯೂ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಂತ ನಟಿ ನಂದಿನಿ ಆಗಿದ್ದಾರೆ. ಗೌರಿ ಧಾರವಾಹಿಯಲ್ಲಿ ವಿಷ ಕುಡಿಯುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಂತ ನಂದಿನಿ, ಇದೀಗ ರಿಯಲ್ ಲೈಫ್ ನಲ್ಲಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.







