ಮುದ್ದೇಬಿಹಾಳ : ಹನ್ನೆರಡನೇ ಶತಮಾನದಲ್ಲಿದ್ದ ವಚನಕಾರರು ರಚಿಸಿರುವ ವಚನಗಳಿಂದ ಸಮಾಜದ ಸುಧಾರಣೆ ಆಗಿದೆ.ನಂಬಿಕೆಗೆ ಮತ್ತೊಂದು ಹೆಸರು ನಿಜ ಶರಣ ಅಂಬಿಗರ ಚೌಡಯ್ಯನವರು ಎಂದು ತಹಶೀಲ್ದಾರ ಕೀರ್ತಿ ಚಾಲಕ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳಿಗೆ ವಚನಗಳ ಮೂಲಕ ಪರಿಹಾರ ಕಂಡುಕೊoಡವರು ಶರಣರು.ಅಂತಹ ವಚನಕಾರರಲ್ಲಿ ಅಂಬಿಗರ ಚೌಡಯ್ಯನವರು ಮುಂಚೂಣಿ ಸಾಲಿನಲ್ಲಿ ನಿಲ್ಲುತ್ತಾರೆ ಎಂದರು.
ಉಪನ್ಯಾಸಕರಾಗಿ ಚಿರ್ಚನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಟಿ.ಡಿ ಲಮಾಣಿ ಮಾತನಾಡಿ, ಅಂಬಿಗರ ಚೌಡಯ್ಯನವರ ಕ್ರಾಂತಿಕಾರಿ ಮಾತುಗಳನ್ನು ಮತ್ತು ಅತ್ಯಂತ ಕಠಿಣವಾದ ವಚನಗಳನ್ನು ರಚಿಸಿ ಸಮಾಜದ ಸುಧಾರಣೆಗೆ ಯತ್ನಿಸಿದರು.ಅವರಿಗೆ ನಿಜ ಶರಣ ಎಂದು ಬಿರುದು ಕೊಟ್ಟವರು ಬಸವಣ್ಣನವರು.ಸ್ವಾಭಿಮಾನದ ಬದುಕು ಅಂಬಿಗರ ಚೌಡಯ್ಯನವರದಾಗಿತ್ತು.ಅಂಬಿಗ ಸಮಾಜದ ಬಾಂಧವರು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.
ಬಿಇಒ ಬಿ.ಎಸ್.ಸಾವಳಗಿ ಮಾತನಾಡಿ, ಚೌಡಯ್ಯನವರ ಜೀವನ ಮತ್ತು ಅವರು ಬೆಳೆದು ಬಂದ ಹಾದಿ ಅವರ ವಚನಗಳು ಮತ್ತು 12 ನೇ ಶತಮಾನದ ಶರಣರ ಕುರಿತು ಮಾತನಾಡಿದರು.
ಸಮಾಜದ ಮುಖಂಡ ವೆಂಕಟೇಶ ಅಂಬಿಗೇರ,ಶಿಕ್ಷಕ ನಾಟೀಕಾರ ಮಾತನಾಡಿದರು. ತಾಲ್ಲೂಕು ಆಡಳಿತದಿಂದ ತಂಗಡಗಿ ರಸ್ತೆಯಲ್ಲಿರುವ ಚೌಡಯ್ಯನವರ ಮೂರ್ತಿಗೆ ಪೂಜೆ ಸಲ್ಲಿಸಿ ವಾದ್ಯಮೇಳದ ಮೂಲಕ ಬಸವೇಶ್ವರ ವೃತ್ತ,ಚನ್ನಮ್ಮ ದ್ವಾರದ ಮೂಲಕ ತಹಶೀಲ್ದಾರ ಕಚೇರಿಗೆ ಆಗಮಿಸಿ ಚೌಡಯ್ಯನವರ ಭಾವಚಿತ್ರಕ್ಕೆ ಅಧಿಕಾರಿಗಳು ಪೂಜೆ ಸಲ್ಲಿಸಿದರು.
ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ,ಅಕ್ಷರ ದಾಸೋಹ ನಿರ್ದೇಶಕ ಎಂ.ಎo.ಬೆಳಗಲ್ಲ, ಪಿಡಬ್ಲೂಡಿ ಇಲಾಖೆಯ ಮುತ್ತು ಢವಳಗಿ, ಆರೋಗ್ಯ ಇಲಾಖೆಯ ಅನಸೂಯಾ ತೇರದಾಳ, ಸಮಾಜದ ಅಧ್ಯಕ್ಷ ಚಂದ್ರಶೇಖರ ಅಂಬಿಗೇರ,ನಿAಗಣ್ಣ ಕಟ್ಟಿಮನಿ,ಸಂದೀಪ ಬಿದರಕೋಟಿ,ಸಾಯಬಣ್ಣ ಕಟ್ಟಿಮನಿ,ನಾಗೇಶ ದನಗೊಂಡ,ಶಿವಪ್ಪ ಚಿಮ್ಮಲಗಿ,ಭಿಮಣ್ಣ ಹಿರೇಅಂಬಿಗೇರ,ಹಣಮoತರಾಯ ನಾಟೀಕಾರ,ಚಂದ್ರಕಾoತ ಮನಗೂಳಿ,ಸಾಗರ.ಎಂ.ಉಕ್ಕಲಿ, ರಾಜಶೇಖರ ಮನಗೂಳಿ, ಸುನೀಲ್ ಎಂ.ಉಕ್ಕಲಿ,ಮೋಹನ ತಳವಾರ, ಸಿದ್ದಪ್ಪ ತಳವಾರ, ಸಂದೀಪ್ ಮನಗೂಳಿ, ಯಲ್ಲಪ್ಪ ಅಂಬಿಗೇರ,ಸಿದ್ದಣ ಶಾಸ್ತ್ರಿ,ಆನಂದ,ಸೇರಿದoತೆ ಸಮಾಜದ ಅನೇಕರು ಉಪಸ್ಥಿತರಿದ್ದರು.






