ವಿಜಯಪುರ : ನಾನು ಯೋಗ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಹಾಗೆಂದು ನಾನು ಸಿದ್ಧರಾಮಯ್ಯ ಏಜೆಂಟ್ ಅಲ್ಲ,ಹಿಂದೆ ಸಿದ್ಧರಾಮಯ್ಯ ಕೆರೆ ತುಂಬಿದಾಗ ನಾನು ಧನ್ಯವಾದ ಹೇಳಿದ್ದೆ.ಪುಕ್ಸಟ್ಟೆ ಧನ್ಯವಾದ ಹೇಳಲು ಎಂದು ದುಡ್ಡು ಬೇಕಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ , ಚೆನ್ಮಮ್ಮ ಮೂರ್ತಿ ಉದ್ಘಾಟಿಸಿದ ಸಿಎಂ ಹಾಗೂ ಮೂರ್ತಿ ನಿರ್ಮಾಣಕ್ಕೆ ಕಾರಣರಾದ ಸಚಿವ ಎಂ ಬಿ ಪಾಟೀಲ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಅಭಿನಂದಿಸುವುದಾಗಿ ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಪೂರ್ವಜರು ಅಥರ್ಗಾದವರು.ಸಂಗೊಳ್ಳಿ ರಾಯಣ್ಣ ಭೂಮಿ ಬಿಜಾಪುರದ್ದೆ, ಚೆನ್ನಮ್ಮ ರಾಯಣ್ಣನ ಸಂಬAಧ ತಾಯಿ ಮಗನ ಸಂಬAಧ ಇದ್ದಂತೆ ಎಂದು ಹೇಳಿದರು.
ವೇದಿಕೆಯಲ್ಲಿ ಸಿಎಂ ಹೆಸರು,ಪಾಲಿಕೆ ಮೇಯರ್ ಕರಡಿ ಹಾಗೂ ಸಚಿವ ಎಂ.ಬಿ.ಪಾಟೀಲ್ ಹೆಸರು ಮಾತ್ರ ಯತ್ನಾಳ ತೆಗೆದುಕೊಂಡರು.







