ತಾಳಿಕೋಟೆ : ಮಕ್ಕಳಲ್ಲಿ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಅರಿವು ಮೂಡಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.
ತಾಲ್ಲೂಕಿನ ಮೈಲೇಶ್ವರದ ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ,ಪ್ರೌಢಶಾಲೆಯಲ್ಲಿ ಶುಕ್ರವಾರದಿಂದ ಆರಂಭಗೊAಡ ಎರಡು
ದಿನಗಳ ಬ್ರಿಲಿಯಂಟ್ ಕಲಾ ವೈಭವ-2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬ್ರಿಲಿಯಂಟ್ ಶಾಲೆ ನಮ್ಮ ಶೈಕ್ಷಣಿಕ ವಲಯದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅತ್ಯುತ್ತಮ ಸಾಧನೆ ತೋರುತ್ತಿದೆ. ರಾಜ್ಯಮಟ್ಟದಲ್ಲಿ ಒಂದಾದರೂ ಸ್ಥಾನವನ್ನು ಈ ಶಾಲೆಯ ಮಕ್ಕಳು ಪಡೆದುಕೊಳ್ಳುತ್ತಾ ಬರುತ್ತಿರುವುದು ಇಲ್ಲಿಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ಧಮ್ಮೂರಮಠ ಮಾತನಾಡಿ, ತಾಳಿಕೋಟೆ ಸಾಮರಸ್ಯದ ಬದುಕಿಗೆ ಪ್ರಮುಖವಾದ ಘಟ್ಟವಾಗಿದೆ. ಈ ಸಂಸ್ಥೆ 1996 ರಲ್ಲಿ ಸಣ್ಣ ಕೋಣೆಯಲ್ಲಿ ಪ್ರಾರಂಭಗೊAಡಿತು. ಆ ಸಮಯದಲ್ಲಿ ಸ್ಥಿತ್ಯಂತರ ಕಾಲವಾಗಿತ್ತು.ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿಗೆ ಆದೇಶಿಸಿದ ಸಮಯದಲ್ಲಿ ಖಾಸಗಿ ಶಾಲೆಗೆ ಅನುಮತಿ ಸಿಗುತ್ತಿರಲಿಲ್ಲ. ಅಂದಿನಿAದ ಇಂದು ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಇತ್ತೋ ಇಂದು ಶಿಕ್ಷಕರ ಸಂಖ್ಯೆ ಇದೆ ಎಂಬುದು ಹೆಮ್ಮೆಯ ಸಂಗತಿ. ಭಾರತೀಯ ಪರಂಪರೆ ಪವಿತ್ರವಾದಂತಹದ್ದು ಈ ನೆಲದ ಸಂಸ್ಕೃತಿಯನ್ನು ಉಳಿಸಿಕೊಡುವ ನಿಟ್ಟಿನಲ್ಲಿ ಪಾದಪೂಜೆ ಮಾಡಿಸಿ ಸೈ ಎನಿಸಿಕೊಂಡಿದೆ.ಬ್ರಿಲಿಯAಟ್ ಸಂಸ್ಥೆ ಮಾದರಿಯ ಸಂಸ್ಥೆಯಾಗಿ ಮಾರ್ಪಟ್ಟಿದೆ. ಪಾಲಕರು ಮಕ್ಕಳಿಗೆ ಅಗಮ್ಯವಾಗಿರುವ ಆಸೆಯನು ಬಿತ್ತಬೇಕು. ಇದರಿಂದ ಮಕ್ಕಳಲ್ಲಿ ಸಾಧನೆಯ ಅಭಿರುಚಿ ಕಾಣಲು ಸಾದ್ಯವಾಗಲಿದೆ ಎಂದರು.
