ಮುದ್ದೇಬಿಹಾಳ : ಸಿರಿವಂತರು ಸಿರಿವಂತಿಕೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರ ಕುರಿತು ಮಾತನಾಡುವುದು ಅಪರೂಪ.ಆದರೆ ಬಡವನ ಸ್ನೇಹ ಮಾಡಿದರೆ ಆತ ಬದುಕಿನ ಅನುಭವದ ಪಾಠ ಹೇಳುತ್ತಾನೆ ಎಂದು ಹಿರಿಯ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಹೇಳಿದರು.
ಪಟ್ಟಣದ ಗಣೇಶ ನಗರದಲ್ಲಿ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಅವರ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸದಾಶಿವ ಮಠ ಹಾಗೂ ಮೊಹ್ಮದ ರಫೀಕ ಶಿರೋಳ ಅವರ ತಂದೆಯವರು ನನಗೆ ಆಪ್ತರು.ಅವರ ಪುತ್ರರು ಇಂದು ಸರ್ಕಾರದ ನಾಮನಿರ್ದೇಶಿತ ಸ್ಥಾನಕ್ಕೆ ನೇಮಕವಾಗಿರುವುದು ನನಗೆ ಖುಷಿಯುಂಟು ಮಾಡಿದೆ.ಈ ನೇಮಕಕ್ಕೆ ಕಾರಣರಾದ ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಧನ್ಯವಾದ ಹೇಳುತ್ತೇನೆ.ಹೆತ್ತವರನ್ನು ಪ್ರೀತಿಯಿಂದ ಕಾಣುವ ಕಾರ್ಯ ಮಾಡಬೇಕು.ಇದು ನನ್ನ ಅಭಿಮಾನದ ಸನ್ಮಾನ ಎಂದರು.
ಎನ್.ಎಸ್.ಯೂ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯ ನಾಮನಿರ್ದೇಶಿತ ಸದಸ್ಯರಾಗಿ ನೇಮಕವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ದುಡಿದಿರುವ ಕಾರ್ಯಕರ್ತರಿಗೆ ಸ್ಥಾನ ನೀಡಿದ್ದು ಖುಷಿ ಉಂಟು ಮಾಡಿದೆ ಎಂದರು.
ಸನ್ಮಾನಿತಗೊAಡು ಮಾತನಾಡಿದ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ನಾಮನಿರ್ದೇಶಿತ ಸದಸ್ಯ ಮಹ್ಮದರಫೀಕ ಶಿರೋಳ , ಪಕ್ಷಕ್ಕಾಗಿ ನಾವು ದುಡಿದಿದ್ದು ಸಾರ್ಥಕ ಎನಿಸಿದೆ.ಶಾಸಕ ಸಿ.ಎಸ್.ನಾಡಗೌಡ ಅವರು ನಮ್ಮನ್ನು ಗುರುತಿಸಿ ಈ ಸ್ಥಾನಕ್ಕೆ ನೇಮಿಸಿರುವುದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.ಅಲ್ಲದೇ ನಮ್ಮನ್ನು ಕರೆದು ಸನ್ಮಾನಿಸಿದ ಇಬ್ರಾಹಿಂ ಮುಲ್ಲಾ ಅವರಿಗೂ ಋಣಿ ಎಂದರು.
ಹೆಸ್ಕಾA ಗ್ರಾಹಕ ಸಲಹಾ ಸಮೀತಿ ನಾಮನಿರ್ದೇಶಿತ ಸದಸ್ಯ ಸಿಕಂದರ ಜಾನ್ವೇಕರ ಮಾತನಾಡಿದರು.ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಶ್ರೀಶೈಲ ಪೂಜಾರಿ,ಪತ್ರಕರ್ತರಾದ ಶಂಕರ ಹೆಬ್ಬಾಳ, ಗುಲಾಮಮೊಹ್ಮದ ದಫೇದಾರ, ವಿಲಾಸ ಪಾಟೀಲ್, ಉದ್ಯಮಿದಾರ ಮೇಟಿಮಠ ಇದ್ದರು.



