ಮುದ್ದೇಬಿಹಾಳ : 2026ರ ಸಂಭ್ರಮವನ್ನು ಮದ್ಯದೊಂದಿಗೆ ಸಂಭ್ರಮಿಸುವವರಿಗೆ ಇಲ್ಲಿನ ಪೊಲೀಸರು ಶಾಕ್ ನೀಡಿದ್ದಾರೆ.ಡಿ.31ರ ರಾತ್ರಿಯವರೆಗೂ ಕುಡಿದು ವಾಹನ ಚಾಲನೆ, ನಿಗದಿತ ಸಂಖ್ಯೆಗಿoತ ಹೆಚ್ಚು ಪ್ರಯಾಣಿಕರ ಸಾಗಾಟ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯ ಅಡಿ ಒಟ್ಟು 55 ಪ್ರಕರಣಗಳನ್ನು ದಾಖಲಿಸಿ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದವರ ಕಾನೂನು ಪಾಠದ ಮೂಲಕ ಕಿಕ್ ಇಳಿಸಿದ್ದಾರೆ.
ಡಿಸಿಜಿ ವೆಬ್ ನ್ಯೂಸ್‌ನೊಂದಿಗೆ ಮಾಹಿತಿ ಹಂಚಿಕೊoಡ ಪಿ.ಎಸ್.ಐ ಸಂಜಯ ತಿಪರೆಡ್ಡಿ, ನಮ್ಮ ಮೇಲಧಿಕಾರಿಗಳು ಸಾಧ್ಯವಾದಷ್ಟು ಶಾಂತಿಯುತ ಹಾಗೂ ಕಾನೂನು ಪರಿಧಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸುವವರಿಗೆ ಮುಕ್ತವಾಗಿರಲು ಸಲಹೆ ಮಾಡಿದ್ದು ಕಾನೂನು ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲು ಸೂಚನೆ ಇದ್ದ ಕಾರಣ ಹೊಸ ವರ್ಷಾಚರಣೆಗೂ ಮುನ್ನ ನಿಗದಿತ ಸಂಖ್ಯೆಗಿoತ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತಿದ್ದ 32 ವಾಹನಗಳ ಮೇಲೆ,ಸಂಚಾರ ನಿಯಮ ಉಲ್ಲಂಘಿಸಿದ 16 ಕಾರುಗಳು, ಮದ್ಯಪಾನ ಮಾಡಿ ದ್ವಿಚಕ್ರ ಚಲಾಯಿಸುತ್ತಿದ್ದ ಏಳು ಜನರ ಮೇಲೆ ಪ್ರಕರಣ ದಾಖಲಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಹೊಸ ವರ್ಷದ ಸ್ವಾಗತದ ಅವಧಿಯಲ್ಲಿ ಯಾವುದೇ ಪ್ರಕರಣ ದಾಖಲಿಸಲಿಲ್ಲ.ಜನರ ಸಂಭ್ರಮಕ್ಕೆ ಪೊಲೀಸರು ಅಡ್ಡಿಯನ್ನುಂಟು ಮಾಡದೇ ಸೂಕ್ತ ಬಿಗಿ ಬಂದೋಬಸ್ತ್ ವಹಿಸಿದ್ದರು ಎಂದು ಮಾಹಿತಿ ನೀಡಿದರು.
ಸಿಪಿಐ ಮೊಹ್ಮದ ಫಸಿವುದ್ದೀನ, ಅಪರಾಧ ವಿಭಾಗದ ಪಿಎಸೈ ಆರ್.ಎಸ್.ಭಂಗಿ,ಪೊಲೀಸರು ಕಾರ್ಯಾಚರಣೆಯಲ್ಲಿದ್ದರು.