ಸರ್ವಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ಧನಗೌಡ ಮಂಗಳೂರ ಮಾತನಾಡಿ , ಬ್ರಿಲಿಯಂಟ್ ಸಂಸ್ಥೆ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ಸಂಸ್ಥೆಯಾಗಿದೆ. ಇದು ಎಲ್ಲರೂ ಹೆಮ್ಮೆಪಡಬೇಕಾಗಿದೆ ಇದಕ್ಕೆ ಪೋಷಕರು ಪೋಷಿಸಬೇಕಾಗಿದೆ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.ತಂದೆ ತಾಯಿಯ ಪಾದ ಪೂಜಾ ಕಾರ್ಯಕ್ರಮದೊಂದಿಗೆ ಶಿಕ್ಷಣ ದೊಂದಿಗೆ ಸಂಸ್ಕಾರ ಕಲಿಸುವಂತ ಕೆಲಸ ಮಾಡಿದ್ದಾರೆ. ಯಾವುದೇ ಕಾರಣಕ್ಕೆ ಮಕ್ಕಳ ಮುಂದೆ ಪೋಷಕರು ಕೆಟ್ಟ ಮಾತುಗಳು ಆಡಬೇಡಿ.ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಕೊಲ್ಹಾರ-ಬೇಲೂರಿನ ಪ್ರಭುಕುಮಾರ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎನ್.ಬು.ನಡುವಿನಮನಿ , ಸಂಪನ್ಮೂಲ ವ್ಯಕ್ತಿ ರಾಜು ಬಿಜಾಪುರ ಮಾತನಾಡಿದರು.
2025 ನೇ ಸಾಲಿನಲ್ಲಿ ಎಸ್.ಎಸ್.ಎಲ್ ಸಿಯಲ್ಲಿ ಸಾಧನೆ ತೋರಿದ ಭೀಮನಗೌಡ ಸುಗೂರ, ರಫೀಕ ಮೋರಟಗಿ, ಸುಮಿತ್ ಸುಣದಳ್ಳಿ, ಶ್ರವಣಕುಮಾರ ಪೂಜಾರಿ, ಅಶ್ವಿನಿ ಹಿರೇಮಠ,
ಆದರ್ಶ ವಿದ್ಯಾರ್ಥಿಗಳಾದ ಶಿವನಗೌಡ ಪೋಲಿಸಪಾಟೀಲ, ಸೃಷ್ಟಿ ಹೂಗಾರ ಅವರಿಗೆ ಸನ್ಮಾನಿಸಲಾಯಿತು.
ಎಂ.ಬಿ.ಬಿ.ಎಸ್ ಓದುತ್ತಿರುವ ಶಶಿಧರ ಬಿರಾದಾರ ತಮ್ಮ ತಂದೆ ದಿ.ಎನ್.ಎಮ್. ಬಿರಾದಾರ ಸ್ಮರಣಾರ್ಥ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ನಗದು ಬಹುಮಾನ ನೀಡಿ ಗೌರವಿಸುವುದಾಗಿ ಘೋಷಣೆ ಮಾಡಿ ಪ್ರಸಕ್ತ ವರ್ಷದಿಂದಲೇ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಎಸ್.ಎಸ್.ಹಿರೇಮಠ, ಕೆ.ಎಸ್.ಸಜ್ಜನ,ಸಂಸ್ಥೆ ಉಪಾಧ್ಯಕ್ಷ ಆರ್.ಬಿ.ನಡುವಿನಮನಿ,ಕಾರ್ಯದರ್ಶಿಗಳಾದ ಎಂ.ಬಿ.ಮಡಿವಾಳರ,ನಿರ್ದೇಶಕ ಎಸ್.ಎಚ್.ಪಾಟೀಲ,ಶಶಿಧರ ಬಿರಾದಾರ,ಎಲ್.ಎಂ.ಬಿರಾದಾರ,ಎನ್.ಎಸ್.ಗಡಗಿ,ಮುಖ್ಯಗುರು ವಿನಾಯಕ ಪಟಗಾರ ಇದ್ದರು.ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು.ಸಿದ್ಧನಗೌಡ ಪಾಟೀಲ ಸ್ವಾಗತಿಸಿದರು. ಎಸ್.ಸಿ.ಕರಡಿ ನಿರೂಪಿಸಿದರು.






