ನಾಲತವಾಡ : ಹೋಬಳಿ ವ್ಯಾಪ್ತಿಯ ಅಡವಿ ಸೋಮನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚವನಭಾವಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಸನ್ 2026-27 ಸಾಲಿನ ನರೇಗಾ ಯೋಜನೆಯ ಕಾಮಗಾರಿಯ ಪಟ್ಟಿ ತಯಾರಿಸಲು ವಿಶೇಷ ವಾರ್ಡ ಸಭೆ ಜರುಗಿತು.
.ಅಡವಿ ಸೋಮನಾಳ ಪಿಡಿಓ ನಿರ್ಮಲಾ ತೋಟದ ಮಾತನಾಡಿ, ರೈತರಿಗೆ,ಕೂಲಿ ಕಾರ್ಮಿಕರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಬರುವ ಕಾಮಗಾರಿಗಳಾದ ಕೃಷಿ ಹೊಂಡ,ಬದು ನಿರ್ಮಾಣ, ಚೆಕ್ ಡ್ಯಾಮ್ ದನದ ಕೊಟ್ಟಿಗೆ ಹಾಗೂ ವಿವಿಧ ಕಾಮಗಾರಿಗಳಿಗೆ ರೈತರು,ಸಾರ್ವಜನಿಕರು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಹೇಳಿದರು.
ಚವನಭಾವಿ ಗ್ರಾಮದಲ್ಲಿರುವ ಬಿದ್ದ ಮನೆಗಳ ಮಾಲೀಕರು ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ಜಾಗೆಗೆ ಒದಗುವ ತೆರಿಗೆಯ ಮೊತ್ತವನ್ನು ಭರಣಾ ಮಾಡಿಕೊಳ್ಳಲಾಗುತ್ತದೆ.ಅರ್ಜಿ ಸಲ್ಲಿಸಿದವರ ಮನೆಗಳ ಜಾಗೆಯನ್ನು ಖುದ್ದಾಗಿ ಪರಿಶೀಲನೆ ನಡೆಸಿ ಕರ ನಿರ್ಧಾರ ಮಾಡಲಾಗುತ್ತದೆ ಎಂದರು.
ಗ್ರಾಮೀಣ ಭಾಗದ ಪ್ರದೇಶಗಳ ಅಭಿವೃದ್ಧಿ ಆಗಬೇಕಾದರೆ ಸಾರ್ವಜನಿಕರು ತೆರಿಗೆ ಸರಿಯಾದ ಸಮಯಕ್ಕೆ ಕಟ್ಟಿದರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅವಕಾಶ ದೊರೆಯುತ್ತದೆ ಎಂದರು.
ಅಡವಿ ಸೋಮನಾಳ ಗ್ರಾಪಂ ಅಧ್ಯಕ್ಷೆ ಸಂಗಮ್ಮ ಹಂಚಿನಾಳ, ಗ್ರಾಪಂ ಸದಸ್ಯ ಆಂಜನೇಯ ಪವಾರ, ಗ್ರಾಪಂ ಕಾರ್ಯದರ್ಶಿ ಬಸನಗೌಡ ಬಿರಾದಾರ,ಸಿಬ್ಬಂದಿ ಬಲವಂತ ಜೋಗಿನ,ಬಸಣ್ಣ ಬಿರಾದಾರ, ಗುರುರಾಜ ಗುಡಗುಂಟಿ,ಅAಗನವಾಡಿ ಕಾರ್ಯಕರ್ತೆರಾದ ಇಂದಿರಾ ಕುಂಬಾರ,ಶಾAತಾ ಈಳಗೇರ,ಸಾವಿತ್ರಿ ನಾಲತವಾಡ, ಬಸಮ್ಮ ಸೋಮನಾಳ,ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.





