ಮುದ್ದೇಬಿಹಾಳ : ಉತ್ತರ ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಯ ಮುನ್ನಾ ದಿನ ಪಟ್ಟಣದ ಮಾರುತಿ ನಗರದ ಗಣಪತಿ ಗುಡಿ ಹತ್ತಿರ ಇರುವ ಎಂ.ಆರ್.ಇ.ಎo ಇಂಟರ್‌ನ್ಯಾಶನಲ್ ಸ್ಕೂಲ್ ಹಾಗೂ ಭಾಗ್ಯವಂತಿ ಎಚ್.ಪಿ.ಎಸ್ ಶಾಲೆಯಲ್ಲಿ ಮಂಗಳವಾರ ಅದ್ದೂರಿಯಾಗಿ ಆಚರಿಸಲಾಯಿತು.
ಸಂಕ್ರಾಂತಿಯ ಸಂಭ್ರಮದ ಅಂಗವಾಗಿ ಉತ್ತರ ಕರ್ನಾಟಕದ ಬಗೆ ಬಗೆಯ ತಿನಿಸುಗಳು,ಆಹಾರ ಪದ್ಧತಿಯನ್ನು ಮಕ್ಕಳಿಗೆ ಪರಿಚಯಿಸುವ ಕಾರ್ಯವನ್ನು ಶಿಕ್ಷಕರು ಮಾಡಿದರು.ಶಾಲೆಯ ಮುಖ್ಯಗುರುಮಾತೆ ಅಮೃತಾ ಹಿರೇಮಠ ಮಾತನಾಡಿ, ನಮ್ಮ ಭಾಗದಲ್ಲಿ ಆಚರಣೆಯಲ್ಲಿರುವ ಸಂಕ್ರಾಂತಿಯ ವಿಶೇಷತೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ.ರೈತರು ಇಡೀ ಜಗತ್ತಿಗೆ ಅನ್ನ ಹಾಕುವ ದೇವರು.ಅವರನ್ನು ನೆನೆಸಿಕೊಳ್ಳುವ ಜೊತೆಗೆ ಸಂಕ್ರಮಣದ ಆಚರಣೆಯ ಕುರಿತು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ತಿಳಿವಳಿಕೆ ನೀಡುತ್ತಿದ್ದೇವೆ ಎಂದರು.
ಮಕ್ಕಳಿoದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ವೇಷಭೂಷಣ ಸ್ಪರ್ಧೆಗಳು ನಡೆದವು. ದೈಹಿಕ ಶಿಕ್ಷಣ ಶಿಕ್ಷಕರಾದ ಸಂಗಮ್ಮ ಹಿರೇಮಠ, ರೂಪಾ ಬಿರಾದಾರ,ತಬಸ್ಸುಮ ನಾಯ್ಕೋಡಿ, ಬಿ.ಪಿ.ಕೊಪ್ಪದ, ಶೋಭಾ ಹಿರೇಮಠ, ಐಶ್ವರ್ಯಾ ಸೀತಿಮನಿ, ಅರ್ಚನಾ ಮಾಲಗತ್ತಿ, ನಂದಿನಿ ಬಿಜ್ಜೂರ, ಸಿದ್ದಮ್ಮ ಸೋಮನಾಳ, ಶರಣಮ್ಮ ಕೋತಿ, ವೇದವತಿ ದೇವರೆಡ್ಡಿ, ಆರ್.ಪಿ.ಸಂಗಮ, ವಿದ್ಯಾರಾಣಿ ಗುರುಮಿ,ಸವಿತಾ ಮಠ, ಉಮಾ ಮಹೇಂದ್ರಕರ, ನೀಲಮ್ಮ ಹಿರೇಮಠ, ರಾಜೇಶ್ವರಿ, ರತ್ನಾ ಹಿರೇಮಠ, ಶಿವಲೀಲಾ ಬಿರಾದಾರ ಇದ್ದರು.





