ಮುದ್ದೇಬಿಹಾಳ : ಸತ್ಯದ ಪರವಾಗಿರುವ ವರದಿಗಳಿಗೆ ಸದಾ ಸಾಮಾಜಿಕವಾಗಿ ಸ್ಪಂದನೆ ಇದ್ದೇ ಇರುತ್ತದೆ.ವರದಿಯನ್ನು ಉತ್ಪೇಕ್ಷೆಯಾಗಿ ಮಾಡಿದರೆ ಅದು ಸಮಾಜದ ದಾರಿ ತಪ್ಪಿಸುವಂತಾಗುತ್ತದೆ ಎಂದು ತಂಗಡಗಿ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಮರೋಳ ಹೇಳಿದರು.
ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೆಬ್ಬಾಳ ಪಬ್ಲಿಸಿಟಿ ಹಾಗೂ ಜನರಕೂಗು ಡಿಜಿಟಲ್ ಸುದ್ದಿವಾಹಿನಿಯ ಕ್ಯಾಲೆಂಡರ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುದ್ರಣ ಮಾಧ್ಯಮದ ಜೊತೆಗೆ ಇಂದು ಡಿಜಿಟಲ್ ಮಾಧ್ಯಮಗಳು ತಮ್ಮ ಶಕ್ತಿ ಹೆಚ್ಚಿಸಿಕೊಂಡಿವೆ.ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದ ದೊಡ್ಡದಾದ ಯಾವುದೇ ಘಟನೆ ಕ್ಷಣಾರ್ಧದಲ್ಲಿ ನಮ್ಮ ಕೈ ಬೆರಳ ತುದಿಯಲ್ಲಿ ಸಿಗುವಂತೆ ತಂತ್ರಜ್ಞಾನ ಸುಧಾರಣೆಯಾಗಿದೆ ಎಂದರು.
ಪ್ರಥಮ ದರ್ಜೆ ಗುತ್ತಿಗೆದಾರರಾದ ರಾಜುಗೌಡ ಕೊಂಗಿ ಮಾತನಾಡಿ, ಬಡವರು,ಗ್ರಾಮೀಣರ ಜನಪರ ಸಮಸ್ಯೆಗಳ ಮೇಲೆ ಮಾಧ್ಯಮಗಳು ಬೆಳಕು ಚೆಲ್ಲಬೇಕು ಎಂದರು.
ಪ್ರಮುಖರಾದ ಮಹಾಂತೇಶ ಹೊಳಿ, ಶಿವನಗೌಡ ಕರಬಂಟನಾಳ, ಬಸವರಾಜ ಗಡೇದ , ವಿರೇಶ ಹೊಕ್ರಾಣಿ,ಈರಪ್ಪ ಶಾಸ್ತ್ರೀ, ರಾಜುಧಣಿ ದೇಶಮುಖ, ಜಿ.ಜಿ.ಗೌಡರ, ಮಲಕಪ್ಪ ಹೊನ್ನುಟಗಿ,ಶ್ರೀಶೈಲ ಅಳ್ಳಗಿ ಇದ್ದರು.





