ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ : ಮೊಹ್ಮದ್‌ಜೀಶಾನ್ ರಿಸಾಲ್ದಾರ್‌ಗೆ ಚಿನ್ನದ ಪದಕ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ : ಮೊಹ್ಮದ್‌ಜೀಶಾನ್ ರಿಸಾಲ್ದಾರ್‌ಗೆ ಚಿನ್ನದ ಪದಕ

ಮುದ್ದೇಬಿಹಾಳ : ಗೋವಾ ರಾಜ್ಯದಲ್ಲಿ ನಡೆಯುತ್ತಿರುವ ಯೂಥ್ ಗೇಮ್ಸ್ ಇಂಡಿಯಾದಿoದ ರಾಷ್ಟ್ರಮಟ್ಟದ 10 ವರ್ಷದೊಳಗಿನ ಬಾಲಕರಿಗಾಗಿ ಹಮ್ಮಿಕೊಂಡಿದ್ದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ತಾಲ್ಲೂಕಿನ ಕುಂಟೋಜಿ ರಸ್ತೆಯಲ್ಲಿರುವ ಬಸವ ಇಂಟರ್‌ನ್ಯಾಶನಲ್ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿ ಮೊಹ್ಮದ್‌ಜಿಶಾನ್ ರಿಸಾಲ್ದಾರ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಮೊಹ್ಮದ್‌ಜಿಶಾನ್ 15 ಸೆಕೆಂಡ್ ನಲ್ಲಿ ನಿಗದಿ 100 ಮೀಟರ್ ಓಟವನ್ನು ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆದಿಕೊಂಡು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.ಏಪ್ರೀಲ್ ಮೇ ತಿಂಗಳಲ್ಲಿ ನೇಪಾಳದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತ ದೇಶವನ್ನು ಜೀಶಾನ್ ಪ್ರತಿನಿಧಿಸಲಿದ್ದಾರೆ ಎಂದು ಶಾಲೆಯ ಪ್ರಾಚಾರ್ಯೆ ಪ್ರಭಾ ಚಿನಿವಾರ ತಿಳಿಸಿದ್ದಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿರುವ ಮೊಹ್ಮದ್‌ಜೀಶಾನ್ ಪತ್ರಕರ್ತ ಸೂರಜ್ ರಿಸಾಲ್ದಾರ್ ಅವರ ಪುತ್ರ.

ಅಭಿನಂದನೆ : ಯೂಥ್ ಗೇಮ್ಸ್ ಕೌನ್ಸಿಲ್ ಇಂಡಿಯಾ ಆಯೋಜಿಸಿರುವ ಈ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವ ಮೊಹ್ಮದಜಿಶಾನ್ ಸಾಧನೆಗೆ ಕರ್ನಾಟಕ ಮುಸ್ಲಿಂ ಕೌನ್ಸಿಲ್, ಬಸವ ಇಂಟರ್‌ನ್ಯಾಶನಲ್ ಶಾಲೆಯ ಚೇರಮನ್ ಶಿವಕುಮಾರ ಹರ್ಲಾಪುರ ಹಾಗೂ ಮುದ್ದೇಬಿಹಾಳದ ಜನತೆ,ರಿಸಾಲ್ದಾರ್ ಕುಟುಂಬದವರು ಅಭಿನಂದಿಸಿದ್ದಾರೆ.

Latest News

Uncrossable Rush van Evoplay

In de wereld van online gokkasten zijn er vaker slots te

Il Giochi Avvincente Di MyStake Chicken Gioco

MyStake Chicken Gioco è un gioco di slot creato da uno

Uciechy i Wycieczki przez ulicę Kurczaka od InOut

Kiedy przychodzi na myśl sloty z nietypowymi tematami, wielu graczy niezwłocznie

ಸಾಂಸ್ಕೃತಿಕ ಕಾರ್ಯಕ್ರಮ:ಉರ್ದು ಹೆಣ್ಣು ಮಕ್ಕಳ ಶಾಲೆಗೆ ಪ್ರಥಮ

ಸಾಂಸ್ಕೃತಿಕ ಕಾರ್ಯಕ್ರಮ:ಉರ್ದು ಹೆಣ್ಣು ಮಕ್ಕಳ ಶಾಲೆಗೆ ಪ್ರಥಮ

ಮುದ್ದೇಬಿಹಾಳ ; ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರಕಾರಿ

ಪರೀಕ್ಷೆ ಬರೆಯಿರಿ ನಗದು ಹಣ ಗೆಲ್ಲಿ:                                      ಶಹಾಪೂರ : ಜ.25 ರಂದು ಆಕ್ಸಫರ್ಡ್ ಡೈಮಂಡ್ ಹಂಟ್ ಆವಾರ್ಡ್

ಪರೀಕ್ಷೆ ಬರೆಯಿರಿ ನಗದು ಹಣ ಗೆಲ್ಲಿ: ಶಹಾಪೂರ : ಜ.25 ರಂದು ಆಕ್ಸಫರ್ಡ್ ಡೈಮಂಡ್ ಹಂಟ್ ಆವಾರ್ಡ್

ಶಹಾಪೂರ : ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಿAದ ಜ.25ರಂದು ಶಹಾಪೂರದಲ್ಲಿ ಆಕ್ಸಫಡ ಪಾಟೀಲ್ಸ್ ಡೈಮಂಡ್ ಹಂಟ್ ಅವಾರ್ಡ್ ಸ್ಪರ್ಧೆ ಆಯೋಜಿಸಿದೆ ಎಂದು ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ತಿಳಿಸಿದ್ದಾರೆ. ಪರೀಕ್ಷೆಯನ್ನು 10ನೇ ತರಗತಿ ಪರೀಕ್ಷೆ ಬರೆದಿರುವ ರಾಜ್ಯ ಪರೀಕ್ಷಾ ಮಂಡಳಿ, ಐಸಿಎಸ್‌ಇ,ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದ್ದು ಇದನ್ನು ಪ್ರಥಮ ಪಿಯುಸಿ ಪರೀಕ್ಷೆಯ ಪ್ರವೇಶ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ.ಪರೀಕ್ಷೆ ಶಹಾಪೂರದ

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ;                                                ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಮುದ್ದೇಬಿಹಾಳ : ನಾವು ಶಿಕ್ಷಣ ಕೊಡುವ ನೆಪದಲ್ಲಿ ನಮ್ಮ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದೇವೆ.ಅವರು ಆಟಗಳಲ್ಲಿ ಭಾಗಿಯಾಗುವ ಸಮಯವನ್ನು ಕಡಿಮೆಗೊಳಿಸಿದ್ದೇವೆ.ಶೇ.95 ಪಡೆದುಕೊಂಡರೂ ಮಗುವಿಗೆ ಪ್ರೋತ್ಸಾಹಿಸದೇ ಶೇ.98 ತಗೆದುಕೊಳ್ಳುವವರೆಗೂ ನಮಗಿಂದು ಸಮಾಧಾನ ಇರುವುದಿಲ್ಲ.ಅಂಕಗಳ ಬೆನ್ನು ಹತ್ತಿದ್ದೇವೆ ಎಂದು ಗದಗನ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎ.ಎನ್.ನಾಗರಳ್ಳಿ ಹೇಳಿದರು. ಪಟ್ಟಣದ ಶ್ರೀ ಕೃಷ್ಣ ಮಂಗಲಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿoದ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಶೈಕ್ಷಣಿಕ