ಮುದ್ದೇಬಿಹಾಳ : ತಾಲ್ಲೂಕಿನ ಗುಡಿಹಾಳ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ-2 ಉದ್ಘಾಟನಾ ಸಮಾರಂಭವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರು ಸಂಗಮೇಶ ನವಲಿ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಬೇಕಾದ ಆಟಿಕೆಗಳನ್ನು ಹಾಗೂ ಸೌಲಭ್ಯಗಳನ್ನು ಸವಲತ್ತುಗಳನ್ನು ಮೇಲಾಧಿಕಾರಿಗಳು ಒದಗಿಸಿಕೊಡಲು ವಿನಂತಿಸಿದರು.
ಅಂಗನವಾಡಿ ಕಾರ್ಯಕರ್ತೆಯರಾದ ಎಲ್ಲಮ್ಮ ಉತಾಳೆ, ಅಂಗನವಾಡಿ ಸಹಾಯಕಿ ಶರಣಮ್ಮ ಜೋಗಿನ, ಕಾರ್ಯಕರ್ತೆ ಪ್ರಿಯಾ ಬಿರಾದಾರ, ಸಹ ಶಿಕ್ಷಕಿ ಲಕ್ಷ್ಮೀ ಮನ್ನಿಕಟ್ಟಿ, ಅತಿಥಿ ಶಿಕ್ಷಕರಾದ ಕಾಶೀಬಾಯಿ ಹಾದಿಮನಿ, ಅಕ್ಷರ ದಾಸೋಹ ಯೋಜನೆಯ ಮುಖ್ಯ ಅಡುಗೆಯವರಾದ ರುದ್ರಮ್ಮ ಜಲಪುರ, ಹಣಮವ್ವ ಹಡಲಗೇರಿ ಇದ್ದರು.ಮಕ್ಕಳಿಗೆ ಹೊಸ ವರ್ಷದ ನಿಮಿತ್ಯ ಸಿಹಿ ಹಂಚಲಾಯಿತು.







