ನಾಲತವಾಡ : ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳಿನಿAದ ಒಳ್ಳೆಯ ಸೇವೆ ನೀಡುತ್ತಿದ್ದ ವೈದ್ಯ ರಂಗನಾಥ ಅವರನ್ನು ವರ್ಗಾವಣೆ ಮಾಡಿರುವ ಕ್ರಮವನ್ನು ವಿರೋಧಿಸುವುದಾಗಿ ನವ ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಪದಾಧಿಕಾರಿಗಳು ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
ನಾಲತವಾಡ ಪಟ್ಟಣದಿಂದ ಮುದ್ದೇಬಿಹಾಳಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ವೇದಿಕೆ ಅಧ್ಯಕ್ಷ ಮೈಬೂಬ ಕುಳಗೇರಿ, ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಗೆ ವೈದ್ಯರು ಬರುವುದಕ್ಕೆ ಹಿಂದೇಟು ಹಾಕುತ್ತಾರೆ.ಇಂತಹ ಸಮಯದಲ್ಲಿ ಜನರಿಂದ ಒಳ್ಳೆಯ ವೈದ್ಯರು ಎಂದು ಕರೆಯಿಸಿಕೊಂಡಿರುವ ಡಾ.ರಂಗನಾಥ ವೈದ್ಯ ಅವರ ಸೇವೆಯನ್ನು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಎಂ.ಪಿ.ಹಿAಗೋಲೆ ಮನವಿ ಪತ್ರ ಸ್ವೀಕರಿಸಿದರು.
ವೇದಿಕೆಯ ಕಾರ್ಯಕರ್ತರಾದ ಮೈಬೂಬ ಕುಳಗೇರಿ, ಯಲ್ಲಪ್ಪ ಮುದ್ದೇಬಿಹಾಳ, ಅಶೋಕ ಗೊಲ್ಲರ, ರಾಜು ಆಲಮೇಲ,ರಾಜು ಮನಗೂಳಿ,ರವಿ ದೇವರಹಿಪ್ಪರಗಿ,ರಾಮು ಕುಂಟೋಜಿ,ಆಕಾಶ ಹೂವಿನಹಿಪ್ಪರಗಿ,ಸಂತೋಷ ಹುಣಸಗಿ ಇದ್ದರು.
ವೈದ್ಯರ ವರ್ಗಾವಣೆ ರದ್ದುಗೊಳಿಸಿ:
ನಾಲತವಾಡ ಪಟ್ಟಣ ಬೆಳೆದಿದ್ದು ಸುತ್ತಮುತ್ತಲಿನ ನಲವತ್ತು ಹಳ್ಳಿಗಳ ಬಡವರಿಗೆ ಸರಕಾರಿ ಆಸ್ಪತ್ರೆಯೇ ಆಸರೆಯಾಗಿದೆ.ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಡಾ.ರಂಗನಾಥ ವೈದ್ಯರನ್ನು ಯಾವುದೇ ಕಾರಣಕ್ಕೂ ಬೇರೆಡೆ ವರ್ಗಾಯಿಸಬಾರದು ಎಂದು ಯುವಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಆಗ್ರಹಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಗರ್ಭಿಣಿಯರು,ಬಾಣಂತಿಯರಿಗೆ ಒಳ್ಳೆಯ ಸೇವೆಗೆ ಹೆಸರಾಗಿರುವ ವೈದ್ಯ ಅವರನ್ನು ವರ್ಗಾವಣೆ ಮಾಡಿರುವ ಕ್ರಮ ಸರಿಯಲ್ಲ.ಅದನ್ನು ರದ್ದುಗೊಳಿಸಬೇಕು.ಇಲ್ಲಿದದ್ದರೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.







