ಮುದ್ದೇಬಿಹಾಳ : ನನ್ನ ಜಾತಿಯ ಮೇಲಿನ ಅಭಿಮಾನ ಧರ್ಮದ ಮೇಲೂ ಇರಬೇಕು.ಇಂದು ಅರ್ಧ ಮರ್ಧ ಕಲಿತವರಿಂದಲೇ ಸಮಾಜ ಹಾಳಾಗುತ್ತಿದೆ.ಯುವಕರು ಭಾರತ ಮಾತೆಯನ್ನು ಎದೆಯಲ್ಲಿಟ್ಟು ಪ್ರೀತಿಸಬೇಕೆ ಹೊರತು ಯಾರನ್ನೋ ಪ್ರೀತಿಸುವುದಕ್ಕೆ ಅಲ್ಲ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಹಿಂದೂ ಸಮ್ಮೇಳನ ಸಂಚಲನಾ ಸಮೀತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಹಿಂದು ಸಮ್ಮೇಳನದಲ್ಲಿ ಅವರು ಮಾತನಾಡಿದರು.
ನಿಜವಾದ ಸಿರಿವಂತಿಕೆ, ನಾಗರಿಕತೆಯನ್ನು ಕಲಿಸಿದ ದೇಶ ಭಾರತ.ಯಾರಿಗೂ ಟೀಕಿಸಬಾರದು, ಒಳ್ಳೆಯರಾಗಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಹಣಮಂತ ಮಳಲಿ, ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿದರೆ ಭಾರತದ ದೇಶಕ್ಕೆ ಟ್ರಂಪ್ ಬಂದು ಕಾಲಿಗೆ ಬೀಳುತ್ತಾನೆ.ನಮ್ಮಲ್ಲಿ ಒಡಕು. ನಿಶ್ಚಲವಾದ ಒಗ್ಗಟ್ಟು ದೇಶವಾಸಿಗಳು ಪ್ರದರ್ಶನ ಮಾಡಿದಾಗ ಮಾತ್ರ ಇನ್ನೊಂದು ದೇಶ ನಮ್ಮತ್ತ ತಿರುಗಿ ನೋಡುವುದಿಲ್ಲ. ಜನಸಂಖ್ಯೆ ನಿಯಂತ್ರಣ ಕಾನೂನು ಜಾರಿಗೆ ಮಾಡುವವರೆಗೂ ಜನಸಂಖ್ಯೆ ನಿಯಂತ್ರಣ ಮಾಡಬಾರದು. ಕನಿಷ್ಠ ಮೂರು ನಾಲ್ಕು ಮಕ್ಕಳಾದರೂ ಇರಲಿ. ದೇಶದ ಬಗ್ಗೆ ಹೆಮ್ಮೆ ಇರಬೇಕು. ಸೊನ್ನೆ,ಸಂಸ್ಕೃತ,ಯೋಗ, ಕೃಷಿ,ಸಂಗೀತ,ಬಟ್ಟೆ,ನೌಕಾಯನ,ಶಿಲ್ಪಿ ಕಲೆ, ಅಡುಗೆ ಕೊಟ್ಟಿದ್ದು ಭಾರತೀಯರು.ಆತ್ಮಸಾಕ್ಷಾತ್ಕಾರಕ್ಕೆ ಆಧ್ಯಾತ್ಮ ಕೊಟ್ಟಿದ್ದು ಭಾರತ. ಭಾರತದಲ್ಲಿ ಮಠಗಳಿರಲಿಲ್ಲವೆಂದರೆ ದೇಶ ಸ್ಮಶಾನವಾಗಬೇಕಾಗುತ್ತದೆ ಎಂದರು.
ಪಾಶ್ಚಿಮಾತ್ಯರ ಅನುಕರಣೆ ಮಾಡುವುದು ಬೇಡ. ವಿದೇಶಿ ವಸ್ತುಗಳನ್ನು ಖರೀದಿ ಮಾಡಬೇಡಿ. ಸಂಸ್ಕಾರ ಆಧಾರಿತ ಶಿಕ್ಷಣ ಕೊಡಬೇಕು.ಹಿಂದೂ ಧರ್ಮವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಆರ್ಥಿಕ ಸ್ಥಿತಿ ಉನ್ನತಿ ಇದೆ.ಆದರೆ ಆರೋಗ್ಯಕರ ಸ್ಥಿತಿ ಅವನತಿಯತ್ತ ಸಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಬಸವರಾಜ ನಾವದಗಿ, ವಕೀಲೆ ಜಯಶ್ರೀ ಸಾಲಿಮಠ ಮಾತನಾಡಿದರು.ಗುಂಡಕನಾಳದ ಗುರುಲಿಂಗ ಶ್ರೀ,ಯಂಕAಚಿಯ ಅಭಿನವ ರುದ್ರಮುನಿ ಸ್ವಾಮೀಜಿ, ತುಂಬಗಿಯ ಮಹಾಂತಲಿAಗ ಶ್ರೀ, ಪಡೇಕನೂರದ ಮಲ್ಲಿಕಾರ್ಜುನ ಸ್ವಾಮೀಜಿ, ಢವಳಗಿಯ ಘನಮಠೇಶ್ವರ ಸ್ವಾಮೀಜಿ, ಮುದ್ದೇಬಿಹಾಳ ಹೊಸಮಠದ ಅಮರೇಶ್ವರ ದೇವರು, ಶರಣ ಸೋಮನಾಳದ ಮಹದೇವಯ್ಯ ಶಾಸ್ತಿçÃ, ಲೊಟಗೇರಿಯ ಗುರುಮೂರ್ತಿ ಕಣಕಾಲಮಠ, ಕವಡಿಮಟ್ಟಿ ಬಸವಪ್ರಭು ಹಿರೇಮಠ, ಜಮ್ಮಲದಿನ್ನಿಯ ಸಿದ್ದಾರೂಢ ಸ್ವಾಮೀಜಿ, ನಾಲತವಾಡ ಪಂಪಾಪತಿ ಸ್ವಾಮೀಜಿ, ಕುಂಚಗನೂರದ ರಂಗನಾಥ ಸ್ವಾಮೀಜಿ, ವೇ.ಈರಯ್ಯ ಹಿರೇಮಠ, ಮಿಣಜಗಿಯ ಸೋಮಶೇಖರಯ್ಯ ಶ್ರೀ, ವಿವಿಧ ಸಮಾಜಗಳ ಅಧ್ಯಕ್ಷರುಗಳು ಇದ್ದರು.ವೆಂಕನಗೌಡ ಪಾಟೀಲ ಸ್ವಾಗತಿಸಿದರು.ಟಿ.ಡಿ.ಲಮಾಣಿ ನಿರೂಪಿಸಿದರು.







